ಲೋಕ ಅದಾಲತ್‌ನಲ್ಲಿ 8262 ಪ್ರಕರಣ ಇತ್ಯರ್ಥ
ವಿಮಾ ಕಂಪನಿಯಿಂದ 81 ಲಕ್ಷ ರೂ. ಪರಿಹಾರ
Team Udayavani, Mar 15, 2022, 1:20 PM IST
ಬಾಗಲಕೋಟೆ: ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ವಿಚಾರಣಾ ಹಂತದಲ್ಲಿದ್ದ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣವೊಂದರಲ್ಲಿ ವಿಮಾ ಕಂಪನಿ 81 ಲಕ್ಷ ರೂ.ಗಳ ಪರಿಹಾರ ಕೊಡಿಸುವ ಕಾರ್ಯ ನಡೆಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್. ದೇಶಪಾಂಡೆ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ಶಿಬಿರದಲ್ಲಿ ಮೋಟಾರ್ ವಾಹನ ಕಾಯ್ದೆಯಡಿ ಒಟ್ಟು 37 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದ್ದು, ಈ ಪೈಕಿ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣ ಒಂದರಲ್ಲಿ ವಿಮಾ ಕಂಪನಿ 81 ಲಕ್ಷ ರೂ.ಗಳ ಪರಿಹಾರ ನೀಡಲು ಒಪ್ಪಿಕೊಂಡಿದೆ.
ಜಿಲ್ಲೆಯಲ್ಲಿ ಒಟ್ಟು 174 ಎಲ್ .ಎ.ಸಿ ಅಮಲಜಾರಿ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದರಿಂದ 7,57,25,728 ಸಂತ್ರಸ್ಥರಿಗೆ ಪರಿಹಾರ ನೀಡಲಾಗಿದೆ. 45 ಎಂ.ಎಂ.ಆರ್.ಡಿ ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ. ಅದರಿಂದ 11,26,296 ರೂ.ಗಳನ್ನು ಸರಕಾರಕ್ಕೆ ಜಮೆ ಮಾಡಲಾಗಿದೆ. ಅದೇ ರೀತಿಯ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಪಾಲು ವಾಟ್ನಿಗಳಿಗೆ ಸಂಬಂ ಧಿಸಿದಂತೆ 201 ಪ್ರಕರಣ ಸಹ ಇತ್ಯರ್ಥಪಡಿಸಲಾಗಿದೆ. ಬಾಗಲಕೋಟೆ ಮತ್ತು ಬಾದಾಮಿ ನ್ಯಾಯಾಲಯಗಳಲ್ಲಿ ತಲಾ ಒಂದು ಪ್ರಕರಣಗಳಲ್ಲಿ ದಂಪತಿ ವಿಚ್ಚೇದನ ಹಿಂಪಡೆದು ಒಂದಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 27 ನ್ಯಾಯಾಲಯ ಪೀಠಗಳಿದ್ದು, ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಒಟ್ಟು 50818 ಪೈಕಿ 11001 ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಲಾಗಿತ್ತು. ಅದರಲ್ಲಿ 7910 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು 18.31 ಕೋಟಿ ರೂ.ಗಳಿಗೆ ಬಗೆಹರಿಸಲಾಯಿತು. ಅದೇ ರೀತಿ 417 ವಾಜ್ಯ ಪೂರ್ವ ಪ್ರಕರಣ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 352 ಪ್ರಕರಣಗಳನ್ನು ಇತ್ಯರ್ಥಕೊಂಡು ಒಟ್ಟು 70.86 ಲಕ್ಷ ರೂ.ಗಳಿಗೆ ಬಗೆಹರಿಸಲಾಯಿತು. ಒಟ್ಟಾರೆಯಾಗಿ 11418 ಪ್ರಕರಣಗಳ ಪೈಕಿ 8262 ಪ್ರಕರಣಗಳು ಇತ್ಯರ್ಥ ಪಡಿಸಲಾಯಿತು. ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಒಟ್ಟು 3656 ಪೈಕಿ 2878 ಪ್ರಕರಣಗಳು ಇತ್ಯರ್ಥವಾದರೆ, ಬಾದಾಮಿ ಕೋರ್ಟ್‌ನಲ್ಲಿ 1103 ಪ್ರಕರಣಗಳ ಪೈಕಿ 905, ಬನಹಟ್ಟಿ ಕೋರ್ಟ್‌ನಲ್ಲಿ 1311 ಪ್ರಕರಣಗಳ ಪೈಕಿ 841, ಬೀಳಗಿ ಕೋರ್ಟ್‌ನಲ್ಲಿ 709 ಪ್ರಕರಣಗಳ ಪೈಕಿ 454, ಹುನಗುಂದ ಕೋರ್ಟನಲ್ಲಿ 1706 ಪ್ರಕರಣಗಳ ಪೈಕಿ 1278, ಜಮಖಂಡಿ ಕೋರ್ಟ್‌ನಲ್ಲಿ 1468 ಪ್ರಕರಣಗಳ ಪೈಕಿ 771 ಹಾಗೂ ಮುಧೋಳ ಕೋರ್ಟನಲ್ಲಿ 1048 ಪ್ರಕರಣಗಳ ಪೈಕಿ 787 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು. ಅಲ್ಲದೇ 417 ವಾಜ್ಯಪೂರ್ವ ಪ್ರಕರಣಗಳಲ್ಲಿ 101 ಬ್ಯಾಂಕಿಗೆ ಸಂಬಂಧಿಸಿದ್ದು, 116 ವಿದ್ಯುತ್ ಬಿಲ್, 90 ನೀರಿನ ಬಿಲ್, 1 ಕಂಜೂಮರ್ ನ್ಯಾಯಾಲಯ, 44 ಅಬಕಾರಿಗೆ ಸಂಬಂಧಿಸಿದ ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳನ್ನು ರಾಜೀ ಸಂಧಾನ ಮೂಲಕ ಇತ್ಯರ್ಥಪಡಿಸಲಾಯಿತು.
ಲೋಕ ಅದಾಲತ್‌ನಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ ನ್ಯಾಯಾಧಿಧೀಶ ಸಂತೋಷ ಸಿ.ಬಿ, ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧಿಧೀಶೆ ಶೀಲಾ ಎನ್, ಪ್ರಧಾನ ಹಿರಿಯ ನ್ಯಾಯಾ ಧೀಶ ಮತ್ತು ಸಿ.ಜೆ ಎಂ.ಕಲ್ಪನಾ ಎಂ.ಎಸ್, 1ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶರಾದ ಪಲ್ಲವಿ ಆರ್, 2ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ದ್ಯಾವಪ್ಪ ಎಸ್.ಬಿ, ಪ್ರಧಾನ ದಿವಾಣಿ ನ್ಯಾಯಾಧೀಶ ನಾಗರಾಜ ಎಸ್, ಹೆಚ್ಚುವರಿ ದಿವಾಣಿ ನ್ಯಾಯಾಧಿಧೀಶ ಪ್ರಶಾಂತ ಚಟ್ನಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.