ದುಬಾರಿಯಾಯಿತು ಮ್ಯಾಗಿ,ಬ್ರೂ, ನೆಸ್ಕೆಫೆ! ಬೆಲೆ ಏರಿಸಿದ ನೆಸ್ಲೆ , ಹಿಂದೂಸ್ತಾನ್ ಯೂನಿಲಿವರ್
Team Udayavani, Mar 15, 2022, 8:15 PM IST
ನವದೆಹಲಿ: ನೆಸ್ಲೆ ಮತ್ತು ಹಿಂದೂಸ್ಥಾನ್ ಯುನಿಲಿವರ್ ಲಿ.(ಎಚ್ಯುಎಲ್) ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಏರಿಕೆ ಮಾಡಿವೆ.
ಆ ಹಿನ್ನೆಲೆ ಮ್ಯಾಗಿ, ಟೀ ಪುಡಿ ಮತ್ತು ಕಾಫಿ ಪುಡಿಗಳ ಬೆಲೆ ಹೆಚ್ಚಳವಾಗಲಿದೆ. 70 ಗ್ರಾಂ ಮ್ಯಾಗಿ ಪ್ಯಾಕ್ ಬೆಲೆ 12 ರೂ.ನಿಂದ 14 ರೂ.ಗೆ, 140 ಗ್ರಾಂ ಪ್ಯಾಕ್ ಬೆಲೆ 3 ರೂ. ಏರಿಕೆಯಾಗಲಿದೆ. 96 ರೂ.ಗೆ ಸಿಗುತ್ತಿದ್ದ 560 ಗ್ರಾಂ ಪ್ಯಾಕ್ ಬೆಲೆ 105 ರೂ. ಆಗಲಿದೆ.
ಹಾಗೆಯೇ ನೆಸ್ಕೆಫೆ ಮತ್ತು ಬ್ರೂ ಕಾಫಿ ಪುಡಿಗಳ ಬೆಲೆ, ಎ ಪ್ಲಸ್ ಹಾಲಿನ ಬೆಲೆ ಮತ್ತು ತಾಜ್ ಮಹಲ್ ಚಹಾ ಪುಡಿ ಬೆಲೆಯಲ್ಲೂ ಏರಿಕೆಯಾಗಲಿದೆ.
ನೆಸ್ಕೆಫೆ ಒಂದು ಲೀಟರ್ ಎ+ ಹಾಲಿನ ಬೆಲೆಯನ್ನೂ ಹೆಚ್ಚಿಸಿದೆ. ಇದಕ್ಕೆ ಮೊದಲು 75 ರೂ. ಪಾವತಿಸಬೇಕಾಗಿತ್ತು. ಆದರೆ ಈಗ 78 ರೂ. ಪಾವತಿಸಬೇಕಾಗಿದೆ. ನೆಸ್ಕೆಫೆ ಕ್ಲಾಸಿಕ್ ಕಾಫಿ ಪೌಡರ್ ಬೆಲೆ ಶೇ.3-7ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ:ಆಧುನಿಕತೆ ಬಳಸಿ ಕಲೆಗೆ ರೂಪ ನೀಡಿದ ಕಲಾಕಾರರು;ಬನಹಟ್ಟಿಯಲ್ಲಿ ವೈವಿದ್ಯಮಯ ಕಾಮಣ್ಣನ ಮೂರ್ತಿಗಳು
ನೆಸ್ಕೆಫೆ ಯ 25 ಗ್ರಾಂ ಪ್ಯಾಕ್ ಈಗ 2.5% ರಷ್ಟು ದುಬಾರಿಯಾಗಿದೆ. ಇದಕ್ಕೆ 78 ರೂ. ಬದಲು ಈಗ 80 ರೂ. ಪಾವತಿಸಬೇಕಾಗುತ್ತದೆ. ಇದರೊಂದಿಗೆ 50 ಗ್ರಾಂ ನೆಸ್ಕೆಫೆ ಕ್ಲಾಸಿಕ್ಗೆ 145 ರೂ. ಬದಲಿಗೆ 150 ರೂ.ಏರಿಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.