ಡಿಸ್ಟಲರಿ ಕಾರ್ಖಾನೆಯಿಂದ 33 ಲಕ್ಷ ತೆರಿಗೆ ಬಾಕಿ: ಕಿರಕಿ
ಹಿಂಬರಹ ಬರೆದು ಮರಳಿ ಕಳುಹಿಸಿದ್ದೇವೆ. ಅದನ್ನೂ ಪುನಃ ಸ್ವೀಕರಿಸಿಲ್ಲ
Team Udayavani, Mar 12, 2022, 6:55 PM IST
ಬಾಗಲಕೋಟೆ: ಮುಧೋಳ ತಾಲೂಕಿನ ಸೋರಗಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಸ್ಟಲರಿ ಕಾರ್ಖಾನೆ, ಕಳೆದ ಏಳು ವರ್ಷಗಳಿಂದ ಒಟ್ಟು 33 ಲಕ್ಷ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಗ್ರಾ.ಪಂ. ಆಡಳಿತ ಮಂಡಳಿ ಸದಸ್ಯರು ಆರೋಪಿಸಿದರು.
ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಅಧ್ಯಕ್ಷೆ ಕಲಾವತಿ ಕಿರಕಿ ಹಾಗೂ ಸದಸ್ಯರು ಮಾತನಾಡಿ, ತೆರಿಗೆ ಬಾಕಿ ಕುರಿತು ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದೇವೆ. ಕೇವಲ 1.30 ಲಕ್ಷ ಮೊತ್ತದ ಚೆಕ್ ನೀಡಿದ್ದರು. ನಾವು ಅದನ್ನು ಪಡೆದಿಲ್ಲ. ಹಿಂಬರಹ ಬರೆದು ಮರಳಿ ಕಳುಹಿಸಿದ್ದೇವೆ. ಅದನ್ನೂ ಪುನಃ ಸ್ವೀಕರಿಸಿಲ್ಲ ಎಂದು ದೂರಿದರು.
ಈ ಕುರಿತು ಸಚಿವ ಮುರುಗೇಶ ನಿರಾಣಿ ಅವರ ಗಮನಕ್ಕೆ ತರಲಾಗಿದೆ. ಮುಖ್ಯವಾಗಿ ಮುಧೋಳ ತಾಪಂ.ಇಒ ಅವರಿಗೂ ತಿಳಿಸಿದ್ದೇವೆ. ಒಟ್ಟು 33.31 ಲಕ್ಷ ರೂ. ತೆರಿಗೆ ಬಾಕಿ ಕೊಡಬೇಕಿದೆ. ಗ್ರಾಪಂನಿಂದ ನೋಟಿಸ್ ಕಳುಹಿಸಿದರೂ, ಅದನ್ನು ಸ್ವೀಕರಿಸದೇ ಮರಳಿ ಕಳುಹಿಸಿದ್ದಾರೆ. ಈ ಹಿಂದೆ ಈ ಕಾರ್ಖಾನೆ ಕುಳಲಿ ಗ್ರಾಪಂ ವ್ಯಾಪ್ತಿಯಲ್ಲಿತ್ತು. ಆಗ ಗ್ರಾ.ಪಂ. ಆಡಳಿತ ಮಂಡಳಿಯೊಂದಿಗೆ ಒಪ್ಪಂದ ಮಾಡಿಕೊಂಡು 1.63 ಲಕ್ಷ ರೂ. ತೆರಿಗೆ ಪಾವತಿಸಿದ್ದರು. ಗ್ರಾಪಂ ಪುನರ್‌ವಿಂಗಡಣೆಯ ಬಳಿಕ ಈ ಕಾರ್ಖಾನೆಯನ್ನು ಸೋರಗಾವಿ ಗ್ರಾಪಂಗೆ ಸೇರಿಸಲಾಗಿದೆ.
ಅಂದಿನಿಂದ ಈ ವರೆಗೆ ತೆರಿಗೆ ಪಾವತಿಸಿಲ್ಲ ಎಂದರು. ಗ್ರಾ.ಪಂ. ಉಪಾಧ್ಯಕ್ಷೆ ಮಹಾದೇವಿ, ಸದಸ್ಯರಾದ ಸುಭಾಸ ಅಡವಿ, ವಿನೋದ ಅಡವಿ, ಸಂಗನಗೌಡ ಪಾಟೀಲ, ರುದ್ರಪ್ಪ ಅಡವಿ, ಹೊಳಬಸು ಬಾಲಮಸಿ ಇದ್ದರು.
ಕಾರ್ಖಾನೆ ಸ್ಪಷ್ಟನೆ
ಈ ಕುರಿತು ಕಾರ್ಖಾನೆಯ ವ್ಯವಸ್ಥಾಪಕ ಬಸವರಾಜ ಶೆಲ್ಲಿಕೇರಿ ಸ್ಪಷ್ಟನೆ ನೀಡಿದ್ದು, ಸೋರಗಾವಿ ಗ್ರಾ.ಪಂ.ಗೆ ಯಾವುದೇ ರೀತಿಯ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ. 2020-21ನೇ ಸಾಲಿನವರೆಗೆ ನಿಯಮಾನುಸಾರ ಚೆಕ್ ಮೂಲಕ ತೆರಿಗೆ ಪಾವತಿ ಮಾಡಲಾಗಿದೆ. ಅಲ್ಲದೇ ಪಂಚಾಯಿತಿ ಅಧಿಕಾರಿಗಳು ನಿಯಮಬಾಹಿರವಾಗಿ ಹೆಚ್ಚು ತೆರಿಗೆ ಆಕರಣೆ ಮಾಡಿದ್ದಾರೆ. ಈ ವಿಷಯವನ್ನು ಪಂಚಾಯಿತಿ ಅಧಿಕಾರಿಗಳಿಗೆ ಸಮಕ್ಷಮ ಹಾಗೂ ಲಿಖೀತವಾಗಿ ಮನವರಿಕೆ ಮಾಡಿಕೊಡಲಾಗಿದೆ. ಸಕ್ಕರೆ, ಕೃಷಿ ಆಧಾರಿತ ಮಧ್ಯಮ ಕೈಗಾರಿಕೆಯಾಗಿದ್ದು, ಈ ನಿಯಮದಂತೆ ತೆರಿಗೆ ಪಾವತಿ ಮಾಡಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.