![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 12, 2022, 10:59 AM IST
ಒಂದೆಡೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳು ಥಿಯೇಟರ್ ನಲ್ಲಿ “ಜೇಮ್ಸ್’ ಅನ್ನು ಸ್ವಾಗತಿಸಲು, ಮತ್ತೂಂದೆಡೆ ಪವರ್‌ಸ್ಟಾರ್ ಜನ್ಮದಿನವನ್ನು ಸಂಭ್ರಮಿಸಲು ಒಟ್ಟಾಗಿತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲದರ ನಡುವೆಯೇ ಭಾರತೀಯ ಚಿತ್ರರಂಗದ ನಾಲ್ವರು ಪ್ರಖ್ಯಾತ ಗಾಯಕರು, ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ತಮ್ಮ ಗಾಯನದ ಮೂಲಕ ಅಪ್ಪು ಅವರಿಗೆ ಗೀತ ನಮನ ಸಲ್ಲಿಸಲಿದ್ದಾರೆ.
ಹೌದು, ಪುನೀತ್ ರಾಜಕುಮಾರ್ ಜನ್ಮದಿನದ ಅಂಗವಾಗಿ ಇದೇ ಮಾ. 15ಕ್ಕೆ “ಮಹಾನುಭಾವ ನೀನಯ್ಯಾ…’ ಎಂಬ ಹೆಸರಿನಲ್ಲಿ ಮ್ಯೂಸಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗುತ್ತಿದ್ದು, ಭಾರತೀಯ ಚಿತ್ರರಂಗದ ನಾಲ್ವರು ಪ್ರಖ್ಯಾತ ಗಾಯಕರಾದ ಸೋನು ನೀಗಂ, ಕೈಲಾಶ್ ಖೇರ್, ಶಂಕರ್ ಮಹಾದೇವನ್, ವಿಜಯ ಪ್ರಕಾಶ್ ಈ ಹಾಡಿಗೆ ಧ್ವನಿಯಾಗುವ ಮೂಲಕ ಪುನೀತ್ ಗುಣಗಾನ ಮಾಡಿದ್ದಾರೆ.
“ಮನೆಗೆ ಒಬ್ಬ ನಿನ್ನಂಥವನು ಇರಬೇಕು…’ ಎಂಬ ಸಾಲು ಗಳಿಂದ ಶುರುವಾಗುವ ಈ ಗೀತೆಗೆ ನಿರ್ದೇಶಕ ಕಾಂತ ಕನ್ನಲ್ಲಿ ಗೀತ ಸಾಹಿತ್ಯ ರಚಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಈ ವಿಡಿಯೋ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ಸುನೀಲ್ ಬಿ. ಎನ್ ಈ ಮ್ಯೂಸಿಕ್ ವಿಡಿಯೋ ಸಾಂಗ್ ನಿರ್ಮಿಸಿದ್ದಾರೆ. ಈ ವಿಡಿಯೋ ಹಾಡಿನಲ್ಲಿ ನಾಲ್ಕು ಗಾಯಕರ ಗಾಯನದ ಜೊತೆಗೆ ಅಪ್ಪು ಅವರ ಬದುಕಿನ ಅಪರೂಪದ ಕ್ಷಣಗಳನ್ನು ತೋರಿಸಲಾಗಿದೆ. ಕಾಂತ ಕನ್ನಲ್ಲಿ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಈ ಗೀತೆ ತೆರೆಮೇಲೆ ಮೂಡಿಬಂದಿದೆ. ಪುನೀತ್ ರಾಜಕುಮಾರ್ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದಾಗಿ ನಿರ್ಮಿಸುತ್ತಿರುವ ಸುಮಾರು 4 ನಿಮಿಷ ಅವಧಿಯ “ಮಹಾನುಭಾವ ನೀನಯ್ಯಾ…’ ಮ್ಯೂಸಿಕ್ ವಿಡಿಯೋ ಹಾಡಿಗೆ ಸೋನು ನೀಗಂ, ಕೈಲಾಶ್ ಖೇರ್, ಶಂಕರ್ ಮಹಾದೇವನ್, ವಿಜಯ ಪ್ರಕಾಶ್ ನಾಲ್ವರು ಗಾಯಕರೂ ಕೂಡ ಯಾವುದೇ ಸಂಭಾವನೆ ಪಡೆಯದೆ ಹಾಡಿಗೆ ಧ್ವನಿಯಾಗಿರುವುದು ಮತ್ತೂಂದು ವಿಶೇಷ.
ಇದನ್ನೂ ಓದಿ:‘ಜೇಮ್ಸ್’ ರಿಲೀಸ್ ಗೆ ಕೌಂಟ್‌ಡೌನ್
ಈ ಬಗ್ಗೆ ಮಾತನಾಡುವ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, “ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ನಾಲ್ವರು ಪ್ರಖ್ಯಾತ ಗಾಯಕರು ಒಬ್ಬ ಸೂಪರ್ ಸ್ಟಾರ್ ನಟನನ್ನು ಸ್ಮರಿಸಿ ಹಾಡಿರುವ ಹಾಡು ಇದಾಗಿದೆ. ಪುನೀತ್ ರಾಜಕುಮಾರ್ ಮೇಲಿನ ಪ್ರೀತಿಯಿಂದ ಯಾರೊಬ್ಬರೂ ಸಂಭಾವನೆ ಪಡೆಯದೇ ಈ ಗೀತೆಗೆ ಧ್ವನಿಯಾಗಿದ್ದಾರೆ. ಇತರ ತಂತ್ರಜ್ಞರು ಕೂಡ ಪುನೀತ್ ರಾಜಕುಮಾರ್ ಅವರಿಗೆ ಗೌರವಾರ್ಥವಾಗಿ ಈ ಹಾಡಿಗೆ ಕೆಲಸ ಮಾಡಿದ್ದಾರೆ. ಸುಮಾರು ಒಂದು ತಿಂಗಳ ಪರಿಶ್ರಮದ ಬಳಿಕ ಈ ಹಾಡು ಸಿದ್ಧವಾಗಿದೆ. ಈ ಕಾರ್ಯಕ್ಕೆ ಅನೇಕ ಅಭಿಮಾನಿಗಳು ಕೈ ಜೋಡಿಸುತ್ತಿದ್ದಾರೆ. ಈ ಹಾಡಿನಿಂದ ಬರುವ ಹಣವನ್ನು ಅಪ್ಪು ಅವರ ಸಾಮಾಜಿಕ ಕೆಲಸಗಳಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.
ಅಂದಹಾಗೆ, “ಮಹಾನುಭಾವ ನೀನಯ್ಯಾ…’ ಮ್ಯೂಸಿಕ್ ವಿಡಿಯೋ ಹಾಡು ಮಾರ್ಚ್. 15ರಂದು “ಸಂಭ್ರಮ್ ಸ್ಟುಡಿಯೋಸ್’ ಯು-ಟ್ಯೂಬ್ ಮ್ಯೂಸಿಕ್ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.