ವಿಶ್ವ ಯುದ್ಧದ ಭೀತಿ; ರಷ್ಯಾ ಗಡಿಯಲ್ಲಿ ಅಮೆರಿಕದ 12 ಸಾವಿರ ಸೈನಿಕರು
ನ್ಯಾಟೋ ರಾಷ್ಟ್ರಗಳ ಮೇಲೆ ಹಾರಾಡಿದ ರಷ್ಯಾ ಡ್ರೋನ್
Team Udayavani, Mar 13, 2022, 7:00 AM IST
ಕೀವ್/ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಸದ್ಯದಲ್ಲೇ “ಮೂರನೇ ವಿಶ್ವ ಯುದ್ಧ’ವಾಗಿ ಮಾರ್ಪಾಡಾಗಲಿದೆಯೇ ಎಂಬ ಪ್ರಶ್ನೆ ಹೆಚ್ಚು ದಟ್ಟವಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶನಿವಾರ ಏಕಾಏಕಿ ತನ್ನ 12 ಸಾವಿರ ಸೈನಿಕರನ್ನು ರಷ್ಯಾದ ಗಡಿ ಯುದ್ದಕ್ಕೂ ನಿಯೋಜಿಸಿದ್ದಾರೆ. ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ದೇಶಗಳಲ್ಲಿ ಅಮೆರಿಕದ ಸೇನೆಗಳಿವೆ. ಜತೆಗೆ, ಉಕ್ರೇನ್‌ನಲ್ಲಿ ಆರಂಭಿಸಿರುವ ಯುದ್ಧವು ಪುತಿನ್‌ಗೆ ಯಾವ ಕಾರಣಕ್ಕೂ ಜಯ ತಂದುಕೊಡುವುದಿಲ್ಲ ಎಂದೂ ಬೈಡೆನ್ ಗುಡುಗಿದ್ದಾರೆ.
ಸೇನೆ ಜಮಾಯಿಸುವ ಮೂಲಕ ಅಮೆರಿಕವು ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಸಜ್ಜಾಗಿರುವ ಸುಳಿವು ನೀಡಿದೆ. ಅಮೆರಿಕವು ರಷ್ಯಾ ವಿರುದ್ಧ ದಾಳಿ ಆರಂಭಿಸಿದರೆ 3ನೇ ವಿಶ್ವ ಯುದ್ಧ ಆರಂಭ ವಾಯಿತೆಂದೇ ಅರ್ಥ.
3ನೇ ವಿಶ್ವಯುದ್ಧ ಅಲ್ಲ
ರಷ್ಯಾ ಗಡಿಯಲ್ಲಿ ಸೇನೆ ನಿಯೋಜಿಸಿರುವ ವಿಚಾರ ವನ್ನು ಶನಿವಾರ ಘೋಷಿ ಸಿರುವ ಬೈಡೆನ್, “ನಾವು ಉಕ್ರೇನ್ ನಲ್ಲಿ ಮೂರನೇ ವಿಶ್ವ ಯುದ್ಧ ಮಾಡುತ್ತಿಲ್ಲ’ ಎಂದು ಸ್ಪಷ್ಟಪಡಿಸಿ ದ್ದಾರೆ. ಆದರೆ, ನ್ಯಾಟೋದ ಪ್ರತಿ ಇಂಚನ್ನೂ ರಕ್ಷಿಸಲು ನಾವು ಬದ್ಧರಾಗಿ ದ್ದೇವೆ ಎಂಬ ಸಂದೇಶವನ್ನು ರಷ್ಯಾಕ್ಕೆ ರವಾನಿಸುತ್ತಿದ್ದೇವೆ ಎಂದಿದ್ದಾರೆ.
ರಷ್ಯಾ ನಿರ್ಮಿತ ಡ್ರೋನ್ ಪತನ
ರಷ್ಯಾ ನಿರ್ಮಿತ ಸೇನಾ ಡ್ರೋನೊಂದು ನ್ಯಾಟೋ ಸದಸ್ಯ ರಾಷ್ಟ್ರ ವಾದ ಕ್ರೋಶಿಯಾದಲ್ಲಿ ಪತನವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಕ್ರೋಶಿಯಾ, “ಇಷ್ಟೆಲ್ಲ ಆದರೂ ನ್ಯಾಟೋ ಯಾಕೆ ಸುಮ್ಮನಿದೆ’ ಎಂದು ಪ್ರಶ್ನಿಸಿದೆ. ಕ್ರೋಶಿಯಾ ತಲುಪುವ ಮುನ್ನ ಡ್ರೋನ್ ರೊಮೇನಿಯಾ ಮತ್ತು ಹಂಗೇರಿಯ ಆಗಸದಲ್ಲಿ 40 ನಿಮಿಷ ಹಾಗೂ ಕ್ರೋಶಿಯಾದಲ್ಲಿ 7 ನಿಮಿಷ ಹಾರಾಡಿತ್ತು.
ಹಲವು ನಗರಗಳಿಗೆ ವ್ಯಾಪಿಸಿದ ದಾಳಿ
ಈ ಹಿಂದೆ ಸಿರಿಯಾ ಹಾಗೂ ಚೆಚೆನ್ಯಾದಲ್ಲಿ ಬಳಸಿದ ಕಾರ್ಯತಂತ್ರವನ್ನೇ ಉಕ್ರೇನ್‌ನಲ್ಲೂ ರಷ್ಯಾ ಬಳಸುತ್ತಿದೆ. ನಿರಂತರ ವೈಮಾನಿಕ ಹಾಗೂ ಶೆಲ್ ದಾಳಿ ಮೂಲಕ ಮೊದಲಿಗೆ ಸಶಸ್ತ್ರ ಪ್ರತಿರೋಧವನ್ನು ಕಿವುಚಿ ಹಾಕುವುದು ಪುಟಿನ್ ಕಾರ್ಯತಂತ್ರವಾಗಿದೆ. ಅದರಂತೆ, ಆರಂಭದಲ್ಲಿ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ದಾಳಿಯು ಈಗ ಹಲವು ನಗರಗಳಿಗೆ ವ್ಯಾಪಿಸಿದೆ. ಶನಿವಾರ ರಷ್ಯಾ ಪಡೆಗಳು ಮರಿಯುಪೋಲ್‌ನ ಐತಿಹಾಸಿಕ ಮಸೀದಿಯೊಂದರ ಮೇಲೆ ಶೆಲ್ ದಾಳಿ ನಡೆಸಿದೆ. ಈ ಮಸೀದಿಯಲ್ಲಿ 34 ಮಕ್ಕಳು ಸಹಿತ 80ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ದಾಳಿಯಿಂದಾಗಿ ಉಂಟಾದ ಸಾವು-ನೋವಿನ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಉಕ್ರೇನ್ ಹೇಳಿದೆ.
ಮರಿಯುಪೋಲ್‌ನಲ್ಲಿ ಸತತ ದಾಳಿ ನಡೆಸುವ ಮೂಲಕ ರಷ್ಯಾ ಪಡೆ ನಗರಕ್ಕೆ ಆಹಾರ, ನೀರು ಸರಬರಾಜು ಆಗದಂತೆ ಹಾಗೂ ನಾಗರಿಕರ ಸ್ಥಳಾಂತರವಾಗದಂತೆ ನೋಡಿಕೊಳ್ಳುತ್ತಿದೆ. ಮಿಕೋಲಾಯಿವ್ ಎಂಬಲ್ಲಿ ಕ್ಯಾನ್ಸರ್ ಆಸ್ಪತ್ರೆ ಮೇಲೆ ರಷ್ಯಾ ಬಾಂಬ್ ಹಾಕಿದೆ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ರಾಜಧಾನಿ ಕೀವ್, ವಾಸ್ಕೀವ್, ಮರಿಯುಪೋಲ್, ಮೆಲಿಟೋಪೋಲ್ ಸಹಿತ ಹಲವು ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ.
ಇದನ್ನೂ ಓದಿ:ಯುಪಿಯಲ್ಲಿ ಹೀನಾಯ ಸೋಲು: ಮಾಧ್ಯಮಗಳ ಮುಂದೆ ಬರಲ್ಲ ಎಂದ ಮಾಯಾವತಿ
ಬಾಹ್ಯಾಕಾಶ ಕೇಂದ್ರ ಧ್ವಂಸ ಬೆದರಿಕೆ
ದಿಗ್ಬಂಧನದಿಂದ ನಲುಗಿರುವ ರಷ್ಯಾ ಅಂತಾರಾಷ್ಟ್ರೀಯ ಬಾಹ್ಯಾ ಕಾಶ ಕೇಂದ್ರ (ಐಎಸ್‌ಎಸ್)ವನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿ ಅಮೆರಿಕದ ನಾಸಾ ಮತ್ತು ಕೆನಡಾ, ಯುರೋಪ್ ಸಹಿತ ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಗೆ ಪತ್ರ ಬರೆ ದಿದೆ. ನಿರ್ಬಂಧಗಳಿಂದಾಗಿ ಬಾಹ್ಯಾ ಕಾಶ ಕೇಂದ್ರದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಿರ್ಬಂಧ ತೆರವುಗೊಳಿಸದಿದ್ದರೆ, ಬಾಹ್ಯಾಕಾಶ ಕೇಂದ್ರವನ್ನೇ ನಾಶ ಮಾಡ ಬೇಕಾಗು ತ್ತದೆ. 500 ಟನ್ ತೂಕದ ಐಎಸ್‌ಎಸ್ ಎಲ್ಲಾದರೂ ಪತನಗೊಳ್ಳಲಿದೆ ಎಂದು ರಷ್ಯಾ ಬೆದರಿಕೆ ಹಾಕಿದೆ. ಪ್ರಸ್ತುತ ಈ ಕೇಂದ್ರದಲ್ಲಿ ನಾಸಾದ ನಾಲ್ವರು, ರಷ್ಯಾದ ಇಬ್ಬರು ಮತ್ತು ಯುರೋಪ್‌ನ ಒಬ್ಬ ಗಗನಯಾತ್ರಿ ಇದ್ದಾರೆ.
ಮೇಯರ್ ಅಪಹರಣ
ಉಕ್ರೇನ್‌ನ ಮೆಲಿಟೋಪೋಲ್ ನಗರದ ಮೇಯರ್ ಒಬ್ಬರನ್ನು ರಷ್ಯಾ ಅಪಹರಣ ಮಾಡಿದ್ದು, ಕೂಡಲೇ ಬಿಡುಗಡೆ ಮಾಡಬೇಕೆಂದು ನಾಗರಿ ಕರು ಆಗ್ರಹಿಸಿದ್ದಾರೆ. “ಮೇಯರ್ ಅಪಹರಣವು ಹೊಸ ಭಯೋತ್ಪಾದನೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಕಿಡಿ ಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.