ಹಣ ದ್ವಿಗುಣ ನೆಪದಲ್ಲಿ ಮಹಿಳೆಯಿಂದ 8 ಲಕ್ಷ ರೂ.ವಂಚನೆ
Team Udayavani, Mar 13, 2022, 12:36 PM IST
ಬೆಂಗಳೂರು: ಹಣ ದ್ವಿಗುಣ ಮಾಡುವುದಾಗಿ ಟೈಲರ್‌ವೊಬ್ಬರಿಂದ 8 ಲಕ್ಷ ರೂ. ಪಡೆದು ವಂಚಿಸಿರುವ ಮಹಿಳೆ ಸೇರಿ ಐವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೆಜಿಹಳ್ಳಿ ನಿವಾಸಿ ನಟರಾಜನ್, ಸದಾಶಿವ ನಾಯಕ, ಶಿವರಾಜ್, ದಿಲ್ಲುಬೋನ್, ನಿರ್ಮಲಾ ಬಂಧಿತರು.
ಆರೋಪಿಗಳಿಂದ 8 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಕೆಜಿ ಹಳ್ಳಿಯಲ್ಲಿ ಟೈಲರ್ ಅಂಗಡಿ ಇಟ್ಟಿದ್ದ ರಂಗಸ್ವಾಮಯ್ಯಗೆ ವಂಚಿಸಿದ್ದರು. ಆರೋಪಿ ನಿರ್ಮಲಾ ಆಗಾಗ ರಂಗಸ್ವಾಮಯ್ಯ ಬಳಿ ಬರುತ್ತಿದ್ದು ನನ್ನಪರಿಚಿತರು ಹಣ ದ್ವಿಗುಣ ಮಾಡುತ್ತಿದ್ದು, 20 ಲಕ್ಷ ರೂ. ಕೊಟ್ಟರೆ, 60 ಲಕ್ಷ ರೂ. ನೀಡುವುದಾಗಿ ನಂಬಿಸಿದ್ದಳು. ಆಕೆಯ ಮಾತನ್ನು ನಂಬಿದ ರಂಗಸ್ವಾಮಯ್ಯ 8 ಲಕ್ಷ ರೂ. ಕೊಡುವುದಾಗಿ ಹೇಳಿದ್ದ. ಕೆಲ ದಿನಗಳ ಹಿಂದೆ 8 ಲಕ್ಷ ರೂ.ನ್ನು ಎಚ್‌ಬಿಆರ್ ಲೇಔಟ್‌ಗೆ ತೆಗೆದುಕೊಂಡು ಬರುವಂತೆ ಆರೋಪಿಗಳು ಸೂಚಿಸಿದ್ದರು.
ಇದನ್ನೂ ಓದಿ:ಹೆಮ್ಮಾಡಿ: ಸ್ಕೂಟಿಗೆ ಟಿಪ್ಪರ್ ಢಿಕ್ಕಿಯಾಗಿ ಮಹಿಳೆ ದಾರುಣ ಸಾವು; ಪತಿ, ಮಗು ಪಾರು
ಅದರಂತೆ ಆರೋಪಿಗಳು ಹೇಳಿದ ಸ್ಥಳಕ್ಕೆ ರಂಗ ಸ್ವಾಮಯ್ಯ ಬಂದಾಗ, ಆರೋಪಿ ನಟರಾಜನ್ ಇವರನ್ನು ಕಾರಿಗೆ ಹತ್ತಿಸಿಕೊಂಡಿದ್ದ. ಕಾರು ಒಂದು ಕಿ.ಮೀ. ದೂರ ಹೋಗುತ್ತಿದ್ದಂತೆ ಆರೋಪಿಗಳ ಪೈಕಿ ಮೂವರು ಪೊಲೀಸ್ ವೇಷ ಧರಿಸಿ ಕಾರು ಅಡ್ಡಗಟ್ಟಿದ್ದರು. ಬಳಿಕರಂಗಸ್ವಾಮಯ್ಯ ಅವರನ್ನು ಕಾರಿನಿಂದ ಕೆಳಗೆ ಇಳಿಸಿ, ಹಣ ಕಸಿದುಕೊಂಡು ಪರಾರಿಯಾಗಿದ್ದರು.
ಅಸಲಿ ಸಂಗತಿ ಏನು?: ಹಣ ದ್ವಿಗುಣ ಮಾಡುವ ಉದ್ದೇಶದಿಂದ ಆರೋಪಿಗಳಿಗೆ ಹಣ ನೀಡಲು ಮುಂದಾದ ವಿಚಾರ ಪೊಲೀಸರಿಗೆ ತಿಳಿಸಿದರೆ, ತನಗೂ ಕಾನೂನು ಸಂಕಷ್ಟ ಎದುರಾಗಬಹುದು ಎಂದುಕೊಂಡ ರಂಗಸ್ವಾಮಯ್ಯ ಪ್ರಕರಣದ ಬಗ್ಗೆ ತಿರುಚಿ ದೂರು ಕೊಟ್ಟಿದ್ದರು.
ಆರೋಪಿಗಳು ಸೆಕೆಂಡ್ ಹ್ಯಾಂಡ್ ಕಂಟೇನರ್ ಕೊಡಿಸುವ ಆಮಿಷವೊಡ್ಡಿ ಅದನ್ನು ಖರೀದಿಸಲು 8ಲಕ್ಷ ರೂ. ತರುವಂತೆ ಸೂಚಿಸಿದ್ದರು. 8 ಲಕ್ಷ ರೂ. ತರುತ್ತಿದ್ದಂತೆ ಪೊಲೀಸರ ಸೋಗಿನಲ್ಲಿ ಹಣ ದೋಚಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದರು. ಇತ್ತ ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕಕಾರ್ಯಾಚರಣೆ ನಡೆಸಿದಾಗ ದೂರುದಾರ ರಂಗ ಸ್ವಾಮಯ್ಯ ಕೊಟ್ಟ ಹೇಳಿಕೆಗೂ, ತನಿಖೆಯಲ್ಲಿ ಕಂಡುಬಂದ ವಿಚಾರಕ್ಕೂ ತಾಳೆಯಾಗುತ್ತಿರಲಿಲ್ಲ. ಅನು ಮಾನದ ಮೇರೆಗೆ ರಂಗಸ್ವಾಮಯ್ಯನನ್ನು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
MUST WATCH
ಹೊಸ ಸೇರ್ಪಡೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.