ವನಿತಾ ವಿಶ್ವಕಪ್: ಭಾರತಕ್ಕೆ ವಿಂಡೀಸ್ ಎದುರು ಅಮೋಘ ಗೆಲುವು; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
ಬ್ಯಾಟಿಂಗ್, ಬೌಲಿಂಗ್ ಬಲ ಪ್ರದರ್ಶಿಸಿದ ವನಿತೆಯರು
Team Udayavani, Mar 12, 2022, 1:45 PM IST
ಹ್ಯಾಮಿಲ್ಟನ್: ವನಿತಾ ವಿಶ್ವಕಪ್ ಪಂದ್ಯಾವಳಿಯ “ಲಕ್ಕಿ ಟೀಮ್’ ಆಗಿದ್ದ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಶನಿವಾರ 155 ರನ್ ಗಳ ಭಾರಿ ಗೆಲುವು ದಾಖಲಿಸಿ ಸಂಭ್ರಮಿಸಿದೆ. ಆಡಿದ 3 ಪಂದ್ಯಗಳಲ್ಲಿ2 ಪಂದ್ಯ ಗೆದ್ದು1 ಪಂದ್ಯ ಸೋತಿರುವ ಮಹಿಳೆಯರು ಅಂಕಪಟ್ಟಿಯಲ್ಲಿ 4 ಅಂಕ ಸಂಪಾದಿಸಿ +1.333 ರನ್ ರೇಟ್ ನೊಂದಿಗೆ ಅಗ್ರ ಸ್ಥಾನಕ್ಕೆ ಏರಿದ್ದಾರೆ.
ಭಾರತದ ಪಾಲಿಗೆ ಪಾಲಿಗೆ ಗೆಲುವು ಅನಿವಾರ್ಯವಾಗಿದ್ದ ವೇಳೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಮಿಥಾಲಿ ರಾಜ್ ಬಳಗ ವಿಂಡೀಸ್ ಮಹಿಳೆಯರ ದಾಳಿಯನ್ನು ದಂಡಿಸಿ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 317 ರನ್ ಗಳ ಅಮೋಘ ಮೊತ್ತ ಪೇರಿಸಿತ್ತು. ಆರಂಭಿಕ ಆಟಗಾರ್ತಿ ಸ್ಮ್ರತಿ ಮಂಧನ ಆಕರ್ಷಕ ಶತಕ ಸಿಡಿಸಿದರು. 119 ಎಸೆತಗಳಲ್ಲಿ 123 ರನ್ ಗಳಿಸಿದ ಅವರು ತಮ್ಮ ಇನ್ನಿಂಗ್ಸ್ ನಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನೂ ಹೊಡೆದಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಆಟಕ್ಕಿಳಿದ ಹರ್ಮ್ ಪ್ರೀತ್ ಕೌರ್ ಅವರು ಭರ್ಜರಿ ಶತಕ ಸಿಡಿಸಿ ತಂಡದ ಭಾರಿ ಮೊತ್ತಕ್ಕೆ ಕಾರಣರಾದರು. 107 ಎಸೆತಗಳಲ್ಲಿ 109 ರನ್ ಗಳಿಸಿದ ಅವರು 10 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಹೊಡೆದಿದ್ದರು.
ಉಳಿದಂತೆ ಆರಂಭಿಕ ಆರಗಾರ್ತಿ ಯಶ್ತಿಕಾ ಭಾಟಿಯಾ 31, ದೀಪ್ತಿ ಶರ್ಮ 15 , ಪೂಜಾ ವಸ್ತ್ರಾಕಾರ್ 10 ರನ್ ಕೊಡುಗೆ ಸಲ್ಲಿಸಿದರು.
ಬೃಹತ್ ಗುರಿ ಬೆನ್ನಟ್ಟಿದ ವಿಂಡೀಸ್ ಮಹಿಳೆಯರು 40.3 ಓವರ್ ಆಗುವಷ್ಟರಲ್ಲಿ 162 ರನ್ ಗಳಿಸಿ ತನ್ನ ಎಲ್ಲಾ ವಿಕೆಟ್ ಗಳನ್ನ ಕಳೆದುಕೊಂಡು ಭಾರತೀಯ ನಾರಿಯರಿಗೆ ಶರಣಾದರು.
ಭಾರತದ ಬೌಲಿಂಗ್ ನಲ್ಲಿ ಸ್ನೇಹ ರಾಣಾ 9.3 ಓವರ್ ಎಸೆದು 1 ಮೇಡನ್ ಓವರ್ ನೊಂದಿಗೆ 22 ರನ್( 2.3 ) ಬಿಟ್ಟು ಕೊಟ್ಟು 3 ವಿಕೆಟ್ ಪಡೆದು ಗಮನ ಸೆಳೆದರು. ರಾಜೇಶ್ವರಿ ಗಾಯಕ್ವಾಡ್ ಅವರು 10 ಓವರ್ ಎಸೆದು 3 ಮೇಡನ್ ಓವರ್ ಗಳೊಂದಿಗೆ ಒಂದು ವಿಕೆಟ್ ಪಡೆದರು. ಮೇಘನಾ ಸಿಂಗ್ 2 ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.