ಉಪೇಂದ್ರ ನಿರ್ದೇಶನದ ಹೊಸಚಿತ್ರ ‘ಯು’; ಪೋಸ್ಟರ್ ನಲ್ಲೇ ಟ್ವಿಸ್ಟ್ ನೀಡಿದ ಉಪ್ಪಿ
Team Udayavani, Mar 12, 2022, 8:50 AM IST
ನಟ ಕಂ ನಿರ್ದೇಶಕ ರಿಯಲ್‌ಸ್ಟಾರ್ ಉಪೇಂದ್ರ ಅವರ ಸಿನಿಮಾಗಳು ಅಂದರೇ ಸಹಜವಾಗಿಯೇ ಚಿತ್ರರಂಗದಲ್ಲಿ ಮತ್ತು ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇರುತ್ತದೆ. ಅದರಲ್ಲೂ ಉಪ್ಪಿ ನಿರ್ದೇಶನ ಮಾಡುವ ಸಿನಿಮಾ ಅಂದರಂತೂ, ಅಭಿಮಾನಿಗಳಿಗೆ ಅದರ ಮೇಲೆ ನಿರೀಕ್ಷೆ ಮತ್ತು ಕುತೂಹಲ ಎರಡೂ ಡಬಲ್ ಆಗಿರುತ್ತದೆ. ತಮ್ಮ ಸಿನಿಮಾದ ಟೈಟಲ್ ಮೂಲಕವೇ ಸಿನಿಪ್ರಿಯರಲ್ಲಿ ಒಂದು ಕುತೂಹಲ ಸೃಷ್ಟಿಸಿ, ಅದೇ ಕುತೂಹಲದಿಂದ ಅವರನ್ನು ಥಿಯೇಟರ್‌ವರೆಗೆ ಕರೆತರುವಂತೆ ಮಾಡುವುದು ನಿರ್ದೇಶಕ ಉಪ್ಪಿ ಅವರ ಸ್ಟೈಲ್.
“ಉಪ್ಪಿ-2′ ಸಿನಿಮಾದ ಬಳಿಕ ಪ್ರಜಾಕೀಯ ಮತ್ತು ಅಭಿನಯ ಅಂಥ ಬಿಝಿಯಾಗಿದ್ದ ಉಪೇಂದ್ರ ಮತ್ತೆ ಯಾವಾಗ ಡೈರೆಕ್ಟರ್ ಕ್ಯಾಪ್ ಧರಿಸುತ್ತಾರೆ ಎಂದು ಅಭಿಮಾನಿಗಳು ಕೂಡ ಪ್ರಶ್ನಿಸುತ್ತಿದ್ದರು. ಶೀಘ್ರದಲ್ಲಿಯೇ ನಿರ್ದೇಶನದ ಬಗ್ಗೆ ಅಪ್ಡೆಟ್ ಕೊಡುತ್ತೇನೆ ಎಂದು ಹೇಳುತ್ತಿದ್ದ ಉಪ್ಪಿ, ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್ ಮಾಡುವ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಅದರಂತೆ, ಶುಕ್ರವಾರ ಮಧ್ಯಾಹ್ನ ತಮ್ಮ ಟ್ವಿಟ್ಟರ್‌ನಲ್ಲಿ ಉಪ್ಪಿ ತಮ್ಮ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಮಾಡಿದ್ದಾರೆ
ಕೊಂಬಿರುವ ಕುದುರೆಯಲ್ಲಿ ಸವಾರಿ!
ಇನ್ನು ಉಪ್ಪಿ ಟ್ವಿಟ್ಟರ್‌ನಲ್ಲಿ ರಿವೀಲ್ ಮಾಡಿರುವ ಟೈಟಲ್‌ನಲ್ಲಿ ಇಂಗ್ಲೀಷ್ ಭಾಷೆಯಲ್ಲಿ “ಯು’ ಎಂಬ ಚಿಹ್ನೆಯಿದ್ದು, ಕುದುರೆ ಲಾಳದಂತೆ ಕೂಡ ಕಾಣುತ್ತದೆ. ತಕ್ಷಣಕ್ಕೆ ನೋಡುವವರಿಗೆ ಧಾರ್ಮಿಕ ಚಿಹ್ನೆಯಂತೆಯೂ ಕಾಣುವ ಸಿನಿಮಾದ ಟೈಟಲ್ ಅನ್ನು “ಯು’ ಮತ್ತು ಐ’ ಎಂದೂ ಓದಿಕೊಳ್ಳಬಹುದು. ಹಾಗಾಗಿ ಈ ಟೈಟಲ್ ಅನ್ನು ಪ್ರೇಕ್ಷಕರೇ ತಮ್ಮಿಷ್ಟ ಬಂದಂತೆ ಹೇಳಿಕೊಳ್ಳಬಹುದಾಗಿದೆ! ಟೈಟಲ್ ಪೋಸ್ಟರ್‌ನಲ್ಲಿ ಕೊಂಬಿರುವ ಕುದುರೆ ಮೇಲೆ ವಾರಿಯರ್ ಗೆಟಪ್‌ನಲ್ಲಿ ಉಪೇಂದ್ರ ಕುಳಿತಿದ್ದರೆ, ಒಂದು ಕಡೆ ಬಾಹ್ಯಾಕಾಶ, ಉಪಗ್ರಹಗಳು ಕಾಣುತ್ತವೆ. ಮತ್ತೂಂದೆಡೆ, ಊರು, ರೈಲು ಗಾಡಿ ಮತ್ತು ಗುಡ್ಡ ಬೆಟ್ಟದ ಪ್ರದೇಶ ಕಾಣಿಸುತ್ತದೆ.
ಇದನ್ನೂ ಓದಿ:ಪ್ರೇಕ್ಷಕರನ್ನು ಸೆಳೆಯುತ್ತಿರುವ ಯಕ್ಷಗಾನ “ಕಾಲಮಿತಿ’ ಪ್ರಯೋಗ
ಇನ್ನು ಈ ಪೋಸ್ಟರ್ ಮೇಲೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಇಂಗ್ಲಿಷ್ ಪದಗಳನ್ನು ಜೋಡಿಸಿ ಸಾಲು ಬರೆಯಲಾಗಿದ್ದು, “ಇವನು ಯಾವಾಗ ಬರ್ತಾನೆ ಗೊತ್ತಿಲ್ಲ, ಆದರೆ ಖಂಡಿತಾವಾಗಿ ಬರುತ್ತಾನೆ’ ಎನ್ನುವ ಅರ್ಥ ಕೊಡುವಂತಿದೆ ಈ ಸಾಲುಗಳು. ಸುಮಾರು ಏಳು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರಬಹುದು ಎಂಬ ಸಣ್ಣ ಸುಳಿವನ್ನು ಕೂಡ ಉಪ್ಪಿ ಈ ಪೋಸ್ಟರ್‌ನಲ್ಲಿ ಬಿಟ್ಟುಕೊಟ್ಟಿದ್ದಾರೆ.
In the film Industry, it is you who created the story Upendra, it is you who wrote the screenplay & dialogues for 33 years, it is you who directed through your whistles and claps. I dedicate this film to you the praja prabhu fans ???#nimmaupendra #uppidirects #laharifilms pic.twitter.com/h4UsatujyT
— Upendra (@nimmaupendra) March 11, 2022
ತಮ್ಮ ನಿರ್ದೇಶನದ ಹೊಸಚಿತ್ರದ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಉಪೇಂದ್ರ, “ಚಿತ್ರರಂಗದಲ್ಲಿ ಉಪೇಂದ್ರ ಅನ್ನೋ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇನ್ನು ಉಪೇಂದ್ರ ನಿರ್ದೇಶನದ ಈ ಹೊಸ ಸಿನಿಮಾವನ್ನು “ಲಹರಿ ಫಿಲಂಸ್’ ಮತ್ತು “ವೀನರ್ ಎಂಟರ್ ಟೈನರ್’ ಬ್ಯಾನರ್‌ನಲ್ಲಿ ಜಿ. ಮನೋಹರನ್ ಮತ್ತು ಕೆ. ಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಸದ್ಯ ಉಪ್ಪಿ ನಿರ್ದೇಶನದ ಹೊಸ ಸಿನಿಮಾದ ಟೈಟಲ್ ಮಾತ್ರ ಅನೌನ್ಸ್ ಆಗಿದ್ದು, ಸುಮಾರು ಏಳು ವರ್ಷದ ಬಳಿಕ ಉಪ್ಪಿ ನಿರ್ದೇಶನ ಮಾಡುತ್ತಿರುವುದು ಖಾತ್ರಿಯಾಗಿದೆ. ಉಳಿದಂತೆ ಈ ಹೊಸ ಸಿನಿಮಾದ ಇತರ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.