ದೇಶ ಉಳಿಯಲು ಅಧಿಕಾರಕ್ಕೆ ಬರಲಿ ಕಾಂಗ್ರೆಸ್
Team Udayavani, Mar 13, 2022, 12:03 PM IST
ಅಫಜಲಪುರ: ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟನೆ ಮಾಡುವ ಉದ್ದೇಶದಿಂದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಆನ್‌ಲೈನ್ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ ಹಾಲನಲ್ಲಿ ನಡೆದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಅಫಜಲಪುರ ಮತಕ್ಷೇತ್ರದ 251 ಬೂತ್‌ಗಳಲ್ಲಿ ಕನಿಷ್ಟ 200ಕ್ಕೂ ಹೆಚ್ಚು ಜನರ ಆನ್‍ಲೈನ್ ಸದಸ್ಯತ್ವ ಮಾಡಿಸಬೇಕು. ಈ ನಿಟ್ಟಿನಲ್ಲಿ ಜವಬ್ದಾರಿ ಹೊತ್ತು ಶ್ರಮ ವಹಿಸಿ ಕೆಲಸ ಮಾಡಿ, ಮಾರ್ಚ್ ಅಂತ್ಯದ ವರೆಗೆ ತಾಲೂಕಿನ 251 ಬೂತ್‌ಗಳಲ್ಲಿ 25 ಸಾವಿರ ಸದಸ್ಯತ್ವ ನೋಂದಣಿಯಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಎಂ.ವೈ. ಪಾಟೀಲ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಸೇವೆ ಸಲ್ಲಿಸಿದ ಪಕ್ಷ ಕಾಂಗ್ರೆಸ್. ಈ ದೇಶದ ಉಳಿವಿಗೆ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾಗಿದೆ. ಅಭಿವೃದ್ಧಿ ಮಾಡಿದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಮತದಾರರು ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಯಾಕೆ ಸೋಲಿಸಿದರು ಎನ್ನುವ ಅಳಕು ಕಾಡುತ್ತಿದೆ ಎಂದರು.
ಹಿರಿಯ ಮುಖಂಡ ಮಕ್ಬೂಲ್ ಪಟೇಲ್ ಮಾತನಾಡಿ, ಅಫಜಲಪುರ ಕಾಂಗ್ರೆಸ್ ಎನ್ನುವುದು ಲಗಾಮು ಇಲ್ಲದ ಕುದುರೆಯಂತಾಗಿದೆ. ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ಇಲ್ಲದಂತಾಗಿದೆ. ಮೂಲ ಕಾಂಗ್ರೆಸ್, ವಲಸಿಗ ಕಾಂಗ್ರೆಸ್ ಎನ್ನುವ ಕೂಗು ಬಹಳ ಗೊಂದಲ ಸೃಷ್ಟಿ ಮಾಡಿದೆ. ಶಾಸಕರ ಬೆಂಬಲಿಗರು ಮೂಲ ಬಿಜೆಪಿಗರಾಗಿದ್ದಾರೆ. ಪಕ್ಷದಲ್ಲಿ ಅವರದ್ದೇ ದರ್ಬಾರ್ ನಡೆಯುತ್ತಿದೆ. ಹೀಗಾಗಿ ಮೂಲ ಕಾಂಗ್ರೆಸ್ಸಿಗರಿಗೆ ಯಾರು ಕೇಳವವರಿಲ್ಲದಂತಾಗಿದೆ ಎನ್ನುತ್ತಿದ್ದಂತೆ ಗದ್ದಲದ ವಾತಾವರಣ ಸೃಷ್ಟಿಯಾಯಿತು.
ಮಾಜಿ ಸಚಿವ ಶರಣಪ್ರಕಾಸ ಪಾಟೀಲ ಮಧ್ಯ ಪ್ರವೇಶಿಸಿ, ಎಲ್ಲ ಪಕ್ಷಗಳಲ್ಲೂ ಸಮಸ್ಯೆಗಳಿವೆ. ಅದನ್ನು ಪಕ್ಷದ ಹಿರಿಯರ ಮುಂದೆ ಚರ್ಚಿಸಿ ಬಗೆಹರಿಸಿಕೊಳ್ಳಿ ಎಂದರು. ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ತಾಲೂಕು ಅಧ್ಯಕ್ಷ ಮಹಾಂತೇಶ ಪಾಟೀಲ, ಉಸ್ತುವಾರಿ ಸಂಜಯ ಜಾಗಿರದಾರ, ವಿಜಯಕುಮಾರ ರಾಮಕೃಷ್ಣ, ಪ್ರಕಾಶ ಜಮಾದಾರ, ಸಿದ್ಧಾರ್ಥ ಬಸರಿಗಿಡ, ಮತೀನ್ ಪಟೇಲ್, ನಾಗೇಶ ಕೊಳ್ಳಿ, ರಾಜಗೋಪಾಲ ರೆಡ್ಡಿ, ಸುರೇಶ ತಿಬಶೆಟ್ಟಿ, ಶಿವಶರಣಪ್ಪ ಹಿರಾಪೂರ, ಶರಣು ಕುಂಬಾರ ಹಾಗೂ ಕಾರ್ಯಕರ್ತರು ಇದ್ದರು.
ಯಾರಿಗೂ ನೊವುಂಟು ಮಾಡುವ ಉದ್ದೇಶದಿಂದ ವೇದಿಕೆಯಲ್ಲಿ ಮಾತನಾಡಿಲ್ಲ. ನಾನು ಹುಟ್ಟಿದ್ದೇ ಕಾಂಗ್ರೆಸ್ ಪಕ್ಷಕ್ಕಾಗಿ, ಸಾಯೋದು ಕಾಂಗ್ರೆಸ್ಸಿಗನಾಗಿ. ನನ್ನ ಹಿರಿತನಕ್ಕೆ ಪಕ್ಷದ ಯುವ ಮುಖಂಡರು ಗೌರವ ಕೊಡಬೇಕಾಗಿತ್ತು. ನನ್ನ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಗದ್ದಲ ಸೃಷ್ಟಿಸಿ ನನಗೆ ನೋವುಂಟು ಮಾಡಿದ್ದಾರೆ. ಪಕ್ಷದಲ್ಲಿ ಎಲ್ಲವು ಸರಿಯಾಗಿಲ್ಲ ಎನ್ನುವುದು ಗುಟ್ಟೇನು ಅಲ್ಲ. ಆದರೆ ಅದನ್ನು ಸರಿಪಡಿಸಿ ಎಲ್ಲರನ್ನು ಒಗ್ಗೂಡಿಸಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. -ಮಕ್ಬೂಲ್ ಪಟೇಲ್, ಹಿರಿಯ ಮುಖಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.