ಸಾಂಸ್ಕೃತಿಕ ಲೋಕವೇ ಧರೆಗಿಳಿದಿದೆ ಇಲ್ಲಿ ! ನಾಡಿನ ಗಮನ ಸೆಳೆಯುತ್ತಿದೆ ಕಾರ್ಕಳ ಉತ್ಸವ


Team Udayavani, Mar 12, 2022, 4:35 PM IST

ಸಾಂಸ್ಕೃತಿಕ ಲೋಕವೇ ಧರೆಗಿಳಿದಿದೆ ಇಲ್ಲಿ ! ನಾಡಿನ ಗಮನ ಸೆಳೆಯುತ್ತಿದೆ ಕಾರ್ಕಳ ಉತ್ಸವ

ಕಾರ್ಕಳ : ಭಾಷೆ, ಕಲೆ, ಸಂಸ್ಕೃತಿಗಳ ಸಮ್ಮಿಲನ‌ದ ಕಾರ್ಕಳ ಉತ್ಸವ ನಾಡಿನ ಜನತೆಯನ್ನು ಸಾಂಸ್ಕೃತಿಕ ಲೋಕದಲ್ಲಿ ತೇಲುವಂತೆ ಮಾಡಿದೆ.

ಕಾರ್ಕಳ ಉತ್ಸವ ಎಲ್ಲಡೆ ಹೊಸ ಸಂಚಲನ ಸೃಷ್ಟಿಸಿದೆ. ತಾ|ನ ಮಂದಿ ಉತ್ಸವದ ಯಶಸ್ವಿಗೆ ಅಹರ್ನಿಶಿ ದುಡಿಯುತ್ತಿರುವುದರ ಜತೆಗೆ ಮನೆಯ ಕಾರ್ಯಕ್ರಮದಂತೆ ಬಿಡುವಿಲ್ಲದೆ ನಾನಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊರ ಭಾಗದವರಿಗೆ ಕಾರ್ಕಳ ಉತ್ಸವದ ಕುರಿತು ಕುತೂಹಲ ಸೃಷ್ಟಿಯಾಗುವಷ್ಟರ ಮಟ್ಟಿಗೆ ಬ್ಬರದ ಹೊರಗೆ ಪ್ರಚಾರವಿದೆ. ಕಾರ್ಕಳ ಉತ್ಸವದ ಬಗ್ಗೆ ನಾಡಿನೆಲ್ಲೆಡೆಯ ಜನ ಮಾತನಾಡುವಂತಾಗಿದೆ.

ನಗರದಲ್ಲಿ ಜನಜಂಗುಳಿ
ಕಾರ್ಕಳ ನಗರ ಈಗಲೇ ಜನಜಂಗುಳಿಯಿಂದ ತುಂಬಿದೆ. ನೂರಾರು ಕುತೂಹಲಿಗಳು ನಗರದಲ್ಲಿ ಶೃಂಗಾರಗೊಂಡ ಅಲಂಕಾರ, ಸ್ವರಾಜ್‌ ಮೈದಾನದಲ್ಲಿ ನಡೆಯುವ ವಸ್ತು ಮಳಿಗೆ, ಆಹಾರೋತ್ಸವ, ಅಲ್ಲಿನ ಇತರ ಸಿದ್ಧತೆ ನಡೆಯುತ್ತಿರುವ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ವರಾಜ್‌ ಮೈದಾನದಲ್ಲಿ ಒಂದೇ ಕಡೆ ಮಳಿಗೆಗಳು ಆಕರ್ಷಕವಾಗಿ ನಿರ್ಮಾಣವಾಗುತ್ತಿದ್ದು ಗಮನ ಸೆಳೆಯುತ್ತಿದೆ.

ಹತ್ತು ದಿನವೂ ಸಾಂಸ್ಕೃತಿಕ ಲೋಕ
ಗಾಂಧಿ ಮೈದಾನದ ದಿ| ಗೋಪಾಲ ಭಂಡಾರಿ ವೇದಿಕೆಯಲ್ಲಿ ಮಾ. 10ರಂದು ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ಚಾಲನೆ ದೊರಕಿದೆ. 60 ಅಡಿ ಎತ್ತರ, 24 ಅಡಿ ಅಗಲವಿರುವ ವೇದಿಕೆ ನಿರ್ಮಿಸಲಾಗಿದೆ. ವೇದಿಕೆ ನೆಲ ಅಂತಸ್ತಿನಿಂದ 4 ಅಡಿ ಎತ್ತರವಿದೆ. ಆಕರ್ಷಣೀಯ ಪೆಂಡಲ್‌, ವೇದಿಕೆಯ ಎರಡೂ ಬದಿ ಹೂವಿನ ಅಲಂಕಾರ, ನಾಡು ನುಡಿ ಶಿಲ್ಪಕಲೆಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ. ಮಾ. 10ರಂದು ಯಕ್ಷರಂಗಾಯಣ ತಂಡದಿಂದ ದೂತವಾಕ್ಯ ನಾಟಕ ಪ್ರದರ್ಶನ, ದೃಶ್ಯಕಲಾ ಕಾರ್ಯಕ್ರಮ ನಡೆಯಿತು. ಸಹಸ್ರಾರು ಮಂದಿ ವೀಕ್ಷಿಸಿದರು.

ಆಕರ್ಷಿಸುತ್ತಿದೆ ವೇದಿಕೆ
ಗಾಂಧಿ ಮೈದಾನ ವೇದಿಕೆ ಮುಂಭಾಗ ಹೂವಿನ ಕುಂಡಗಳನ್ನು ಹಚ್ಚ ಹಸುರು ಕಂಗೊಳಿಸುವ ರೀತಿ ಜೋಡಿಸಿಡಲಾಗಿದೆ. ವೇದಿಕೆ ಮುಂಭಾಗ ರಂಗೋಲಿ ಬಿಡಿಸಲಾಗಿದ್ದು, ನೆಲಹಾಸು, ವೇದಿಕೆಗೆ ವಾಲ್‌ ಅಳವಡಿಸಲಾಗಿದೆ. ಮೈದಾನದ ಸುತ್ತ ವಿದ್ಯುತ್‌ ದೀಪದ ಅಲಂಕಾರ, ಗೂಡು ದೀಪ, ವಿಭಿನ್ನ ಶೈಲಿಯ ಬಣ್ಣದ ಮೇಲ್ಛಾವಣಿ, 4 ಸಾವಿರ ಆಸನ ವ್ಯವಸ್ಥೆ ಅಳವಡಿಸಲಾಗಿದೆ. ಮೈದಾನದ ಸುತ್ತ ವಿವಿಧ ಅಂಗಡಿ, ಮಾರಾಟ ಮಳಿಗೆಗಳಿವೆ.

ಜಟಕ ಬಂಡಿಯೂ ಇಂದೇ ಆಗಮನ
ಕಾರ್ಕಳ ಉತ್ಸವವೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಹಲವು ಆಕರ್ಷಣೆಗಳು ಉತ್ಸವಕ್ಕೆ ಹೊಸ ಮೆರುಗನ್ನು ನೀಡುತ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಕಾರ್ಕಳ ಉತ್ಸವ ಕಣ್ತುಂಬಿಕೊಳ್ಳಬೇಕು ಎನ್ನುವ ಕಲ್ಪನೆ ಉತ್ಸವದ ರೂವಾರಿ ಸಚಿವ ಸುನಿಲ್‌ ಅವರದ್ದು. ಉತ್ಸವ ನೋಡಲು ಬರುವ ಅಶಕ್ತರಿಗೆ, ಹಿರಿಯರಿಗೆ ತೊಂದರೆ ಆಗಬಾರದೆಂದು ಮೈಸೂರಿನಿಂದ 10 ಜಟಕಾ ಬಂಡಿ ಮಾ.12ರಂದು ನಗರಕ್ಕೆ ಬರಲಿದೆ.

ಸ್ವಾಗತಿಸುತ್ತಿವೆ ಬೊಂಬೆಗಳು
ಎತ್ತ ನೋಡಿದರೂ ಸಂಭ್ರಮ. ಸ್ವರಾಜ್‌ ಮೈದಾನಕ್ಕೆ ತೆರಳುವ ದಾರಿ ಮಧ್ಯೆ ಪ್ರವಾಸಿಗರನ್ನು ಸ್ವಾಗತಿಸಲು ಶಿಲ್ಪಕಲೆ, ಸಂಸ್ಕೃತಿಯನ್ನು ಬಿಂಬಿಸುವ ವೇಷಗಳ ಬೃಹತ್‌ ಬೊಂಬೆಗಳನ್ನು ಇರಿಸಲಾಗಿದೆ. ನಗರದಲ್ಲಿ ಬಣ್ಣದ ರಂಗು ವಿಶೇಷ ಮೆರುಗು ನೀಡುತ್ತಿದ್ದು ಸಾಂಸ್ಕೃತಿಕ ಲೋಕ ಸೃಷ್ಟಿಯಾಗಿದೆ.

ಇಂದು ದೀಪಾಲಂಕಾರ ಉದ್ಘಾಟನೆ
ಭವ್ಯ ಕಾರ್ಕಳ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರವೂ ಒಂದು. ನಗರವಿಡೀ ವಿದ್ಯು ತ್‌ ದೀಪಗಳಿಂದ ಅಲಂಕಾರ ಗೊಂಡಿದ್ದು, ಮಂದಿರ, ಮಸೀದಿ ಚರ್ಚ್‌, ಕಟ್ಟಡಗಳೆಲ್ಲವೂ ದೀಪಾಲಂಕಾರ ಗೊಂಡಿವೆ. ಮೈಸೂರು ಚೆಸ್ಕಾಂ ವಿಭಾಗದವರು ಕಳೆದ ಒಂದು ವಾರದಿಂದ ವಿದ್ಯುತ್‌ ದೀಪ ಗಳ ಅಳವಡಿಕೆ ಕಾರ್ಯ ನಡೆಸುತ್ತಿದ್ದಾರೆ. ಪ್ರಮುಖ ಜಂಕ್ಷನ್‌ಗಳಲ್ಲಿ ರಥ ಮಾದರಿ, ಯೋಗಾಸನ ಮೊದಲಾದ ಮಾದರಿಯ ಲೈಟಿಂಗ್ಸ್‌ ಅಳವಡಿಸಲಾಗಿದ್ದು. ಇವೆಲ್ಲದರ ಉದ್ಘಾ ಟನೆ ಮಾ. 12ರಂದು ಸಂಜೆ 6.30ಕ್ಕೆ ಕಾರ್ಕಳ ಬಸ್‌ಸ್ಟ್ಯಾಂಡ್‌ನ‌ಲ್ಲಿ ನಡೆಯಲಿದೆ. ಕಾರ್ಕಳ ನಗರ ಪೂರ್ತಿ ದೀಪಾಲಂಕಾರ ಬೆಳಗುತ್ತಿರುವುದನ್ನು ನೋಡಲು ಜನ ಕಾತರರಾಗಿದ್ದಾರೆ.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮ
ಮಾ.12ರಂದು ಸಾಂಸ್ಕೃತಿಕ ಅಂಗವಾಗಿ ಗಾಂಧಿ ಮೈದಾನದಲ್ಲಿ ಸಂಜೆ 6ಕ್ಕೆ ನಾದಸ್ವರ, ತುಳುನೃತ್ಯ ರೂಪಕ, ಜನಪದ ವೈಭವ, ಮಕ್ಕಳ ಮಾಯಾ ಲೋಕ, ಬೊಂಬೆಯಾಟಗಳು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಚಿವ ಅಂಗಾರ ಬೋಟ್‌ ವಿಹಾರ
ಕಾರ್ಕಳ ಉತ್ಸವದಲ್ಲಿ ಬೋಟಿಂಗ್‌ ಉತ್ಸವಕ್ಕೂ ಮಾ. 10ಕ್ಕೆ ಚಾಲನೆ ಸಿಕ್ಕಿದೆ. ಶಾಂತ ಪರಿಸರದ‌ ರಾಮಸಮುದ್ರದಲ್ಲಿ ಬೋಟಿಂಗ್‌ ನಡೆಯುತ್ತಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಜೆಟ್‌ಸಿಯಲ್ಲಿ ಬೋಟ್‌ ವಿಹಾರ ಮಾಡುವ ಮೂಲಕ ಚಾಲನೆ ನೀಡಿದರು.

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.