ಕಳಪೆ ರಸಗೊಬ್ಬರ ಸಾಗಾಟ: ರೈತರ ಆರೋಪ
ಲಾರಿಯೊಂದರಲ್ಲಿ 600 ಚೀಲ 17.17.17 ರಸಗೊಬ್ಬರ ಸಾಗಿಸಲಾಗುತ್ತಿತ್ತು
Team Udayavani, Mar 15, 2022, 3:16 PM IST
ಕೊಪ್ಪಳ: ತಾಲೂಕಿನ ಇರಕಲ್‌ಗಡಾ ಮಾರ್ಗವಾಗಿ ತೆರಳುತ್ತಿದ್ದ ರಸಗೊಬ್ಬದ ಲಾರಿಯನ್ನು ತಡೆದ ರೈತರು ಗೊಬ್ಬರ ಪರಿಶೀಲನೆ ನಡೆಸಿ, ಇದು ಕಳಪೆ ಗೊಬ್ಬರ ಬೇರೆಡೆ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಪೊಲೀಸರಿಗೆ ಗೊಬ್ಬರದ ಸಮೇತ ಲಾರಿಯನ್ನು ಒಪ್ಪಿಸಿದ ಘಟನೆ ಸೋಮವಾರ ನಡೆದಿದೆ.
ಲಾರಿಯೊಂದರಲ್ಲಿ 600 ಚೀಲ 17.17.17 ರಸಗೊಬ್ಬರ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಅನುಮಾನಗೊಂಡ ರೈತರು ಇರಕಲ್‌ಗಡ ಗ್ರಾಮದಲ್ಲಿ ತಡೆದು, ಗೊಬ್ಬರದ ಚೀಲಗಳನ್ನು ಕೆಳಗಿಳಿಸಿ ಪರಿಶೀಲನೆ ನಡೆಸಿದ್ದಾರಲ್ಲದೇ, ಇದು ಕಳಪೆ ಗೊಬ್ಬರವೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಲಾರಿಯು ಕೊಪ್ಪಳದ ಕೆಪಿಆರ್ ಕಾರ್ಖಾನೆಯಿಂದ ಬೀದರ್‌ಗೆ ತೆರಳುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ರಸಗೊಬ್ಬರ ಕಳಪೆಯಾಗಿರುವುದನ್ನು ಪತ್ತೆ ಮಾಡಿದ ಬಗ್ಗೆ ರೈತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಕೃಷಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮ್ಮುಖದಲ್ಲಿ ರಸಗೊಬ್ಬರವನ್ನು ಪರಿಶೀಲನೆ ನಡೆಸಿದರು.
ರೈತರ ಪ್ರಕಾರ, ರಸಗೊಬ್ಬರ ನೀರಿನಲ್ಲಿ ಹಾಕಿದ ತಕ್ಷಣ ಕರಗುತ್ತದೆ. ಆದರೆ ಈ ರಸಗೊಬ್ಬರ ಕರಗುತ್ತಲೇ ಇಲ್ಲ. ಇದರಿಂದ ಇರಬೇಕಾದ ರಸಾಯನಿಕ ಪ್ರಮಾಣವೂ ಇಲ್ಲ ಎಂದೆನ್ನುತ್ತಿದ್ದಾರೆ. ಆದರೆ, ಇದನ್ನು ತಕ್ಷಣ ಪರಿಶೀಲನೆ ಮಾಡಲು ಆಗುವುದಿಲ್ಲ. ಪ್ರಯೋಗಾಲದಲ್ಲಿಯೇ ಇದರ ಸತ್ಯಾಸತ್ಯತೆ ಪರೀಕ್ಷೆ ಮಾಡಬೇಕು. ಹೀಗಾಗಿ, ರೈತರ ದೂರು ಆಧರಿಸಿ ರಸಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯ ವರದಿ ಬಂದ ಮೇಲೆಯೇ ಇದನ್ನು ಪತ್ತೆ ಮಾಡಲು ಸಾಧ್ಯ ಎಂದಿದ್ದಾರೆ. ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಗೊಬ್ಬರ ಕಳಪೆಯೋ ಗುಣಮಟ್ಟಧ್ದೋ ಗೊತ್ತಾಗಲಿದೆ.
ಲಾರಿಯಲ್ಲಿನ ಗೊಬ್ಬರವನ್ನು ಪರಿಶೀಲನೆ ನಡೆಸಿರುವ ರೈತರು ಅದು ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ. ಹಾಗಾಗಿ ನಾವು ಆ ಗೊಬ್ಬರದ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
–ಕುಮಾರಸ್ವಾಮಿ, ವಿಚಕ್ಷಣ ದಳದ ಅಧಿಕಾರಿ, ಕೃಷಿ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.