ಮಂಗಳೂರಿನಲ್ಲಿ ಬೈಕ್ನಲ್ಲಿ ವೀಲಿಂಗ್ ಸ್ಟಂಟ್: 7 ಮಂದಿ ಬಂಧನ
Team Udayavani, Mar 12, 2022, 12:01 PM IST
ಮಂಗಳೂರು: ಬೈಕ್ ನಲ್ಲಿ ವೀಲಿಂಗ್ ಸ್ಟಂಟ್ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು 7 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಿಶನ್ ಶೆಟ್ಟಿ, ಇಲ್ಯಾಸ್ ಜೀಯಾನ್, ಸಫ್ವಾನ್, ಮೊಹಮ್ಮದ್ ಅನೀಜ್, ತೌಸೀಫ್ ಮೊಹಮ್ಮದ್ ಮತ್ತು ಮಹಮ್ಮದ್ ಅನೀಜ್ ಎಂದು ಗುರುತಿಸಲಾಗಿದೆ.
ಇಲ್ಯಾಸ್ ಜಿಯಾನ್ ಎಂಬಾತ ಮಾ.1ರಿಂದ 6ರವರೆಗೆ ನೋಂದಣಿ ಸಂಖ್ಯೆ ಇಲ್ಲದ ಬೈಕ್ನಲ್ಲಿ ಇಬ್ಬರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲ ಬೈಲ್ ವರೆಗೆ ಹಾಗೂ ನಾಗುರಿಯಿಂದ ಸಂಚಾರ ದಕ್ಷಿಣ ಪೊಲೀಸ್ ಠಾಣೆಯವರೆಗೆ ವೀಲಿಂಗ್ ಸ್ಟಂಟ್ ಮಾಡುತ್ತಾ ಅಡ್ಡಾದಿಡ್ಡಿಯಾಗಿ ಇತರ ವಾಹನಗಳು, ಪಾದಚಾರಿಗಳಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಸವಾರಿ ಮಾಡುತ್ತಿದ್ದ. ಈ ಕುರಿತಾದ ವೀಡಿಯೋವನ್ನು ಮಾ.10ರಂದು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದ. ಇದು ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು.
ಪೊಲೀಸರು ಇಲ್ಯಾಸ್ ಜಿಯಾನ್, ಬೈಕ್ ಮಾಲಕ ಮತ್ತು ವೀಲಿಂಗ್ ಸ್ಟಂಟ್ ಅನ್ನು ವೀಡಿಯೋ ಮಾಡಿದ್ದ ಸರ್ಫಾನ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತರ 3 ಪ್ರಕರಣ ಅಡ್ಯಾರ್ ಸಮೀಪ ಮಾ.10ರಂದು ಬೈಕ್ನಲ್ಲಿ ವೀಲಿಂಗ್ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವೀಲಿಂಗ್ ಮಾಡಿದ ಕಿಶನ್ ಶೆಟ್ಟಿ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ ನಗರದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ವೀಲಿಂಗ್ ಮಾಡುತ್ತಿದ್ದ ತೌಸೀಫ್ ಮಹಮ್ಮದ್ ವಿರುದ್ಧ ಹಾಗೂ ವಾಮಂಜೂರು ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಮಹಮ್ಮದ್ ಆನೀಜ್ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸೈಬರ್ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ
Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ
Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?
Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ
Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
KSOU: ಪರೀಕ್ಷೆ ಸಮೀಪಿಸುತ್ತಿದ್ದರೂ ಮುದ್ರಿತ ಪಠ್ಯ ಸಿಗಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.