ಕಾರ್ಕಳ ಉತ್ಸವ ಕಣ್ತುಂಬಿಕೊಳ್ಳಲು ಶಿಲ್ಪ ಕಾಶಿಗೆ ಬನ್ನಿ: ಸುನಿಲ್
ದೀಪಾಲಂಕಾರ ಉದ್ಘಾಟನೆ
Team Udayavani, Mar 13, 2022, 6:10 AM IST
ಕಾರ್ಕಳ : ಸಂಸ್ಕೃತಿ, ಕಲೆ, ಪ್ರದರ್ಶನದ ಜತೆಗೆ ದೀಪಾಲಂಕಾರದ ಸೊಬಗನ್ನು ಉತ್ಸವದ ಮೂಲಕ ಸವಿಯಲು ಅವಕಾಶ ಕಲ್ಪಿಸಲಾಗಿದೆ. ಈ ಅಭೂತಪೂರ್ವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಜನರೆಲ್ಲ ಶಿಲ್ಪ ಕಾಶಿಗೆ ಬನ್ನಿ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಆಹ್ವಾನ ನೀಡಿದರು.
ಕಾರ್ಕಳ ಉತ್ಸವ 2022ರ ವಿದ್ಯುತ್ ದೀಪಾಲಂಕಾರವನ್ನು ನಗರದ ಬಸ್ ನಿಲ್ದಾಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಮೈಸೂರು ದಸರಾ ಮಾದರಿಗಿಂತ ಭಿನ್ನವಾಗಿ ಅಲಂಕಾರ ಮಾಡಲಾಗಿದೆ, ಮೈಸೂರಿನ ವಿಶೇಷ ಪರಿಣತರ ತಂಡ ಈ ಕೆಲಸ ಮಾಡಿದ್ದಾರೆ. ಶ್ರೀಕೃಷ್ಣ, ನಾರಾಯಣಗುರು, ಪೇಜಾವರಶ್ರೀ, ಗೊಮ್ಮಟೇಶ್ವರ ಹೀಗೆ 10 ಪ್ರತಿಕೃತಿಗಳು ಸುಂದರವಾಗಿ ಅಲ್ಲಲ್ಲಿ ನಿರ್ಮಿಸಲಾಗಿದೆ ಎಂದರು.
ಮೂಲ್ಕಿ-ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ಅವರು ಕಾರ್ಕಳದಲ್ಲಿ ಹಬ್ಬದ ಸಡಗರ ತುಂಬಿದೆ. ಹೊಸ ಪರಿಕಲ್ಪನೆ ಸೃಷ್ಟಿಸಿದ, ಸುನಿಲ್ ಅವರಿಗೆ ಅವರೇ ಸಾಟಿ ಎಂದರು. ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಸುನಿಲ್ ಅವರು ನೆಲ, ಜಲ ವಾಯು ಮೂರನ್ನು ಬಳಸಿಕೊಂಡ ಬುದ್ಧಿವಂತ ಎಂದರು. ಶಾಸಕರಾದ ಡಾ| ಭರತ್ ಶೆಟ್ಟಿ, ರಘುಪತಿ ಭಟ್ ಮಾತನಾಡಿದರು.
ಹಿರಿಯರಾದ ಬೋಳ ಪ್ರಭಾಕರ ಕಾಮತ್, ನ್ಯಾಯವಾದಿ ಎಂ. ಕೆ. ಜಯ ಕುಮಾರ್, ಕೆ.ಪಿ. ಶೆಣೈ, ಮಣಿರಾಜ ಶೆಟ್ಟಿ, ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತಹಶೀಲ್ದಾರ್ ಪ್ರಕಾಶ್ ಕುಡೇìಕರ್, ಮೆಸ್ಕಾಂ ಅಧಿಕಾರಿ ಪದ್ಮಾವತಿ, ಮಂಜಪ್ಪ ಉಪಸ್ಥಿತರಿದ್ದರು. ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪೆನಿಯ ಐವರು ಸಿಬಂದಿಯನ್ನು ಸಚಿವರು ಸಮ್ಮಾನಿಸಿದರು.
ರವೀಂದ್ರ ಮೊಯ್ಲಿ ಸ್ವಾಗತಿಸಿ, ಪ್ರಭಾಕರ ಶೆಟ್ಟಿ ಕೊಂಡಳ್ಳಿ ನಿರೂಪಿಸಿದರು, ಮೆಸ್ಕಾಂ ಅಧಿಕಾರಿ ನರಸಿಂಹ ಮೂರ್ತಿ ಪ್ರಸ್ತಾವನೆಗೈದರು. ಸಂತೋಷ್ ರಾವ್ ವಂದಿಸಿದರು.ಗೊಮ್ಮಟಬೆಟ್ಟ, ಚತುರ್ಮುಖ ಬಸದಿಯಲ್ಲೂ ಉದ್ಘಾಟನೆ ನಡೆಯಿತು.
ಜಟಕಾ ಬಂಡಿ ಏರಿ ಬಂದ ಸಚಿವ, ಶಾಸಕರು !
ಮೈಸೂರಿನಿಂದ ತರಿಸಲಾಗಿದ್ದ 10 ಜಟಕಾ ಬಂಡಿಗಳಲ್ಲಿ ಸಚಿವರು, ಶಾಸಕರು ಹಾಗೂ ಹಿರಿಯರು ಸರ್ವಜ್ಞ ವೃತ್ತದಿಂದ 3. ಕಿ ಮೀ. ದೂರದ ಬಸ್ ನಿಲ್ದಾಣಕ್ಕೆ ಆಗಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.