ಹುಣಸೂರು ನಗರಸಭೆಗೆ 84.50 ಲಕ್ಷ ಉಳಿತಾಯ ಬಜೆಟ್

Team Udayavani, Mar 14, 2022, 6:29 PM IST

ಹುಣಸೂರು ನಗರಸಭೆಗೆ 84.50 ಲಕ್ಷ ಉಳಿತಾಯ ಬಜೆಟ್

ಹುಣಸೂರು: ಹುಣಸೂರು ನಗರಸಭೆಯ 2022-23ನೇ ಸಾಲಿಗೆ 84.50 ಲಕ್ಷರೂಗಳ ಉಳಿತಾಯ ಬಜೆಟ್‌ನ್ನು ನಗರಸಭೆ ಅಧ್ಯಕ್ಷೆ ಸೌರಭ ಸಿದ್ದರಾಜು ಮಂಡಿಸಿದರು.

ನಗರಸಭಾ ಸಭಾಂಗಣದಲ್ಲಿ ಸೋಮವಾರ ನಡೆದ ಬಜೆಟ್ ಸಭೆಯಲ್ಲಿ 2022-23ನೇ ಸಾಲಿನ ಆಯ-ವ್ಯಯ ಮಂಡಿಸಿದ ಅಧ್ಯಕ್ಷರು ಪ್ರಾರಂಭಿಕ ಶಿಲ್ಕು 1011.97 ಲಕ್ಷರೂ ಸೇರಿದಂತೆ ವಿವಿಧ ಬಾಪ್ತುಗಳ ಮೂಲಕ 3543.85ಲಕ್ಷ(35.43 ಕೋಟಿ,85ಸಾ.), ಆದಾಯ ನಿರೀಕ್ಷಿಸಿದ್ದರೆ. ವಿವಿಧ ಯೋಜನೆಗಳು ಸೇರಿದಂತೆ ಇತರೆ ಬಾಪ್ತಿಗೆ  ಒಟ್ಟಾರೆ 3459.೩೫ಲಕ್ಷರೂಗಳನ್ನು ಖರ್ಚು ಮಾಡಲುದ್ದೇಶಿಸಿದ್ದು, ಒಟ್ಟಾರೆ 84.50 ಲಕ್ಷ ಉಳಿತಾಯವಾಗಲಿದೆ ಎಂದು ಪ್ರಕಟಿಸಿದರು.

ಆದಾಯದ ಮೂಲ: ನಗರಸಭೆಯ ಸಂಪನ್ಮೂಲಗಳಾದ ಆಸ್ತಿ ತೆರಿಗೆಯಿಂದ 344.50 ಲಕ್ಷ, ನೀರು ಸರಬರಾಜು ಶುಲ್ಕ 62.50 ಲಕ್ಷ, ಉದ್ದಿಮೆ ರಹದಾರಿ 10 ಲಕ್ಷ, ವಾಣಿಜ್ಯ ಸಂರ್ಕೀರ್ಣಗಳ ಬಾಡಿಗೆ ೮೫ಲಕ್ಷ, ನಗರ ಯೋಜನೆ ಮತ್ತು ಕಟ್ಟಡಗಳ ಪರವಾನಗಿ ಶುಲ್ಕ 9 ಲಕ್ಷ, ಮುದ್ರಾಂಕ ಶುಲ್ಕ5 ಲಕ್ಷ, ಇತರೆ ಬಾಪ್ತುಗಳಿಂದ ೪೦ಲಕ್ಷ ಸೇರಿದಂತೆ 556ಲಕ್ಷರೂ ಸ್ವಂತ ಸಂಪನ್ಮೂಲ ನಿರೀಕ್ಷಿಸಲಾಗಿದೆ.

ಸರಕಾರದ ಅನುದಾನಗಳ ವಿವರ: ಸರಕಾರದಿಂದ ಎಸ್.ಎಫ್.ಸಿ.ವೇತನ ಅನುದಾನ 335ಲಕ್ಷ, ಎಸ್.ಎಫ್.ಸಿ. ಮುಕ್ತನಿಧಿ 96 ಲಕ್ಷ, ಎಸ್.ಎಫ್.ಸಿ.ವಿದ್ಯುತ್‌ಚಕ್ತಿ-ನೀರು ಸರಬರಾಜು  ಅನುದಾನ 724 ಲಕ್ಷ, ಎಸ್.ಎಫ್.ಸಿ. ಕುಡಿಯುವ ನೀರಿನ ಅನುದಾನ 2.50 ಲಕ್ಷ, 2018-19 ರ ಎಸ್.ಎಫ್.ಸಿ.ವಿಶೇಷ ಅನುದಾನ ಹಂಚಿಕೆಯಡಿ 350 ಲಕ್ಷ, 15 ನೇಹಣಕಾಸುಆಯೋಗದ ಅನುದಾನ 248ಲಕ್ಷ, ಇತರೆ ಅನುದಾನ 30 ಲಕ್ಷ ಸೇರಿದಂತೆ ಒಟ್ಟು 1785.50 ಲಕ್ಷರೂ ಅನುದಾನ ಸರಕಾರದಿಂದ ಲಭಿಸಲಿದೆ.

ಪ್ರಮುಖ ಖರ್ಚಿನವಿವರ: ಕಟ್ಟಡ ಅಭಿವೃದ್ದಿ ಮತ್ತು ನಿರ್ವಹಣೆ ೩೭ಲಕ್ಷರೂ, ರಸ್ತೆ ಅಭಿವೃದ್ದಿ ಮತ್ತು ನಿರ್ವಹಣೆ 355 ಲಕ್ಷ, ರಸ್ತೆಬದಿ ಹಾಗೂ ಮಳೆನೀರು ಚರಂಡಿ ಅಭಿವೃದ್ದಿ ಹಾಗೂ ನಿರ್ವಹಣೆ 265 ಲಕ್ಷ, ಒಳಚರಂಡಿ ನಿರ್ವಹಣೆ ಹಾಗೂ ಅಭಿವೃದ್ದಿ 65 ಲಕ್ಷ, ಉದ್ಯಾನವನ-ಸ್ಮಶಾನ ಅಭಿವೃದ್ದಿ 188.50ಲಕ್ಷ,  ಘನತ್ಯಾಜ್ಯವಸ್ತು ನಿರ್ವಹಣೆಗೆ 236 ಲಕ್ಷ, ಬೀದಿದೀಪ ಅಭಿವೃದ್ದಿ ಹಾಗೂ ನಿರ್ವಹಣೆ ೮೦ಲಕ್ಷ, ನೀರುಸರಬರಾಜು ಅಭಿವೃದ್ದಿ ಮತ್ತು ನಿರ್ವಹಣೆ 212.50 ಲಕ್ಷ. ಶೇ.24.10ರ ಯೋಜನೆಗೆ ೩೦ಲಕ್ಷ, ಶೇ.7.25ಕ್ಕೆ 10 ಲಕ್ಷ, ಶೇ.5ಕ್ಕೆ 7ಲಕ್ಷರೂ ಸೇರಿದಂತೆ ಒಟ್ಟು 1496 ಲಕ್ಷ ರೂ ಖರ್ಚು ಮಾಡಲು ಹಾಗೂ ವಿವಿಧ ಯೋಜನೆಗಳ ಅನುಷ್ಟಾನ, ಆರೋಗ್ಯ, ಸಂಬಳ ನಿರ್ವಹಣೆಗೆ ವೆಚ್ಚ ಮಾಡಲು ಉದ್ದೇಶಿಸಲಾಗಿದೆ ಎಂದರು.

ಅಮೃತ್ ಯೋಜನೆಗೆ 25 ಕೋಟಿ: ನರಗೋತ್ಥಾನ-೪ನೇ ಹಂತದ ಅಮೃತ್ ಯೋಜನೆಯಡಿ 25 ಕೋಟಿರೂ ಬಿಡುಗಡೆಯಾಗಿದ್ದು, ಈಗಾಗಲೆ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದ್ದು, ನಗರದ ಮೂಲಭೂತ ಸೌಕರ್ಯ ಕಲ್ಪಿಸಲು ಸಹಕಾರಿಯಾಗಿದೆ ಎಂದು ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದರು. ಅಧ್ಯಕ್ಷರು ಮಂಡಿಸುತ್ತಿದ್ದಂತೆ  ಎಲ್ಲಾ ಸದಸ್ಯರು ಪ್ರಥಮ ಬಾರಿಗೆ ಪಕ್ಷಬೇಧ ಮರೆತು ಮೇಜು ಕುಟ್ಟಿ ಸ್ವಾಗತಿಸಿದರು.

ಮೀಟರ್ ಅಳವಡಿಸಲು ಒತ್ತಾಯ: ಬಜೆಟ್ ಮೇಲಿನ ಚರ್ಚೆ ವೇಳೆ ಸದಸ್ಯರಾದ ಶರವಣ, ಕೃಷ್ಣರಾಜಗುಪ್ತ, ಸ್ವಾಮಿಗೌಡ, ಸತೀಶ್‌ಕುಮಾರ್‌ರವರು ನೀರು ಸರಬರಾಜು ಶುಲ್ಕ ಕೇವಲ 62.50 ಲಕ್ಷರೂ ಆದಾಯ ನಿರೀಕ್ಷಿಸಲಾಗಿದೆ. ಆದರೆ ಅನಧಿಕೃತ ನಲ್ಲಿಗಳೇ ಹೆಚ್ಚಿದ್ದು, ಮೀಟರ್ ಅಳವಡಿಸಿದ್ದೇ ಆದಲ್ಲಿ ನಗರಸಭೆಗೆ ಸುಮಾರು 5 ಕೋಟಿರೂ ಆದಾಯ ಬರಲಿದೆ. ಗ್ರಾ.ಪಂಗಳೇ ಮೀಟರ್ ಅಳವಡಿಸಿದ್ದಾರೆ. ಈಗಲಾದರೂ ಅಗತ್ಯ ಕ್ರಮವಹಿಸಬೇಕೆಂಬ ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕ್ಕೂ ನೆರವಾಗಿ: ಮಾಜಿ ಅಧ್ಯಕ್ಷೆ ಅನುಷಾ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ನಿರ್ಮಿಸಲು ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸಲು ಹಾಗೂ ಸದಸ್ಯ ಸತೀಶ್ ಕಲಾವಿದರಿಗೆ, ಕೃಷ್ಣರಾಜಗುಪ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಅನುದಾನ ಮೀಸಲಿರಿಸಬೇಕೆಂಬ ಮನವಿಗೆ ಅಧ್ಯಕ್ಷರು ಅಗತ್ಯ ಕ್ರಮವಹಿಸುವ ಭರವಸೆ ಇತ್ತರು.

ಪತ್ರಕರ್ತರ ಕ್ಷೇಮಾಭಿವೃದ್ದಿಗೆ 5 ಲಕ್ಷ: ಪತ್ರಕರ್ತರು ಮತ್ತವರ ಕುಟುಂಬದ ಆರೋಗ್ಯ ಮತ್ತು ಕ್ಷೇಮಾಭಿವೃದ್ದಿಗಾಗಿ 5 ಲಕ್ಷರೂ ಮೀಸಲಿಡುವಂತೆ ಸದಸ್ಯರಾದ ಸತೀಶ್,ಸ್ವಾಮಿಗೌಡ, ಶರವಣ, ಕೃಷ್ಣರಾಜಗುಪ್ತ, ಅನುಷಾರ ಪ್ರಸ್ತಾಪಕ್ಕೆ ಕ್ರಮವಹಿಸಲಾಗಿದೆ ಎಂದರು.

ಸ್ವಾಗತ ಕಮಾನು ನಿರ್ಮಾಣ:

ನಗರದ ನಾಲ್ಕು ದಿಕ್ಕುಗಳಲ್ಲೂ 20 ಲಕ್ಷರೂ ವೆಚ್ಚದಡಿ ಸ್ವಾಗತ ಕಮಾನು ನಿರ್ಮಾಣ, ಎಲ್ಲಾ ವಾಡ್‌ಗಳ ಕ್ರಾಸ್, ಮುಖ್ಯರಸ್ತೆಗಳಲ್ಲಿ ನಾಮಫಲಕ ಅಳವಡಿಸಲು 10 ಲಕ್ಷರೂ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 10 ಲಕ್ಷರೂ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿದೆ.

ಸಭೆಯಲ್ಲಿ ಉಪಾಧ್ಯಕ್ಷ ದೇವನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಯೂನಸ್, ಪೌರಾಯುಕ್ತ ರವಿಕುಮಾರ್ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇದ್ದರು. ಲೆಕ್ಕಅಧೀಕ್ಷಕ ಚಂದ್ರೇಗೌಡರು ಬಜೆಟ್ ಸಂಬಂಧಿತ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ಟಾಪ್ ನ್ಯೂಸ್

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು

IPL Mega Auction: Here’s what RCB’s team looks like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್‌ ಸಿಬಿ ತಂಡ ಹೀಗಿದೆ ನೋಡಿ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.