ಅದ್ಧೂರಿ ಬಂಗಲೆಗಳಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ?
Team Udayavani, Mar 15, 2022, 7:20 AM IST
ರಷ್ಯಾ ದಾಳಿಯಿಂದ ಕಂಗೆಟ್ಟಿರುವ ಉಕ್ರೇನ್ ನಾಗರಿಕರು ಯುನೈಟೆಡ್ ಕಿಂಗ್‌ಡಮ್‌ಗೆ ಕೂಡ ಆಗಮಿಸುವ ಸಾಧ್ಯತೆ. ಅಂಥವರಿಗೆ ಆಶ್ರಯ ಕೊಡುವ ನಿಟ್ಟಿನಲ್ಲಿ ಯು.ಕೆ. ಸರಕಾರ ರಷ್ಯಾದ ಅತ್ಯಂತ ಶ್ರೀಮಂತ ವರ್ಗದವರು ದೇಶದಲ್ಲಿ ಹೊಂದಿದ ಬಂಗಲೆಗಳನ್ನು ವಶಪಡಿಸಿಕೊಂಡು, ಅದರಲ್ಲಿ ವಸತಿ ಕಲ್ಪಿಸಲು ನಿರ್ಧರಿಸಿದೆ. ರಷ್ಯಾದ ಯಾವ ಶ್ರೀಮಂತರು ಯು.ಕೆ. ನಗರಗಳಲ್ಲಿ ಹೊಂದಿರುವ ಅದ್ಧೂರಿ ಬಂಗಲೆಗಳ ವಿವರ ಇಲ್ಲಿದೆ
1. ರೋಮನ್ ಅಬ್ರಮೋವಿಚ್
ಬಂಗಲೆ ಹೆಸರು: ಕಿಂಗ್ಸ್‌ಸ್ಟನ್ ಪ್ಯಾಲೇಸ್ ಗಾರ್ಡನ್, ಲಂಡನ್
ಲಂಡನ್‌ನಲ್ಲಿ ಅವರು 70 ಮನೆಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅವುಗಳ ಮೌಲ್ಯವೇ 500 ಮಿಲಿಯ ಪೌಂಡ್. ಈ ಪೈಕಿ ಅದ್ಧೂರಿ ಮತ್ತು ಬೆಲೆ ಬಾಳುವ ಬಂಗಲೆ ಎಂದರೆ ಲಂಡನ್‌ನಲ್ಲಿ ಇರುವ ಕಿಂಗ್ಸ್‌ಸ್ಟನ್ ಪ್ಯಾಲೇಸ್ ಗಾರ್ಡನ್. ಅದರ ಮೌಲ್ಯವೇ 150 ಮಿಲಿಯ ಪೌಂಡ್.
2. ಅಲಿಷರ್ ಉಸ್ಮಾನೋವ್
ಬಂಗಲೆ ಹೆಸರು: ಸಟನ್ ಪ್ಲೇಸ್, ಸರ್ರೆ
ಲಂಡನ್‌ನ ಉತ್ತರ ಭಾಗದಲ್ಲಿರುವ ಹೈಗೇಟ್ ಎಂಬಲ್ಲಿ ರಷ್ಯಾದ ಆಗರ್ಭ ಶ್ರೀಮಂತ 11 ಎಕ್ರೆ ಪ್ರದೇಶದಲ್ಲಿ ಅದ್ಧೂರಿ ಬಂಗಲೆ ಹೊಂದಿದ್ದಾರೆ. 2008ರಲ್ಲಿ ಅವರು 48 ಮಿಲಿಯನ್ ಪೌಂಡ್ ನೀಡಿ ಅದನ್ನು ಖರೀದಿಸಿದ್ದರು.
3. ಒಲೆಗ್ ಡೆರಿಪಸ್ಕಾ
ಬಂಗಲೆ ಹೆಸರು: ಹ್ಯಾಮ್‌ಸ್ಟನ್ ಹೌಸ್ ವೇಬ್ರಿಡ್ಜ್, ಸರ್ರೆ
ಹೆದ್ದಾರಿ ಬದಿಯಲ್ಲಿ ಸಣ್ಣ ಪ್ರಮಾಣದ ಹೊಟೇಲ್‌ಗಳ ಸರಣಿಯನ್ನು ಹೊಂದಿರುವ ಅವರು, ವೇಬ್ರಿಡ್ಜ್ ಎಂಬಲ್ಲಿ ಹ್ಯಾಮ್‌ಸ್ಟನ್ ಹೌಸ್ ಮಾಲಕತ್ವ ಹೊಂದಿದ್ದಾರೆ. ಅವರು ಲಂಡನ್‌ನಲ್ಲಿ 50 ಮಿಲಿಯ ಪೌಂಡ್ ಮೌಲ್ಯ ಇನ್ನೊಂದು ಅದ್ದೂರಿ ಬಂಗಲೆಯನ್ನೂ ಹೊಂದಿದ್ದಾರೆ.
4. ಇಗೋರ್ ಶುವಲೋವ್
ಬಂಗಲೆ ಹೆಸರು: 4 ವೈಟ್ ಹಾಲ್ ಕೋರ್ಟ್, ಲಂಡನ್
ರಷ್ಯಾದ ಮಾಜಿ ಉಪ ಪ್ರಧಾನಿಯಾಗಿರುವ ಅವರು, 5,380 ಚದರ ಅಡಿ ವಿಸ್ತೀರಣ ಹೊಂದಿರುವ ಪೆಂಟ್‌ಹೌಸ್ ಅನ್ನು ಹೊಂದಿದ್ದಾರೆ. ಇದಲ್ಲದೆ 11.5 ಮಿಲಿಯ ಪೌಂಡ್ ಮೊತ್ತದ ಅಪಾರ್ಟ್‌ಮೆಂಟ್ ಅನ್ನೂ ಅವರು ಹೊಂದಿದ್ದಾರೆ.
5 ಬೋರಿಸ್ ರೊಟೆನ್‌ಬರ್ಗ್
ಬಂಗಲೆ ಹೆಸರು: ಕಡೋನ್‌ಲೇನ್, ಲಂಡನ್
ರಷ್ಯಾದ ಎಸ್‌ಎಂಪಿ ಬ್ಯಾಂಕ್‌ನ ಸಹ ಮಾಲಕರಾಗಿರುವ ಅವರು, ಬೆಲ್ಗಾವಿಯಾದಲ್ಲಿ ಮೂರು ಅಂತಸ್ತಿನ ಅದ್ಧೂರಿ ಬಂಗಲೆಯನ್ನು ಹೊಂದಿದ್ದಾರೆ. ಅದರ ಮಾಲಕತ್ವ ಬೇರೆಯವರ ಬಳಿ ಇದೆ.
6. ಆ್ಯಂಡ್ರೇ ಕೋಸ್ಟಿನ್
ಬಂಗಲೆ ಹೆಸರು: ಸೊಲೇನ್ ಕೋರ್ಟ್ ವೆಸ್ಟ್. ಲಂಡನ್
ರಷ್ಯಾದ ವಿಟಿಬಿ ಬ್ಯಾಂಕ್‌ನ ಅಧ್ಯಕ್ಷರಾಗಿರುವ ಅವರು, ಲಂಡನ್‌ನ ಸೊಲೇನ್‌ನಲ್ಲಿ ನಾಲ್ಕು ಬೆಡ್‌ರೂಮ್‌ನ ಫ್ಲ್ಯಾಟ್ ಅನ್ನು ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.