ಮರೆಯಾಗುತ್ತಿರುವ ಚರ್ಮದ ತಮಟೆಗಳು: ಮಾರುಕಟ್ಟೆ ಲಗ್ಗೆಇಟ್ಟ ಪೈಬರ್ ತಮಟೆಗಳು
ಪೈಬರ್ ಹಲಗೆ(ತಮಟೆ)ಗೆ ಮಾರು ಹೋದ ಯುವ ಜನತೆ
Team Udayavani, Mar 15, 2022, 5:54 PM IST
ರಬಕವಿ-ಬನಹಟ್ಟಿ: ಜಾಗತೀಕರಣದ ಪ್ರಭಾವದಿಂದಾಗಿ ನಾವು ನಮ್ಮ ಹಬ್ಬಗಳ ಸಂದರ್ಭದಲ್ಲಿ ಅನೇಕ ಸಾಂಪ್ರದಾಯಕ ವಸ್ತುಗಳನ್ನು ಕಳೆದುಕೊಂಡಿದ್ದೇವೆ. ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಚರ್ಮದ ಹಲಿಗೆ(ತಮಟೆ) ಗಳನ್ನು ಬಳಸುತ್ತಿದ್ದರು. ಆದರೆ ಈಗ ಮಾರುಕಟ್ಟೆಯಲ್ಲಿ ಫೈಬರ್ ಹಲಗೆ(ತಮಟೆ) ಗಳ ಮಾರಾಟ ಜೋರಾಗಿರುವುದರಿಂದ ಚರ್ಮದ ಹಲಗೆ(ತಮಟೆ) ಗಳು ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.
ಫೈಬರ್ ಹಲಗೆಗಳು ಮಾರುಕಟ್ಟೆ ಪ್ರವೇಶ ಮಾಡಿದ್ದರಿಂದ ಚರ್ಮದ ಹಲಗೆಗಳ ಮಾರಾಟ ಕಡಿಮೆಯಾಗಿದೆ. ನಮ್ಮ ಗ್ರಾಮೀಣ ಪ್ರದೇಶದ ಜನರು ಸಹಿತ ಆಧುನಿಕ ಪೈಬರ್ ಹಲಗೆಗಳನ್ನು ಖರೀದಿಗೆ ಮಾರು ಹೋಗಿರುವುದರಿಂದ ಚರ್ಮದ ಹಲಗೆಯನ್ನು ಕೇಳುವವರೇ ಇಲ್ಲದಂತಾಗಿದೆ.
ಮೂರು ತಲೆಮಾರುಗಳಿಂದ ಚರ್ಮ ವಾದ್ಯಗಳನ್ನು ತಯಾರು ಮಾಡುವುದನ್ನು ತಮ್ಮ ಕುಟುಂಬದ ವೃತ್ತಿಯನ್ನಾಗಿಸಿಕೊಂಡಿರುವ ನಗರದ ಕೆಲವು ಕುಟುಂಬಗಳು ಇಂದು ಕೂಡಾ ತಮ್ಮ ಮನೆಯಲ್ಲಿ ಚರ್ಮದ ಹಲಗೆಗಳನ್ನು ತಯಾರು ಮಾಡಿ ತಮ್ಮ ಉಪಜೀವನವನ್ನು ಸಾಗಿಸುತ್ತಿದ್ದಾರೆ. ಈ ಬಾರಿ ಚರ್ಮದ ಹಲಗೆಗಳನ್ನು ಕೇಳುವವರೆ ಇಲ್ಲ ಎನ್ನುತ್ತಾರೆ.
ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದು, ಎಲ್ಲೆಂದರಲ್ಲಿ ತಡ ರಾತ್ರಿವರೆಗೆ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ವಿವಿಧ ಶೈಲಿಯಲ್ಲಿ ಹಲಗೆಯನ್ನು ನುಡಿಸುತ್ತಾ ಹೋಳಿ ಸಂಭ್ರಮದಲ್ಲಿದ್ದಾರೆ. ಮೊದಲು ಹಲಗೆಗಳು ಕಡಿಮೆ ಇದ್ದವು ಈಗ ಪ್ರತಿಯೊಂದು ಮನೆಯಲ್ಲಿಯೂ ಪೈಬರ್ ಹಲಗೆ ಎರಡರಿಂದ ಮೂರು ಹಲಗೆಗಳು ಕಂಡು ಬರುತ್ತವೆ.
ಆಧುನಿಕತೆಯ ಪೈಬರ್ ಹಲಗೆಗಳು ಈಗಾಗಲೇ ಚರ್ಮದ ಹಲಗೆಗಳ ಮರುಕಟ್ಟೆಯನ್ನು ಸಂಪೂರ್ಣವಾಗಿ ಕಸಿದುಕೊಂಡಿದ್ದು, ಬಣ್ಣ ಬಣ್ಣದ ಚರ್ಮದ ಹಲಗೆಯ ಸುಮಧುರ ನಾದ ಇಂದು ಪೈಬರ ಹಲಗೆಗಳ ಕರ್ಕಷ ನಾದಕ್ಕೆ ಕರಗಿ ಹೋಗುತ್ತಿದೆ. ಮುಂದೊಂದು ದಿನ ಸಂಪ್ರದಾಯದ ಚರ್ಮದ ಹಲಗೆಗಳು ಹೊಳಿ ಹುಣ್ಣಿಮೆಯ ನೆನಪುಗಳಾಗಿ ಉಳಿಯಲಿವೆ.
ಇದನ್ನೂ ಓದಿ:ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಿರಂತರ ಪ್ರತಿಭಟನೆ; ತೀನ ಘೋಷಣೆ
ಹೋಳಿ ಹಬ್ಬವು ಅತ್ಯಂತ ಪವಿತ್ರವಾಗಿದೆ. ಇಂದು ಫೈಬರ್ ಹಲಗೆಗಳು ಕರ್ಕಶ ಶಬ್ದಗಳನ್ನು ಉಂಟು ಮಾಡುತ್ತವೆ. ನಿಜವಾಗಿಯೂ ಚರ್ಮದ ವಾದ್ಯಗಳನ್ನು ಕೇಳುವುದು ಉತ್ತಮ. ನಮ್ಮಿಂದ ದೂರವಾಗುತ್ತಿರುವ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕಿದೆ. – ಸಿದ್ದರಾಜ ಪೂಜಾರಿ ಹಿರಿಯ ಸಾಹಿತಿಗಳು, ರಬಕವಿ-ಬನಹಟ್ಟಿ
ಪೈಬರ್ ಹಲಗೆಗಳಿಂದ ನಮ್ಮ ಸಂಪ್ರದಾಯಗಳು ಮಾಯವಾಗುತ್ತಿವೆ. ಅದು ನೀಡುವ ಸಂದೇಶ ಮರೆಯಾಗುತ್ತಿದೆ. ಚರ್ಮದ ಹಲಗೆಯಿಂದ ಹೊರಡುವ ನಾದದ ಸೊಬಗೇ ಬೇರೆ ಆ ಮಾಧುರ್ಯ ಪೈಬರ್ ಹಲಗೆಗೆ ಇರುವುದಿಲ್ಲ. ಪೈಬರ್ ಹಲುಗೆಯಿಂದ ಪರಿಸರನಾಶವಾಗುತ್ತದೆ ಹೊರತು ಬೇರೆನಿಲ್ಲ. – ಶಿವಾನಂದ ಗಾಯಕವಾಡ, ಹಿಂದೂ ಸಂಘಟನೆಗಳ ಮುಖಂಡರು, ಬನಹಟ್ಟಿ
– ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.