ಜಾತ್ರೆಯಲ್ಲಿ ಪ್ರಾಣಿ ಬಲಿ ಬೇಡ
Team Udayavani, Mar 15, 2022, 2:09 PM IST
ಹರಿಹರ: ಗ್ರಾಮದೇವತೆ ಹಬ್ಬ ಮಾ. 22ರಿಂದ 26ರವರೆಗೆ ನಡೆಯಲಿದೆ. ದಲಿತರಿಗೆ, ಹಿಂದುಳಿದವರಿಗೆ, ಬಡವರಿಗೆ
ಆರ್ಥಿಕ ಹೊರೆಯಾಗದಂತೆ ಹಾಗೂ ಮೌಡ್ಯತೆಯನ್ನು ಹೊರತುಪಡಿಸಿ ಆಚರಿಸಲ್ಪಡಬೇಕು ಎಂದು ತಾಲೂಕು
ದಸಂಸ ಸಂಚಾಲಕ ಪಿ.ಜೆ. ಮಹಾಂತೇಶ್ ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ಒತ್ತಾಯಿಸಿದ್ದಾರೆ.
ಹೆಣ್ಣು ದೇವತೆಗಳಿಗೆ ಪ್ರಾಣಿ ಬಲಿ ನೀಡಬೇಕಾಗುತ್ತದೆ ಎಂಬ ಮೌಡ್ಯತೆಯನ್ನು ಸಮಾಜದಲ್ಲಿ ಬೆಳೆಸಲಾಗಿದೆ. ವಾಸ್ತವವಾಗಿ ಯಾವುದೆ ದೇವ, ದೇವತೆ ಪ್ರಾಣಿ ಬಲಿಯನ್ನು ಬೇಡುವುದಿಲ್ಲ.ನಮ್ಮಲ್ಲಿರುವ ದುಷ್ಟತನವನ್ನು ಬಲಿ ನೀಡಬೇಕು. ಉತ್ಸವದಲ್ಲಿ ಮಹಿಳೆಯರು, ಮಕ್ಕಳು ಅರೆಬೆತ್ತಲೆಯಾಗಿ ಬೇವಿನ ಉಡುಗೆ ತೊಡುವುದು ಮೌಡ್ಯತೆಯ ಪ್ರತೀಕ. ಅಧಿಕಾರಿಗಳು ಭಕ್ತಾದಿಗಳ ಮನವೊಲಿಸಿ ಮೌಡ್ಯತೆ ತಡೆಯಬೇಕು. ದಲಿತರು, ಹಿಂದುಳಿದವರು ಲಕ್ಷಾಂತರ
ರೂ. ಸಾಲ ಪಡೆದು ಕುರಿ ಬಲಿ ನೀಡುತ್ತಾರೆ. ಈ ಸಾಲ ಹಾಗೂ ಬಡ್ಡಿಯನ್ನು ತೀರಿಸಲು ಕುಟುಂಬದ ಸದಸ್ಯರು
ವರ್ಷ ತುಂಬ ದುಡಿದು ತೀರಿಸುವ ಅನಿವಾರ್ಯತೆಗೆ ಸಿಲುಕುತ್ತಾರೆ. ಮನೆಯಲ್ಲಿ ಮಗ ಅಥವಾ ಮಗಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸದ ಜನರು ಇಂತಹ ಉತ್ಸವಕ್ಕೆ ಲಕ್ಷಾಂತರ ರೂ. ಸುರಿಯುವುದು ವ್ಯರ್ಥವಾಗಿದೆ. ಈ
ಕುರಿತು ಆಯಾ ಸಮಾಜಗಳ ಪ್ರಜ್ಞಾವಂತರು, ಉತ್ಸವ ಸಮಿತಿಯವರು, ಜಿಲ್ಲಾ, ತಾಲೂಕು ಆಡಳಿತದವರು
ಜನತೆಯಲ್ಲಿ ವ್ಯಾಪಕ ಜಾಗೃತಿಯನ್ನು ಮೂಡಿಸಬೇಕು.
ಶೋಷಿತರು ಸದಾ ಆರ್ಥಿಕ ಹೊರೆ, ಮೌಡ್ಯತೆ, ಮೂಢನಂಬಿಕೆಗಳ ಚಕ್ರವ್ಯೂಹದಲ್ಲಿ ಸಿಲುಕಿರಬೇಕೆಂಬ ಕೆಲವರ ಶಡ್ಯಂತ್ರವೂ ಇಂತಹ ಆಚರಣೆಗಳಲ್ಲಿ ಅಡಗಿದೆ ಎಂಬುದನ್ನು ಜನತೆ ಅರಿಯಬೇಕಿದೆ. ಕಳೆದೆರಡು ವರ್ಷ ಕೋವಿಡ್ ಲಾಕ್ಡೌನ್ ಆಗಿ ಜನರು ಸಂಕಷ್ಟದಲ್ಲಿದ್ದಾರೆ. ಒಟ್ಟಾರೆ ಈ ಹಬ್ಬ ಭಕ್ತಿಪೂರ್ವಕವಾಗಿ, ಸರಳವಾಗಿ, ಆರ್ಥಿಕವಾಗಿ ಹೊರೆಯಾಗದಂತೆ ಮೌಡ್ಯರಹಿತವಾಗಿರಲಿ. ಜಿಲ್ಲಾಧಿಕಾರಿಯವರು ಈಗಾಗಲೇ ಕೋಣ ಬಲಿ ನೀಡಬಾರದೆಂದು ಆದೇಶಿಸಿದ್ದಾರೆ. ಕೋಣದ ದೇಹದಿಂದ ಸಿರೀಂಜ್ ಮೂಲಕ ರಕ್ತ ತೆಗೆದು ಬಲಿ ನೀಡುವ ಪ್ರಕ್ರಿಯೆ ನಡೆಸುವಂತಾಗಲಿ ಎಂದು ಅವರು ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.