ಸಾವಯವ ಕೃಷಿಗೆ ಜಾಗತಿಕ ಬೇಡಿಕೆ: ಸಚಿವೆ ಶೋಭಾ

ರಾಜ್ಯ ಮಟ್ಟದ ಕೃಷಿ ಸಿರಿ -2022 ಉದ್ಘಾಟನೆ, ಸಾಧಕರಿಗೆ ಸಮ್ಮಾನ

Team Udayavani, Mar 12, 2022, 5:55 AM IST

ಸಾವಯವ ಕೃಷಿಗೆ ಜಾಗತಿಕ ಬೇಡಿಕೆ: ಸಚಿವೆ ಶೋಭಾ

ಮೂಲ್ಕಿ: ಸಾವಯುವ ಕೃಷಿಗೆ ಜಗತ್ತಿನಲ್ಲಿ ಅಪಾರ ಬೇಡಿಕೆ ಇದೆ. ಮಣಿಪುರ, ನಾಗಾಲ್ಯಾಂಡ್‌ ಮತ್ತು ತ್ರಿಪುರದಂತಹ ಸಣ್ಣ ರಾಜ್ಯಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಸಾವಯುವ ಕೃಷಿ ನಡೆಸುತ್ತಿದ್ದು, ಈ ಕೃಷ್ಯುತ್ಪನ್ನಗಳ ಖರೀದಿಗೆ ಅಮೆರಿಕದಂತಹ ದೇಶಗಳು ಮುಂಗಡ ಹಣ ನೀಡಿ ಖರೀದಿಗೆ ಮುಂದೆ ಬರುತ್ತಿರುವುದು ದೇಶಕ್ಕೆ ಹೆಮ್ಮೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಮೂಲ್ಕಿ ಕೊಲಾ°ಡಿನ ರಾಮಕೃಷ್ಣ ಪೂಂಜ ವೇದಿಕೆಯಲ್ಲಿ ಕೃಷಿ ಸಿರಿ -2022ರ ಉದ್ಘಾಟನೆ ಮತ್ತು ಸಾಧಕರ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದ ಜಿಡಿಪಿಗೆ ಕೃಷಿ ಶೇ. 22ರಷ್ಟು ಕೊಡುಗೆ ನೀಡುತ್ತಿದೆ. ಇದು ಪ್ರಧಾನಿ ಮೋದಿ ನೇತೃತ್ವದ ಸರಕಾರದ ಸತತ ಪ್ರಯತ್ನದ ಫಲ ಎಂದು ಶೋಭಾ ಹೇಳಿದರು. ಈ ಸಾಲಿನಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೆಚ್ಚು ಹಣ ಮೀಸಲಿರಿಸಿದ್ದಾರೆ. ಕೇಂದ್ರ ಸರಕಾರವು ರೈತರ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದರು.

9ನೇ ಸ್ಥಾನಕ್ಕೇರಿದ ಸಾಧನೆ
ಉನ್ನತ ಶಿಕ್ಷಣ ಪಡೆದ ಯುವಕರು ಕೃಷಿಗೆ ಇಳಿಯುವುದಿಲ್ಲ. ಆದರೆ ಆದರೆ ಕೃಷಿಯ ಮಾರ್ಕೆಟಿಂಗ್‌ ಮತ್ತು ಬಿಸಿನೆಸ್‌ ಅವಕಾಶ ಇದೆ ಎಂದಾಗ ಮುಂದೆ ಬರುತ್ತಾರೆ. ಇದು ಕೇಂದ್ರ ಸರಕಾರ ಕೃಷಿ ಪೂರಕ ಯೋಜನೆಗಳಿಗೆ ಬೆಂಬಲ ನೀಡಿರುವುದರ ಫಲ. ದೇಶ ಕೃಷ್ಯುತ್ಪನ್ನಗಳ ರಫ್ತಿನಲ್ಲಿ ಜಗತ್ತಿನಲ್ಲಿ 9ನೇ ಸ್ಥಾನಕ್ಕೆ ಏರಿರುವುದು ಸಾಧನೆ ಎಂದರು.
ಎರಡು ತಿಂಗಳು ಕೆಲಸ ಮಾಡಿ ವರ್ಷವಿಡೀ ಹೊಟ್ಟೆ ತುಂಬಾ ಊಟ ಮಾಡಲು ಸಿಗುವುದು ಕೃಷಿಯಿಂದ ಮಾತ್ರ. ಇದು ನಷ್ಟದ ಉದ್ಯಮ ಅಲ್ಲ, ಹೆಮ್ಮೆಯ ವಿಷಯ ಎಂದು ಬಂಟ್ವಾಳ ಶಾಸಕ ರಾಜೇಶ್‌ ನಾಯಕ್‌ ಹೇಳಿದರು.
ರೈತನಿಗೆ ಸೋಲು, ಕಷ್ಟ ಎಂಬುದಿಲ್ಲ. ಕೃಷಿಕರ ಮನೆಮಕ್ಕಳು ಬಹಳಷ್ಟು ಸಾಧನೆ ಮಾಡಿದ್ದಾರೆ, ಅವರು ಕೃಷಿಯ ಜತೆಗೇ ಬೆಳೆದವರು ಎಂಬುದನ್ನು ಮರೆಯಲಾಗದು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಮತ್ತು ಕೃಷಿ ಸಾಧಕ ಅಮೈ ಮಹಾಲಿಂಗ ನಾಯ್ಕ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

ಸಾಧಕರಿಗೆ ಸಮ್ಮಾನ
ಕೃಷಿ ಸಾಧಕರಾದ ಅಬೂಬಕ್ಕರ್‌ ಸಿದ್ದಿಕ್‌, ರಘುರಾಮ ಕುಲಾಲ್‌, ವಿಶೇಶ್ವರ ಸಜ್ಜನ, ನಿತ್ಯಾನಂದ ಕರ್ಕೆರಾ ಮತ್ತು ಶ್ರೀನಿವಾಸ್‌ ಗಾಣಿಗ ಅವರನ್ನು ಸಮ್ಮಾನಿಸಲಾಯಿತು. ವಿನಯ ಕೃಷಿ ಬೆಳೆಗಾರರ ಸಂಘಕ್ಕೆ ಕೃಷಿ ಇಲಾಖೆಯ 8 ಲಕ್ಷ ರೂ. ಸಹಾಯಧನದ ಟ್ರ್ಯಾಕ್ಟರ್‌ ಹಸ್ತಾಂತರಿಸಲಾಯಿತು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸೀತಾ, ಶಾಸಕ ಉಮಾನಾಥ ಕೋಟ್ಯಾನ್‌, ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಸಾಯಿರಾಧ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ್‌ ಶೆಟ್ಟಿ, ಶ್ರೀನಿವಾಸ್‌ ವಿ.ವಿ.ಯ ಉಪಕುಲಪತಿ ಪಿ. ರಮಣ್‌ ಐತಾಳ್‌, ಪಟ್ಲ ಫೌಂಡೇಶನ್‌ನ ಸತೀಶ್‌ ಶೆಟ್ಟಿ ಪಟ್ಲ, ಉಧ್ಯಮಿ ಸುಗ್ಗಿ ಸುಧಾಕರ್‌ ಶೆಟ್ಟಿ, ಸಮಿತಿಯ ಅಧ್ಯಕ್ಷ ವಿಜಯ ಶೆಟ್ಟಿ ಕೊಲಾ°ಡ್‌, ಸಂಚಾಲಕರಾದ ಕೃಷ್ಣ ಶೆಟ್ಟಿ ತಾರೆಮಾರ್‌, ಡಾ| ಅಣ್ಣಯ್ಯ ಕುಲಾಲ್‌, ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಸುಮಿತ್ರಾ ವಿಜಯ್‌ ಶೆಟ್ಟಿ ಉಪಸ್ಥಿರಿದ್ದರು. ಸಂಚಾಲಕ ಪ್ರಶಾಂತ್‌ ಪೈ ಸ್ವಾಗತಿಸಿದರು. ದಾಮೋದರ್‌ ಶರ್ಮಾ ನಿರೂಪಿಸಿದರು. ಸಂತೋಷ್‌ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.

ಟಾಪ್ ನ್ಯೂಸ್

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

courts

Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.