![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Mar 14, 2022, 6:12 PM IST
ರಬಕವಿ-ಬನಹಟ್ಟಿ : ಸರ್ಕಾರದ ಲೆಸನ್ಸ್ ಅಥವಾ ಅನುಮತಿಯಿಲ್ಲದೆ ಮತ್ತು ನಶೆಗೆ ಬರಿಸುವ ಪಪ್ಪಿ ಸ್ಟ್ರಾ (ಗಸಗಸೆ) ತೊಗಟೆಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ ಪ್ರಕರಣ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನಡೆದಿದೆ.
ತೇರದಾಳ ಪೊಲೀಸ್ ಠಾಣೆ ವ್ಯಾಪ್ತಿಯ ರಬಕವಿಯ ಉಪ್ಪಾರ ಗಲ್ಲಿಯ ಗುರುದೇವ ಬ್ರಹ್ಮಾನಂದ ಪಟ್ಟಣ ಸಹಕಾರಿ ಬ್ಯಾಂಕ್ ಸಮೀಪವಿರುವ ಮಹಾದೇವ ಹೊಸೂರ ಹಾಗು ಅಲ್ಲಪ್ಪ ಹೊಸೂರ ಎಂಬ ಇಬ್ಬರು ಸಹೋದರರು ಸೇರಿ ಈ ಅಕ್ರಮ ದಂಧೆ ನಡೆಸುತ್ತಿದ್ದರು. ಪೊಲೀಸರಿಗೆ ಖಚಿತ ಮಾಹಿತಿಯನ್ವಯ ಆರೋಪಿತರ ಮನೆ ಶೋಧ ನಡೆಸಿದ ಪೊಲೀಸರಿಗೆ ಅಂದಾಜು 24 ಸಾವಿರ ರೂ.ಗಳ 4.5 ಕೆ.ಜಿ. ತೂಕದಷ್ಟು ನಶೆ ಬರಿಸುವ ಪಪ್ಪಿ ಸ್ಟ್ರಾ (ಗಸಗಸೆ) ತೊಗಟೆಗಳು ದೊರೆತಿವೆ.
ಈ ಕುರಿತು ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಆರ್.ವಾಯ್ ಬೀಳಗಿ ತನಿಖೆ ಮುಂದುವರೆಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.