ಹುಣಸೂರು: ಭಿನ್ನಾಭಿಪ್ರಾಯ ಮರೆತು ಲೋಕ್ ಅದಾಲತ್ ನಲ್ಲಿ ಒಂದಾದ ಎರಡು ಜೋಡಿ
Team Udayavani, Mar 15, 2022, 11:36 AM IST
ಹುಣಸೂರು: ಹುಣಸೂರಿನ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಎರಡು ಜೋಡಿ ದಂಪತಿಗಳು ಒಂದಾಗಿ ನ್ಯಾಯಾಧೀಶರ ಸಮ್ಮುಖದಲ್ಲೇ ಹಾರ ಬದಲಾಯಿಸಿಕೊಂಡು ಸಂತಸದಿಂದ ಮನೆಯತ್ತ ತೆರಳಿದದ್ದು ವಿಶೇಷವಾಗಿತ್ತು.
ಕೌಟುಂಬಿಕ ಕಲಹದಿಂದ ಕೋರ್ಟ್ ಮೆಟ್ಟಿಲೇರಿ ವಿಚ್ಚೇದನಕ್ಕೆ ಮುಂದಾಗಿದ್ದ ಹುಣಸೂರಿನ ಪೂಜಾಹಂಸ ಮತ್ತು ಮೈಸೂರಿನ ಪ್ರವೀಣ್ ಹಾಗೂ ಹುಣಸೂರಿನ ವಿಜಯಸೇನಾ ಮತ್ತು ಹೊಳೆನರಸೀಪುರದ ಅರ್ಪಿತಾ ದಂಪತಿಗಳನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀನಿವಾಸ್ ಹಾಗೂ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿರಿನ್ ಜೆ.ಅನ್ಸಾರಿಯವರು ಹಾಗೂ ವಕೀಲರು ಪ್ರತ್ಯೇಕವಾಗಿ ನಡೆಸಿದ ಸಂದಾನದ ಮೂಲಕ ಒಂದುಗೂಡಿಸಿ, ಅವರ ಬಾಳಿನಲ್ಲಿ ಬೆಳಕು ಮೂಡಿಸಿದರು. ಕೋರ್ಟ್ ಆವರಣದಲ್ಲೇ ದಂಪತಿಗಳು ಎಲ್ಲರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ಸಂತಸದಿಂದಲೇ ಮನೆಕಡೆ ಹೆಜ್ಜೆ ಹಾಕಿದರೆ, ಇಡೀ ನ್ಯಾಯಾಲಯದ ಸಿಬ್ಬಂದಿಗಳು, ವಕೀಲರು ಸಂಭ್ರಮಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.
4,137 ಪ್ರಕರಣ ಇತ್ಯರ್ಥ:
ಹುಣಸೂರಿನ ಐದು ವಿವಿಧ ನ್ಯಾಯಾಲಯಗಳಿಂದ ರಾಜಿ ಸಂದಾನಕ್ಕೆ ಮುಂದಾಗಿದ್ದ 4,366 ಪ್ರಕರಣಗಳ ಪೈಕಿ ಬ್ಯಾಂಕಿನ 6 ಹಣ ವಸೂಲಾತಿ, 40 ಚೆಕ್ ಬೌನ್ಸ್ ಪ್ರಕರಣ, 6 ಅಕ್ರಮ ಮರಳುಗಾರಿಕೆ, ೩೦೪ ಜನನ-ಮರಣ ಪ್ರಕರಣ ಸೇರಿದಂತೆ ಒಟ್ಟು 4,137 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು. ರಾಜಿ ಸಂದಾನದ ಮೂಲಕ ವಿವಿಧ ಪ್ರಕರಗಳಲ್ಲಿ 1,33,94,134 ರೂ.ಗಳನ್ನು ಸೆಟಲ್‌ಮೆಂಟ್‌ಗೊಳಿಸಲಾಯಿತು.
ವಿವಿಧ ನ್ಯಾಯಾಲಯಗಳಲ್ಲಿ ನಡೆದ ಅದಾಲತ್‌ನಲ್ಲಿ 8ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಪಾಟೀಲ ಮೋಹನಕುಮಾರ್ ಭೀಮನಗೌಡ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಶ್ರೀನಿವಾಸ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿರಿನ್ ಜೆ.ಅನ್ಸಾರಿ, ಪ್ರಧಾನ ಸಿವಿಲ್ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಬಸವರಾಜತಳವಾರ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಣ್ಣ ಹನಮಗೌಡರವರು ಹಾಗೂ ವಕೀಲವೃಂದ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.