ಮೈಷುಗರ್‌ನಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಲಿ

Team Udayavani, Mar 12, 2022, 3:08 PM IST

ಮೈಷುಗರ್‌ನಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲಲಿ

ಮಂಡ್ಯ: ಮೈಷುಗರ್‌ ಕಾರ್ಖಾನೆ ರೋಗಗ್ರಸ್ಥವಾಗಿ ಬದಲಾಗಲು ರಾಜಕಾರಣಿಗಳ ಹಸ್ತಕ್ಷೇಪ, ಒಳರಾಜಕೀಯ ಪ್ರಮುಖ ಕಾರಣವಾಗಿದೆ. ಕಾರ್ಖಾನೆ ಅಧಿಕಾರಿಗಳು, ಕಾರ್ಮಿಕರ ಮೇಲಿನ ಹಿಡಿತ ಸಾಧಿ ಸುವ ಪ್ರಯತ್ನಗಳಿಂದ ಅಧೋಗತಿಗೆ ಸಾಗಿದೆ.

ಕಾರ್ಖಾನೆಯಲ್ಲಿ ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯ, ರಾಜಕೀಯ ಬೆಂಬಲಿಗರ ಒತ್ತಡಗಳಿಂದ ಕಾರ್ಖಾನೆಯಲ್ಲಿ ಒಗ್ಗಟ್ಟಿನ ಮಂತ್ರ ಇಲ್ಲದಂತಾಗಿದೆ.

ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯ: ರಾಜಕೀಯ ಪಕ್ಷಗಳ ಬೆಂಬಲಿಗರ ಒಳರಾಜಕೀಯದಿಂದ ಕಾರ್ಮಿಕರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿತ್ತು. ಇದರಿಂದ ಕಾರ್ಮಿಕರ ನಡುವೆ ವೈಮನಸ್ಸು ಉಂಟಾಗಿ ಕೆಲಸಗಳು ಸಾಗುತ್ತಿರಲಿಲ್ಲ. ಅಲ್ಲದೆ, ಜಾತಿಯೂ ಕಾರ್ಮಿಕರ ನಡುವೆ ಮೇಳೈಸಿದ್ದರಿಂದ ಕಾರ್ಮಿಕ ಮನಸ್ಸುಗಳು ಒಂದುಗೂಡಲು ಸಾಧ್ಯವಾಗಲೇ ಇಲ್ಲ. ಇದು ಸಹ ಕಾರ್ಖಾನೆ ಸ್ಥಗಿತಗೊಳ್ಳಲು ಕಾರಣವಾಯಿತು ಎನ್ನುತ್ತಾರೆ ನೌಕರರೊಬ್ಬರು.

ಅಧ್ಯಕ್ಷ ಸ್ಥಾನ ಹುದ್ದೆ ಅನಗತ್ಯ: ಹಿಂದೆ ದಕ್ಷ, ಪ್ರಾಮಾ ಣಿಕ ಅಧಿಕಾರಿಗಳಿಂದ ಕಾರ್ಖಾನೆ ಉತ್ತಮವಾಗಿ ನಡೆಯುತ್ತಿತ್ತು. ನಂತರ ಬಂದ ಆಡಳಿತ ಮಂಡಳಿ ರಚಿ ಸುವ ಪದ್ಧತಿ ಮೂಲಕ ರಾಜಕೀಯ ಕಾರ್ಖಾನೆಯನ್ನು ಹೊಕ್ಕಿತು. ಇದರಿಂದ ರಾಜಕೀಯ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಂಪ್ರದಾಯ ಪ್ರಾರಂಭಿಸಿದ ನಂತರ ಕಾರ್ಖಾನೆ ಯಲ್ಲಿ ರಾಜಕೀಯ ಆರಂಭಗೊಂಡಿತು. ಇದರಿಂದ ಅಧಿಕಾರಿಗಳು ಕಾರ್ಮಿಕರ, ಸಿಬ್ಬಂದಿ ಮೇಲಿನ ಹಿಡಿತ ಕಳೆದುಕೊಳ್ಳುವಂತಾಯಿತು. ಯಾವುದೇ ವಿಚಾರದಲ್ಲೂ ಅಧಿಕಾರಿಗಳ ಮೇಲೆಯೇ ರಾಜಕೀಯ ಒತ್ತಡಗಳು ಹೆಚ್ಚಾಗುತ್ತಿದ್ದವು. ಆದ್ದರಿಂದ ಅಧ್ಯಕ್ಷ ಹುದ್ದೆಯನ್ನು ಕಿತ್ತು ಹಾಕಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳ ನಿಯೋಜಿಸುವ ಮೂಲಕ ಕಾರ್ಖಾನೆ ಆರಂಭಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.

ವರ್ಗಾವಣೆಯಲ್ಲೂ ಹಸ್ತಾಕ್ಷೇಪ: ಕಾರ್ಖಾನೆಯಲ್ಲಿ ಅಧಿಕಾರಿಗಳ ನೇಮಕ ಮಾಡಿಕೊಳ್ಳಲು ಹಾಗೂ ವರ್ಗಾವಣೆ ಮಾಡಲು ರಾಜಕೀಯವೇ ಮೇಲಾಟವಾಯಿತು. ರಾಜಕೀಯ ನಾಯಕರು ತಮಗೆ ಬೇಕಾದ ಅಧಿಕಾರಿವರ್ಗ ನಿಯೋಜಿಸಿಕೊಳ್ಳಲು ಒತ್ತಡ, ಪ್ರಭಾವ, ಹಸ್ತಾಕ್ಷೇಪಗಳು ಪ್ರಾರಂಭಗೊಂಡವು. ಇದರಿಂದ ದಕ್ಷ, ಪ್ರಾಮಾಣಿಕರಿಗೆ ಕಾರ್ಖಾನೆಯಲ್ಲಿ ಬೆಲೆ ಇಲ್ಲದಂತಾಯಿತು. ನೌಕರರ ನೇಮಕಾತಿಯಲ್ಲೂ ಪ್ರಭಾವ: ಕಾರ್ಖಾನೆ ಅಧ್ಯಕ್ಷರಾದವರು ಅವರ ಅವಧಿಯಲ್ಲಿ ತಮಗೆ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿದ್ದರು. ಅಲ್ಲದೆ, ರಾಜಕೀಯ ಬೆಂಬಲಿಗರಿಗೆ ಹೆಚ್ಚು ಮಣೆ ಹಾಕಲಾಗುತ್ತಿತ್ತು. ಇದರಿಂದ ಕಾರ್ಖಾನೆಯಲ್ಲಿ ಸಮರ್ಪಕ, ಪಾರದರ್ಶಕ ಆಡಳಿತ ನೀಡಲು ಸಾಧ್ಯವಾಗದೆ ವೈಫಲ್ಯಕ್ಕೆ ಕಾರಣವಾಯಿತು.

ಗುಂಪುಗಾರಿಕೆ: ನೌಕರರು, ಅಧಿಕಾರಿಗಳ ವರ್ಗದ ನಡುವಿನ ಗುಂಪುಗಾರಿಕೆಯಿಂದ ಕಾರ್ಖಾನೆಯಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿರಲಿಲ್ಲ. ಇದರಿಂದ ಸಕ್ಕರೆ ಉತ್ಪಾದನೆ ಸೇರಿ ವಿವಿಧ ಉಪ ಉತ್ಪನ್ನಗಳ ಕುಸಿತಕ್ಕೂ ಕಾರಣವಾಯಿತು. ಉತ್ಪಾದನೆಯಲ್ಲಿ ಏರುಪೇರು ಮಾಡುವುದು. ಯಂತ್ರಗಳ ಸಮರ್ಪಕ ನಿರ್ವಹಣೆಗೂ ತೊಂದರೆ ಯಾಯಿತು. ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳಲು ರಾಜಕೀಯ ಒತ್ತಡದಿಂದ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ದಿನದಿಂದ ದಿನಕ್ಕೆ ರೋಗಗ್ರಸ್ಥ ಕಾರ್ಖಾನೆಯಾಗಿ ಬದಲಾಗುತ್ತ ಸಾಗಿತು ಎಂದು ನಿವೃತ್ತ ನೌಕರರು ಹೇಳುತ್ತಾರೆ.

ಅಧಿಕಾರಿಗಳಿಗೆ ಅಧಿಕಾರ ನೀಡಲಿ : ಪ್ರಸ್ತುತ ರಾಜ್ಯ ಸರ್ಕಾರ ಕಾರ್ಖಾನೆ ಆರಂಭಿಸಲು ಮುಂದಾಗಿದೆ. ಆದರೆ, ಸಂರ್ಪೂ ರಾಜಕೀಯ ಹಸ್ತಕ್ಷೇಪ ರಹಿತವಾಗಿ ಪಾರದರ್ಶಕ ಆಡಳಿತ ನೀಡಬೇಕಾದರೆ ಯಾವುದೇ ಆಡಳಿತ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡದೆ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿ ಕಾರ್ಖಾನೆ ಆರಂಭಿಸಿದರೆ ಕಾರ್ಖಾನೆಯು ಉಳಿಯಲಿದೆ. ಇದರಿಂದ ಕಾರ್ಖಾನೆಯ ವ್ಯಾಪ್ತಿಯ ರೈತರಿಗೆ ಅನುಕೂಲ ಒದಗಿಸಿದಂತಾಗಲಿದೆ ಎಂಬುದು ಹೋರಾಟಗಾರರ ಆಶಯವಾಗಿದೆ

ಎಚ್‌.ಶಿವರಾಜು

ಟಾಪ್ ನ್ಯೂಸ್

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

Examination: ಗ್ರಾಮ ಆಡಳಿತಾಧಿಕಾರಿ ಹುದ್ದೆಯ ಪರೀಕ್ಷೆ ಯಶಸ್ವಿ

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

BBK-11: ಬಿಗ್ ಬಾಸ್ ಮನೆಗೆ ಹೋದ ಕೊನೆಯ ಮೂವರು ಸ್ಪರ್ಧಿಗಳು ಇವರೇ…

CM-Ashokapuram

Mysuru: ನಾನು ಹೆದರುವ, ಜಗ್ಗುವ, ಬಗ್ಗುವ ಪ್ರಶ್ನೆಯೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Chaitra-Kundapur

BBK11: ಬಿಗ್ ಬಾಸ್ ಸೀಸನ್ 10 ಜೈಲಲ್ಲಿ ವೀಕ್ಷಿಸಿ, 11ರ ಸ್ಪರ್ಧಿಯಾದ ಚೈತ್ರಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BIO-METRIC

Model for Schools: ಮಂಡ್ಯ ಸರಕಾರಿ ಶಾಲೆಗೆ ಫೇಸ್‌ ಬಯೋಮೆಟ್ರಿಕ್‌!

HDK-1

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾನು ಒತ್ತಾಯಿಸಲ್ಲ: ಕೇಂದ್ರ ಸಚಿವ ಎಚ್‌ಡಿಕೆ 

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

Nagamangala ಕಿರಣ್‌ ಅಂತಿಮ ದರ್ಶನ ಪಡೆದ ನಿಖಿಲ್‌ ಕುಮಾರಸ್ವಾಮಿ

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

R. Ashok: “ಮುಸ್ಲಿಂ ಭಯೋತ್ಪಾದಕರಿಗೆ ಸರಕಾರದಿಂದಲೇ ಕುಮ್ಮಕ್ಕು’

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ARMY (2)

Kashmir;ಕಥುವಾದಲ್ಲಿ ಎನ್‌ಕೌಂಟರ್‌: ಉಗ್ರನ ಹತ್ಯೆ

1-addasd

Congress ಪಕ್ಷ ಸಿದ್ಧಾಂತದಲ್ಲಿ ರಾಜಿ ಇಲ್ಲ: ಖರ್ಗೆಗೆ ವಿಕ್ರಮಾದಿತ್ಯ ಸಿಂಗ್‌

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Sameer Acharya: ಹೆತ್ತವರ ಜತೆ ಸೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ ಬಿಗ್ ಬಾಸ್ ಮಾಜಿ ಸ್ಪರ್ಧಿ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

Madikeri: ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜಿಗೆ ಪ್ರಯತ್ನ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

ಸೆ. 30ರಿಂದ ಅ.15:ಡೈಮಂಡ್‌ ಚಿನ್ನಾಭರಣಗಳ ಪ್ರದರ್ಶನ,ಮಾರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.