ಕಾಂಗ್ರೆಸ್‌ನವರು ಬೆಂಗಳೂರಿನಿಂದ ಮೇಕೆದಾಟು ವಾಪಸ್ ಪಾದಯಾತ್ರೆ ಮಾಡಲಿ: ರಾಜುಗೌಡ
ಯಡಿಯೂರಪ್ಪ ನೇತೃತ್ವದಲ್ಲಿಯೇ ಅಧಿಕಾರಕ್ಕೆ ಬರುತ್ತೇವೆ
Team Udayavani, Mar 16, 2022, 8:05 AM IST
ವಿಧಾನಸಭೆ : ಕಾಂಗ್ರೆಸ್‌ನವರು ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದರು. ಈಗ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 1000 ಕೋಟಿ ಅನುದಾನ ನೀಡುವುದರಿಂದ ಕಾಂಗ್ರೆಸ್‌ನವರು ಬೆಂಗಳೂರಿನಿಂದ ಮೇಕೆದಾಟುವರೆಗೂ ವಾಪಸ್ ಪಾದಯಾತ್ರೆ ಮಾಡಿ, ಜನರಿಗೆ ಯೋಜನೆ ಅನುಷ್ಟಾನದ ಬಗ್ಗೆ ಪ್ರಚಾರ ಮಾಡಬೇಕು ಎಂದು ಬಿಜೆಪಿ ಶಾಸಕ ರಾಜೂಗೌಡ ಹೇಳಿದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊನ್ನೆ ನಮ್ಮ ಅಣ್ಣ ಡಿಕೆ ಶಿವಕುಮಾರ್ ಗೋವಾಕ್ಕೆ ಹೋಗಿದ್ದರು. ಅವರು ಇನ್ನೂ ಬಂದಿಲ್ಲ ಅಂತ ಬಹಳ ಚಿಂತೆ ಇದೆ. ನೀರಾವರಿ ಯೋಜನೆಗೆ ನಮ್ಮ ಸರ್ಕಾರ ದೊಡ್ಡ ಕೊಡುಗೆ ಕೊಟ್ಟಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ 5000 ಕೋಟಿ, ಮಹದಾಯಿ ಯೋಜನೆಗೆ 1000 ಕೋಟಿ, ಭದ್ರಾ ಮೇಲ್ದಂಡೆಗೆ 3000 ಕೋಟಿ, ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ಮೀಸಲಿಟ್ಟಿದ್ದಾರೆ.
ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಅವರು, ಮೇಕೆದಾಟುನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಿದಂತೆ, ಬಿಜೆಪಿ ಸರ್ಕಾರ ಯೋಜನೆ ಜಾರಿಗೊಳಿಸುತ್ತಿದೆ ಎಂದು ಈಗ ಬೆಂಗಳೂರಿನಿಂದ ಮೇಕೆದಾಟುಗೆ ಉಲ್ಟಾ ಪಾದಯಾತ್ರೆ ಮಾಡಿ ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಕಾಲೆಳೆದರು.
ಇದನ್ನೂ ಓದಿ:ಕೃಷ್ಣಾ ಮೇಲ್ದಂಡೆ ಮೂರನೇ ಹಂತ ಯೋಜನೆ ಅನುಷ್ಟಾನಕ್ಕೆ ಕ್ರಮ: ಕಾರಜೋಳ
ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನೀವು ಶೇಖಾವತ್ ಹೇಳಿಕೆ ಕೇಳಿದ್ದೀರಾ ? ಅದಕ್ಕೆ ರಾಜು ಗೌಡ ಇಲ್ಲ ಸರ್, ನೀವು ಹೇಳಿದ್ರೆ ಕೇಳ್ತೀನಿ ಎಂದ ರಾಜೂಗೌಡ . ಶೇಖಾವತ್ ಅಂದ್ರೆ ಯಾರ್ ಗೊತ್ತೇನ್ರಿ ? ಅವರು ಕೇಂದ್ರದಲ್ಲಿ ನೀರಾವರಿ ಮಂತ್ರಿಗಳಾಗಿದ್ದಾರೆ. ಅವರು ಬೆಂಗಳೂರಿಗೆ ಬಂದು ಏನ್ ಹೇಳಿದ್ರು ಗೊತ್ತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ಮತ್ತೆ ವ್ಯಂಗ್ಯವಾಗಿ ಏನ್ ಹೇಳಿದ್ರು ಸರ್ ಎಂದು ರಾಜೂಗೌಡ ಪ್ರಶ್ನಿಸಿದರು. ಮೇಕೆದಾಟು ವಿಚಾರದಲ್ಲಿ ತಮಿಳುನಾಡು ನೀವು ಮಾತನಾಡಿಕೊಳ್ಳಿ, ನಾವು ಬೇಕಾದ್ರೆ ಸಹಾಯ ಮಾಡ್ತೀವಿ ಅಂತ ಹೇಳಿಬಿಟ್ಟಿದ್ದಾರೆ. ಪರಿಸರ ಇಲಾಖೆ ಕೊಡಲಿಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ಅವರ ಮಾತಿಗೆ ಮತ್ತೆ ವ್ಯಂಗ್ಯವಾಡಿದ ರಾಜು ಗೌಡ, 2023ಕ್ಕೆ ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾನೇ ನೀರಾವರಿ ಮಂತ್ರಿಯಾಗಿ ಬಂದು ಎಲ್ಲ ಯೋಜನೆಗಳನ್ನು ಮಾಡುತ್ತೇವೆ. ನೀವು ವಾಪಸ್ ಪಾದಯಾತ್ರೆ ಮಾಡಿ ಜನರಿಗೆ ಹೇಳಿ. ಕೊರೋನಾ ಸಮಯದಲ್ಲಿ ಸಿದ್ದರಾಮಯ್ಯ, ರಮೇಶ್ ಕುಮಾರ್‌ರವರನ್ನ ಪಾದಯಾತ್ರೆ ಮೂಲಕ ನಡೆಸಿದ್ದೀರಿ, ಈಗ ನಮ್ಮ ಸರ್ಕಾರ ದುಡ್ಡು ಕೊಟ್ಟ ಮೇಲೆ ಜನರಿಗೆ ವಾಪಾಸ್ ಹೋಗಿ ಹೇಳಬೇಕಲ್ವಾ ಡಿಕೆ ಅಣ್ಣ. ನಿಮ್ಮ ಪಾದಯಾತ್ರೆ ವ್ಯರ್ಥ ಆಗಲ್ಲ. ನಾವು ಯೋಜನೆ ಮಾಡೇ ಮಾಡ್ತೀವಿ ಎಂದು ಡಿಕೆ ಕಾಲೆಳೆದರು.
ಈ ವೇಳೆ ಮಧ್ಯಪ್ರವೇಶಿಸಿದ ಎಂಬಿ ಪಾಟೀಲ್ ನಿಮ್ಮನ್ನ ಮಂತ್ರಿ ಮಾಡ್ತಾರೆ ಬಿಡಿ ಎಂದರು. ಅಣ್ಣ ನಾನುಕೂಡ ಮಂತ್ರಿ ಆಗಿದ್ದೆ . ಯಡಿಯೂರಪ್ಪ ಹಿಂದಿನ ಬೆಂಚ್ ನಲ್ಲಿದ್ರೂ ಹುಲಿನೇ, ಮುಂದಿನ ಬೆಂಚ್‌ನಲ್ಲಿ ಕುಳಿತರೂ ಹುಲಿನೇ. 2008, 2018 ರಲ್ಲಿ ಯಡಿಯೂರಪ್ಪರಿಂದಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ. ಮುಂದೆಯೂ ಯಡಿಯೂರಪ್ಪ ನೇತೃತ್ವದಲ್ಲೇ ಅಧಿಕಾರಕ್ಕೆ ಬರ್ತೀವಿ ಎಂದು ರಾಜುಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.