ಒಂದೇ ವರ್ಷ 1,397 ಶಾಲೆಗಳಿಗೆ ಬೀಗ! ಕರಾವಳಿಯಲ್ಲಿ 100ಕ್ಕೂ ಅಧಿಕ ಶಾಲೆ ಬಂದ್
Team Udayavani, Mar 15, 2022, 9:45 AM IST
ಉಡುಪಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಬ್ಬ ವಿದ್ಯಾರ್ಥಿಯೂ ದಾಖಲಾಗದಿರುವ ರಾಜ್ಯದ 1,397 ಶಾಲೆಗಳನ್ನು ಶಾಶ್ವತವಾಗಿ ಮುಚ್ಚಲಾಗಿದೆ.
ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಲು ಹಲವು ಪ್ರಯೋಗಗಳು ಜಾರಿಯಲ್ಲಿವೆ. ಕೊರೊನಾದ ಬಳಿಕ ಸರಕಾರಿ ಶಾಲೆಗಳಲ್ಲಿ ದಾಖಲಾತಿಯೂ ಹೆಚ್ಚಾಗಿದೆ. ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ ಒದಗಿಸುವ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅನು ಷ್ಠಾನಕ್ಕೂ ಸಿದ್ಧತೆ ನಡೆಯುತ್ತಿದೆ. ಇವೆಲ್ಲದರ ನಡುವೆಯೂ 2021-22ನೇ ಸಾಲಿನಲ್ಲಿ 285 ಸರಕಾರಿ ಪ್ರಾಥಮಿಕ, 2 ಸರಕಾರಿ ಪ್ರೌಢಶಾಲೆಗಳಿಗೆ ಶಾಶ್ವತವಾಗಿ ಬೀಗ ಹಾಕಲಾಗಿದೆ.
ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಿರ್ವಹಣೆ ಕೊರತೆ, ಮಕ್ಕಳ ದಾಖಲಾತಿ ಇಲ್ಲದೆ 721 ಖಾಸಗಿ ಪ್ರಾಥಮಿಕ, 245 ಪ್ರೌಢಶಾಲೆ, 101 ಅನುದಾನಿತ ಪ್ರಾಥಮಿಕ, 37 ಪ್ರೌಢಶಾಲೆಗಳು ಹಾಗೂ ಇತರ 6 ಶಾಲೆಗಳು ಸ್ಥಗಿತಗೊಂಡಿವೆ.
ಕಲಬುರಗಿಯಲ್ಲೇ ಹೆಚ್ಚು
ಇಡೀ ರಾಜ್ಯದಲ್ಲೇ ಕಲಬುರಗಿಯಲ್ಲಿ 181 ಪ್ರಾಥಮಿಕ ಹಾಗೂ 52 ಪ್ರೌಢಶಾಲೆಗೆ ಬೀಗ ಹಾಕಲಾಗಿದೆ. ಬೆಂಗಳೂರು ದಕ್ಷಿಣದಲ್ಲಿ 130 ಪ್ರಾಥಮಿಕ, 56 ಪ್ರೌಢಶಾಲೆ, ಬೆಂಗಳೂರು ಉತ್ತರದಲ್ಲಿ 83 ಪ್ರಾಥಮಿಕ ಹಾಗೂ 48 ಪ್ರೌಢಶಾಲೆ, ಉಡುಪಿಯಲ್ಲಿ 79 ಪ್ರಾಥಮಿಕ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನಲ್ಲಿ ತಲಾ 63 ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಹೀಗೆ ಎಲ್ಲ ಶೈಕ್ಷಣಿಕ ಜಿಲ್ಲೆಗಳಲ್ಲೂ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಉತ್ತರ ಕನ್ನಡದಲ್ಲಿ 3, ಕೊಡಗಿನಲ್ಲಿ 4, ಧಾರವಾಡದಲ್ಲಿ 5, ಗದಗ, ಚಿಕ್ಕೋಡಿ, ಶಿರಸಿಯಲ್ಲಿ ತಲಾ 6 ಸರಕಾರಿ ಶಾಲೆ ಮುಚ್ಚಿದ್ದು, ಅತಿ ಕಡಿಮೆ ಶಾಲೆ ಮುಚ್ಚಿರುವ ಪಟ್ಟಿಯಲ್ಲಿವೆ.
ಶಾಲೆ ಮುಚ್ಚಲು ಕಾರಣ
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಯನ್ನು ಸ್ಥಳೀಯ ಶಾಲೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಕೆಲವು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಅನುದಾನಿತ ಹಾಗೂ ಖಾಸಗಿ ಶಾಲೆಗಳು ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ಅನುಭವಿಸಿವೆ. ನಿರ್ವಹಣೆ ಕೊರತೆ, ಬೋಧಕ, ಬೋಧಕೇತರ ಸಿಬಂದಿ ಕೊರತೆಯಿಂದ ವಿದ್ಯಾರ್ಥಿಗಳ ದಾಖಲಾತಿಯೂ ಕುಸಿದಿರುವುದರಿಂದ ಶಾಶ್ವತವಾಗಿ ಮುಚ್ಚುವಂತಾಗಿದೆ.
ಕರಾವಳಿಯಲ್ಲಿ 100ಕ್ಕೂ ಅಧಿಕ
ಉಡುಪಿ ಜಿಲ್ಲೆಯಲ್ಲಿ 12 ಸರಕಾರಿ, 19 ಅನುದಾನಿತ ಹಾಗೂ 48 ಅನು ದಾನ ರಹಿತ ಶಾಲೆ ಸಹಿತ ಒಟ್ಟು 79 ಪ್ರಾಥಮಿಕ ಶಾಲೆ ಹಾಗೂ 1 ಅನುದಾನಿತ ಪ್ರೌಢ ಶಾಲೆ ಯನ್ನು ಈ ವರ್ಷ ಮುಚ್ಚಲಾಗಿದೆ. ದ.ಕ. ದಲ್ಲಿ 2 ಸರಕಾರಿ, 5 ಅನುದಾನಿತ ಹಾಗೂ 4 ಖಾಸಗಿ ಶಾಲೆ ಸಹಿತ 11 ಪ್ರಾಥಮಿಕ ಶಾಲೆ, 2 ಅನುದಾನಿತ, 6 ಖಾಸಗಿ ಶಾಲೆ ಸಹಿತ 8 ಪ್ರೌಢಶಾಲೆಗಳನ್ನು ಮುಚ್ಚಲಾಗಿದೆ.
ಮಕ್ಕಳ ದಾಖಲಾತಿಯೇ ಇಲ್ಲದಾಗ ಶಾಲೆ ಮುಚ್ಚುವುದು ಅನಿವಾರ್ಯ. ಗ್ರಾಮಗಳಲ್ಲಿ ಸರಕಾರಿ ಶಾಲೆಗೆ ಬರುವ ಮಕ್ಕಳೇ ಇಲ್ಲದಾಗ ಶಾಲೆ ನಡೆಸಲು ಸಾಧ್ಯವಿಲ್ಲ. ಮುಚ್ಚಿದ ಶಾಲೆಗಳ ಶಿಕ್ಷಕರನ್ನು ಬೇರೆ ಕಡೆಗೆ ನಿಯೋಜಿಸುತ್ತಿದ್ದೇವೆ.
-ಡಾ| ವಿಶಾಲ್ ಆರ್., ಆಯುಕ್ತ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ
ಒಂದೂ ಮಗುವೂ ದಾಖಲಾಗದೆ ಇರುವ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲೇ ಬೇಕಾಗುತ್ತದೆ. ಹೀಗಾಗಿಯೇ ಗ್ರಾಮ ಕ್ಕೊಂದು ಮಾದರಿ ಶಾಲೆ ಆರಂಭಿಸಲು ಪ್ರಯತ್ನಿಸುತ್ತಿದ್ದೇವೆ. ಮೊದಲ ಹಂತದಲ್ಲ ಹೋಬಳಿಗೆ ಒಂದು ಮಾದರಿ ಶಾಲೆ ಆರಂಭಿಸಲಿದ್ದೇವೆ.
– ಬಿ.ಸಿ. ನಾಗೇಶ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ
- ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.