ಉದ್ಯೋಗಿಗಳ ಉಳಿತಾಯದ ಮೇಲೂ ಕೇಂದ್ರದ ಕಣ್ಣು
Team Udayavani, Mar 14, 2022, 6:00 AM IST
ದೇಶದ ಆರ್ಥಿಕ ವ್ಯವಸ್ಥೆಯು ಎದುರಿಸುತ್ತಿರುವ ಸಂಕಷ್ಟದ ಪರಿಣಾಮ ಗಳನ್ನು ದೇಶದ ಜನಸಾಮಾನ್ಯರು ಕಳೆದೆರಡು ವರ್ಷಗಳಿಂದ ಅನುಭವಿ ಸುತ್ತ ಬಂದಿದ್ದಾರೆ. 2019ರ ಅಂತ್ಯದಲ್ಲಿ ಚೀನದಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು 2020ರ ಆರಂಭದಲ್ಲಿ ವಿಶ್ವಾದ್ಯಂತ ವ್ಯಾಪಕವಾಗಿ ಹರಡಿ ಜನರ ಆರೋಗ್ಯದ ಮೇಲಷ್ಟೇ ಅಲ್ಲದೆ ಜನಜೀವನ, ಆರ್ಥಿಕ ವ್ಯವಸ್ಥೆಯ ಮೇಲೂ ಪರಿಣಾಮ ಬೀರಿತು. ಇದರಿಂದ ಭಾರತ ಕೂಡ ಹೊರತಾಗಿಲ್ಲ.
ಮಧ್ಯಮ ವರ್ಗ, ದುಡಿಯುವ ವರ್ಗ ಮತ್ತು ಜನಸಾಮಾನ್ಯರು ಈ ಎರಡು ವರ್ಷಗಳ ಅವಧಿಯಲ್ಲಿ ಪಟ್ಟ ಬವಣೆ ಅಷ್ಟಿಷ್ಟಲ್ಲ. ಕಾರ್ಮಿಕರ ಸಾಮೂಹಿಕ ವಲಸೆ, ಉದ್ಯೋಗ ನಷ್ಟ, ವೇತನ, ಭತ್ತೆಗಳಲ್ಲಿ ಕಡಿತ, ಬೆಲೆ ಏರಿಕೆಯ ಬಿಸಿಯ ನಡುವೆ ವೇತನ ಪರಿಷ್ಕರಣೆಯ ಬದಲು ಇದ್ದ ವೇತನಕ್ಕೆ ಕತ್ತರಿ.. ಹೀಗೆ ಈ ವರ್ಗಗಳ ಜನರು ಅನುಭವಿಸಿದ ಪಡಿ ಪಾಟಲು ಒಂದೆ ರಡಲ್ಲ. ದೈನಂದಿನ ಜೀವನ ನಡೆಸುವುದೇ ದುಸ್ತರ ಎಂಬ ಪರಿಸ್ಥಿತಿಗೆ ಜನಸಾಮಾನ್ಯರು ತಲುಪಿದಾಗ ಸರಕಾರ ನೀಡಿದ ನೀಡಿದ ನೆರವು “ನೀರಿನಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬಂತಾಯಿತು. ದೇಶದ ಜನತೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಮಗ್ನರಾಗಿ ಹಣಕಾಸು ಸಂಕಷ್ಟದಿಂದ ಹೊರಬರಲು ಪ್ರಯತ್ನಿಸುತ್ತಿರುವಾಗ ರಷ್ಯಾ ಸೇನೆ ಉಕ್ರೇನ್ ಮೇಲೆ ಸಮರ ಸಾರಿದೆ. ಇದರ ಪರಿಣಾಮ ತೈಲ ಬೆಲೆ ಏರುಗತಿಯಲ್ಲಿ ಸಾಗಿದ್ದು ಅಗತ್ಯ ವಸ್ತುಗಳ ಧಾರಣೆಯೂ ಹೆಚ್ಚತೊಡ ಗಿದೆ. ಇವೆಲ್ಲದರ ನೇರ ಪರಿಣಾಮವನ್ನು ಜನಸಾಮಾನ್ಯರು ಮತ್ತು ದುಡಿಯುವ ವರ್ಗ ಅನುಭವಿಸುತ್ತಿದೆ.
ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರದ ಅಧೀನದಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಚಂದಾದಾರರ ಭವಿಷ್ಯನಿಧಿ ಮೊತ್ತದ ಮೇಲೆ 2021-22ನೇ ಸಾಲಿನಲ್ಲಿ ಶೇ. 8.1 ಬಡ್ಡಿ ದರ ನೀಡಲು ನಿರ್ಧರಿಸುವ ಮೂಲಕ ಇನ್ನೊಂದು ಹೊಡೆತವನ್ನು ನೀಡಿದೆ. ತಮ್ಮ ಭವಿಷ್ಯದ ಹಿತದೃಷ್ಟಿಯಿಂದ ಸಂಸ್ಥೆಯಲ್ಲಿ ಒಂದಿಷ್ಟು ಉಳಿತಾಯ ಮಾಡುವ ಹಣಕ್ಕೆ ಸರಕಾರ ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದ ಬಡ್ಡಿ ದರವನ್ನು ನೀಡಲು ಮುಂದಾಗಿದೆ. ಈ ಮೂಲಕ ಸಂಸ್ಥೆಗೆ 450 ಕೋ. ರೂ. ಉಳಿತಾಯವಾಗಲಿದ್ದು ಒಂದೇ ಮಾತಿನಲ್ಲಿ ಹೇಳುವುದ್ದಾರೆ ಇದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ.
ಇಪಿಎಫ್ಒನ ಈ ತೀರ್ಮಾನ ಮಧ್ಯಮ ವರ್ಗದವರ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲೇ ಹಣಕಾಸು ಮುಗ್ಗಟ್ಟಿನಲ್ಲಿ ಸಿಲುಕಿರುವ ಮಧ್ಯಮ ವರ್ಗದ ಮೇಲೆ ಬರೆ ಎಳೆಯುವಂಥ ನಿರ್ಧಾರವನ್ನು ಸರಕಾರ ಕೈಗೊಂಡು ತೀರಾ ಅಚ್ಚರಿಯನ್ನುಂಟು ಮಾಡಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗಿಯವರ ಸುಪರ್ದಿಗೆ ಒಪ್ಪಿಸುವ ಮೂಲಕ ತನ್ನ ಮೇಲಣ ಹೊರೆಯನ್ನು ಕಡಿಮೆ ಮಾಡುತ್ತಲೇ ಬಂದಿರುವ ಸರಕಾರ ಇದೀಗ ಉದ್ಯೋಗಿಗಳ ಉಳಿತಾಯದ ಮೇಲೂ ಕೆಂಗಣ್ಣು ಬೀರಿರುವುದು ಸಹಜವಾಗಿಯೇ ಮಧ್ಯಮವರ್ಗದ ಉದ್ಯೋಗಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಮಧ್ಯಮ ವರ್ಗದ ಜನರಿಗೆ ನಿವೃತ್ತಿ ಮತ್ತು ತೀರಾ ತುರ್ತು ಸಂದರ್ಭ ನೆರವಿಗೆ ಬರುವ ಏಕೈಕ ನಿಧಿ ಎಂದರೆ ಪಿಎಫ್. ಇದರಲ್ಲಿ ಉಳಿತಾಯವಾಗುವ ಹಣದ ಮೇಲಿನ ಬಡ್ಡಿಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾದರೆ ಗತಿ ಏನು ಎಂಬುದು ಅವರ ಪ್ರಶ್ನೆಯಾಗಿದೆ. ಅಭಿವೃದ್ಧಿ, ಸೇವೆ, ಸುಧಾರಣೆಯ ನೆಪದಲ್ಲಿ ಜನಸಾಮಾನ್ಯರು, ಕಾರ್ಮಿಕರು, ಮಧ್ಯಮ ವರ್ಗದವರ ಮೇಲೆ ಕೇಂದ್ರ ಸರಕಾರ ನಿರಂತರವಾಗಿ ಹೊರೆ ಹೇರುತ್ತಿರುವುದು ಆತಂಕಕಾರಿ ವಿಚಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.