![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Mar 11, 2022, 5:09 PM IST
ಕಾನಾಹೊಸಹಳ್ಳಿ: ಶೈಕ್ಷಣಿಕ ಸವಲತ್ತು ಕೊರತೆಯ ನಡುವೆ ಗ್ರಾಮೀಣ ಭಾಗದ ಮಕ್ಕಳು ಆಯ್ಕೆಯಾಗಿ ಬಂದಿದ್ದಾರೆ. ಅವರಿಗೆ ವಿದ್ಯಾಲಯದಲ್ಲಿ ಅಗತ್ಯ ಸೌಲಭ್ಯಗಳು ನೀಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ಚಿಕ್ಕಜೋಗಿಹಳ್ಳಿ ಕೇಂದ್ರೀಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ಶಾಲಾಭಿವೃದ್ಧಿ ಸಮಿತಿಯ ನಾಮನಿರ್ದೇಶಕರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾಲಯದಲ್ಲಿ ಈವರೆಗೆ ಗುಣಮಟ್ಟದ ಶಿಕ್ಷಣ ನೀಡಲಾಗಿದೆ. ಅವಳಿ ಜಿಲ್ಲೆಯಲ್ಲಿ ನವೋದಯ ವಿದ್ಯಾಲಯು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. ವಿದ್ಯಾಲಯದಲ್ಲಿ ಮೂಲಸೌಕರ್ಯದ ಸಮಸ್ಯೆಗಳಿದ್ದರೆ ಕೂಡಲೇ ಸ್ಪಂದಿಸುವೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಕೋಚಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಪಾಲಕರ ಒತ್ತಾಯವಿದೆ ಎಂದು ಸದಸ್ಯರೊಬ್ಬರು ತಿಳಿಸಿದಾಗ ಕೂಡಲೇ ಪರಿಶೀಲಿಸಲಾಗುವುದು ಎಂದರು. ಸಭೆ ಬಳಿಕ ವಿದ್ಯಾಲಯದ ಅಟಲ್ ವಿಜ್ಞಾನ ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ನಂತರ ಕೋಟಿ ವೆಚ್ಚದ 4 ಕೊಠಡಿ ಮತ್ತು ಲ್ಯಾಬ್ ಉದ್ಘಾಟಿಸಿದರು.
ಡಿಡಿಪಿಐ ಜಿ.ಕೊಟ್ರೇಶ್, ಭೂದಾನಿ- ಮಾಜಿ ಶಾಸಕ ಕೆ.ವಿ. ರವೀಂದ್ರನಾಥಬಾಬು, ಡಾ| ಜನಾರ್ಧನ, ವೇದಾವತಿ, ಆರ್. ಆರ್. ಕಟ್ಟಿ, ನಾಗಭೂಷಣಗೌಡ, ಪಿ.ನಾಗರಾಜ್, ಗೀತಾ, ಡಾ| ಷಣ್ಮುಖ ನಾಯ್ಕ, ಎ.ಸುಂದರ್, ಯು.ಎಸ್. ಬಳ್ಳಾರಿ, ಪೂರ್ವ ಟಿ., ಚಂದ್ರಕಾಂತ ಇನಾಮದಾರ್ ಇನ್ನಿತರರಿದ್ದರು.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.