ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ
Team Udayavani, Mar 15, 2022, 5:33 PM IST
ಇಂಡಿ: ಮಕ್ಕಳ ವಿದ್ಯಾದಾನದ ತಾಣಗಳಾದ ಅಂಗನವಾಡಿಗಳಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಅಂಗನವಾಡಿಗಳ ಮೂಲಕ ಸರ್ವರಿಗೂ ಶಿಕ್ಷಣ ಎಂಬ ಧ್ಯೇಯ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಕೆಲ ಭಾಗಗಳಲ್ಲಿ ಅಂಗನವಾಡಿಗಳಿಗೆ ಕಟ್ಟಡವಿಲ್ಲ. ಇದರಿಂದ ಮಕ್ಕಳ ಶಿಕ್ಷಣದ ಕುಸಿಯುತ್ತಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ 6 ವರ್ಷದ ಒಳಗಿನ ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯ ಒದಗಿಸುವ ಸಲುವಾಗಿ ನಿರ್ಮಾಣಗೊಳ್ಳುತಿರುವ ತಾಲೂಕಿನ ಸುಮಾರು 25 ಅಂಗನವಾಡಿ ಕೇಂದ್ರಗಳು ಅಪೂರ್ಣವಾಗಿ ನಿಂತಿದೆ.
ತಾಲೂಕಿನಾದ್ಯಂತ ಸುಮಾರು 6 ವರ್ಷಗಳ ಹಿಂದೆಯೇ ಅಂಗನವಾಡಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಇದುವರೆಗೆ ಅಂಗನವಾಡಿ ಕೇಂದ್ರಗಳು ಕೆಲವೊಂದು ಲೆಂಟಲ್‌ಗೆ ಬಂದರೆ ಕೆಲವು ಸ್ಲ್ಯಾಬ್ ಮತ್ತು ಸುಣ್ಣ, ಬಣ್ಣ, ಪರ್ಸಿ ಹಾಕಿಸಬೇಕಾಗಿದೆ. ಆದರೆ ಆರು ವರ್ಷ ಕಳೆದರೂ ಸಹ ಇದುವರೆಗೂ ಅದು ಪೂರ್ಣಗೊಳ್ಳದೆ ಹಾಳು ಬಿದ್ದಿವೆ.
ಇಂಡಿ ತಾಲೂಕಿನಲ್ಲಿ ಒಟ್ಟು 323 ಅಂಗನವಾಡಿ ಕೇಂದ್ರಗಳು ಅದರಲ್ಲಿ 210 ಸ್ವಂತ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 88 ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಡಗಳೇ ಗತಿಯಾಗಿವೆ.
16 ಅಂಗನವಾಡಿ ಕೇಂದ್ರಗಳು ಪಂಚಾಯತ್ ಜಾಗದಲ್ಲಿದ್ದು, 9 ಕೇಂದ್ರಗಳು ಸಮುದಾಯ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದು. 34 ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಇಲ್ಲ. 54 ಕೇಂದ್ರಗಳಿಗೆ ಜಾಗವಿದ್ದರೂ ಅನುದಾನವಿಲ್ಲ. ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರದ ಕಾಮಗಾರಿಯು 2015-16ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ 5 ಲಕ್ಷ ರೂ., ಸಿಡಿಪಿಒ ಇಲಾಖೆಯಿಂದ 3 ಲಕ್ಷ ರೂ. ಅನುದಾನ ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಬೇಕಾದ ಅಂಗನವಾಡಿ ಕಟ್ಟಡ ಕಾಮಗಾರಿ ಇನ್ನೂ ಮುಗಿಯದಿರುವುದು ವಿಪರ್ಯಾಸಕರ ಸಂಗತಿ.
ಅಂಗನವಾಡಿ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರನಾಗಲಿ, ಅಧಿಕಾರಿಗಳಾಗಲಿ ಯಾರೊಬ್ಬರು ಸಹ ಕಟ್ಟಡ ಕಾಮಗಾರಿ ಪೂರ್ಣಮಾಡುವ ಕೆಲಸಕ್ಕೆ ಮುಂದಾಗದಿರುವುದು ಸ್ಥಳೀಯರು ಆಕ್ರೋಶಕ್ಕೆ ಕಾರಣವಾಗಿದೆ.
ಅಂಗನವಾಡಿ ಕಟ್ಟಡ ಅರ್ಧಕ್ಕೆ ನಿಂತ ಪರಿಣಾಮ ಮಕ್ಕಳಿಗೆ ಬೇರೆ ಕಡೆ ಕೂಡಿಸಿ ವಿದ್ಯಾಭ್ಯಾಸ ಮಾಡುಸುತ್ತಿದ್ದಾರೆ. ರಾತ್ರಿಯಾದರೆ ಅಲ್ಲಿ ಸಿಗರೇಟ್ ಸೇದಲು, ಸಾರಾಯಿ ಕುಡಿಯಲು ಮತ್ತು ಇನ್ನಿತರ ಚಟುವಟಿಕೆ ನಡೆಸುವವರಿಗೆ ಆಶ್ರಯ ತಾಣವಾಗಿದೆ ಎನ್ನುತ್ತಿದ್ದಾರೆ ಅಲ್ಲಿನ ನಿವಾಸಿಗಳು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 2-3 ವರ್ಷಗಳಿಂದ ಅನುದಾನ ಕೊರತೆಯಿಂದ ಅಂಗನವಾಡಿ ಕಟ್ಟಡದ ಕಾಮಗಾರಿಗಳು ಸ್ವಲ್ಪ ವಿಳಂಬವಾಗಿದೆ. ಮತ್ತೆ ಜಿಲ್ಲಾ ಪಂಚಾಯತ್ ಸಿಎಸ್ ಅವರಿಂದ ಅನೂಮೋದನೆ ಪಡೆದು ಅತಿ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಆರಂಭಿಸಲಾಗುತ್ತದೆ. –ರಾಜಕುಮಾರ ತೋರವಿ, ಸಹಾಯಕ ಕಾರ್ಯನಿವಾಕ ಎಂಜಿನಿಯರ್ ಪಂ.ರಾ.ಇಂ.ಉಪ ವಿಭಾಗ ಇಂಡಿ
ಯಲಗೊಂಡ ಬೇವನೂರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.