ಚರ್ಚ್ ಹಣ ದುರ್ಬಕೆ ಫಾದರ್ ವಿರುದ್ಧ ಕ್ರಮಕ್ಕೆ ಆಗ್ರಹ
Team Udayavani, Mar 16, 2022, 3:25 PM IST
ಬೇಲೂರು: ಚರ್ಚ್ ಅಭಿವೃದ್ಧಿಗೆ ಸರಕಾರ ಬಿಡುಗಡೆ ಮಾಡಿದ್ದ ಹಣ ದುರ್ಬಳಕೆ ಮಾಡಿಕೊಂಡಿರುವಫಾದರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರೆಹಳ್ಳಿ ಚರ್ಚ್ ಮುಂಭಾಗ ಕ್ರೈಸ್ತ ಸಮುದಾಯದ ಮುಖಂಡರು ಜಮಾಯಿಸಿ ಒತ್ತಾಯಿಸಿದ ಘಟನೆ ನಡೆದಿದೆ.
ಚರ್ಚ್‌ಗಳ ಜೀರ್ಣೋದ್ಧಾರಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ಹಣವನ್ನು ಚರ್ಚ್‌ನ ಫಾದರ್ ದುರು ಪಯೋಗ ಪಡಿಸಿಕೊಂಡಿದ್ದಾರೆ ಎಂದು ಕ್ರೈಸ್ತ ಮುಖಂಡರು ಆರೋಪ ಮಾಡಿದ್ದಾರೆ. ತಾಲೂಕಿನ ಅರೇಹಳ್ಳಿ ಚರ್ಚ್ ಫಾದರ್, ವಿಸೆಂಟ್ ಮರ್ಸೆಲ್ ಪಿಂಟು ವಿರುದ್ಧ ಕ್ರೈಸ್ತ ಸಮುದಾಯದವರೇ ಆರೋಪ ಮಾಡುತ್ತಿದ್ದು, ಹಣದ ಬಗ್ಗೆ ಲೆಕ್ಕ ಕೇಳಿದ್ದಕ್ಕೆ ಕಳೆದ ಐದು ದಿನಗಳಿಂದ ಫಾದರ್ ನಾಪತ್ತೆಯಾಗಿದ್ದು, ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1 ಕೋಟಿಗೂ ಹೆಚ್ಚು ಹಣ ದುರುಪಯೋಗ:
ಅರೇಹಳ್ಳಿಯಲ್ಲಿರುವ ಚರ್ಚ್ ಅಭಿವೃದ್ಧಿಗೆ ಕಳೆದ ಒಂದು ವರ್ಷದ ಹಿಂದೆ ಸರ್ಕಾರ ಮೂರು ಕೋಟಿಹಣ ಬಿಡುಗಡೆ ಮಾಡಿತ್ತು. ಇದಲ್ಲದೇ ಅರೇಹಳ್ಳಿಚರ್ಚ್‌ನ ಉಪಕೇಂದ್ರಗಳಾದ ಹೊಸಮನೆ, ಮಲಸಾವರ, ಬಿಕ್ಕೋಡು ಗ್ರಾಮಗಳಲ್ಲಿರುವ ಚರ್ಚ್ ಗಳ ಜೀರ್ಣೋ ದ್ಧಾರಕ್ಕೂ ಸರ್ಕಾರ ಹಣ ನೀಡಿತ್ತು. ಆದರೆ, ಚರ್ಚ್‌ನ ಫಾದರ್ ವಿಸೆಂಟ್ ಮರ್ಸೆಲ್‌ಪಿಂಟು ಅರ್ಧದಷ್ಟು ಹಣ ಮಾತ್ರ ಚರ್ಚ್ ಅಭಿವೃದ್ಧಿಗೆ ಬಳಕೆ ಮಾಡಿದ್ದು, ಸುಮಾರು ಒಂದುಕೋಟಿಗೂ ಹೆಚ್ಚು ಹಣ ಕಬಳಿಸಿದ್ದಾರೆ ಎಂದು ಕ್ರೈಸ್ತ ಸಮುದಾಯದವರು ಆರೋಪಿಸಿದ್ದಾರೆ.
ಫಾದರ್ ನಾಪತ್ತೆ: ಚರ್ಚ್‌ನ ಕಾರ್ಯದರ್ಶಿ ಲಿಯೋ ಪಿಂಟೋ ಅವರಿಂದ ಸುಮಾರು ಐದಕ್ಕೂಹೆಚ್ಚು ಖಾಲಿ ಚೆಕ್‌ಗಳಿಗೆ ಸಹಿ ಹಾಕಿಸಿಕೊಂಡು ಹಣ ಡ್ರಾ ಮಾಡಿದ್ದಾರೆ. ಅಲ್ಲದೇ ಚರ್ಚ್‌ಗಳ ಕಾಮ ಗಾರಿತಮ್ಮ ಸ್ವಂತ ತಮ್ಮನಿಗೆ ಗುತ್ತಿಗೆ ನೀಡಿದ್ದು ಕಾಮಗಾರಿ ಕಳಪೆಯಿಂದ ಕೂಡಿದ್ದು, ಈ ಬಗ್ಗೆ ಸಮುದಾಯದವರು ಫಾದರ್ ಬಳಿ ಹಣದ ಲೆಕ್ಕ ಕೇಳಿದ್ದಕ್ಕೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ದೂರು ನೀಡಿದ್ದಾರೆ.
ಈ ವಿಷಯ ತಿಳಿದ ನಂತರ ಸಮುದಾಯದವರು ತಮ್ಮ ವಿರುದ್ಧ ತಿರುಗಿಬೀಳುವ ಆತಂಕದಿಂದ ಕಳೆದ ಐದು ದಿನಗಳಿಂದನಾಪತ್ತೆಯಾಗಿದ್ದಾರೆ ಎಂದು ಕ್ರೈಸ್ತ ಸಮುದಾಯದವರು ಫಾದರ್ ವಿರುದ್ಧ ಆರೋಪಿಸಿದ್ದಾರೆ.
ಹಣ ವಸೂಲು ಮಾಡಿ: ಕ್ರೈಸ್ತ ಸಮುದಾಯದ ಮುಖಂಡ ಸ್ಟಾನಿ ಮಾತನಾಡಿ, ಹಣ ದುರಪಯೋಗಅಗಿರುವ ಬಗ್ಗೆ ಚರ್ಚ್‌ನ ಧರ್ಮಾಧ್ಯಕ್ಷರಿಗೆ ದೂರುನೀಡಲಾಗಿದೆ. ಕೂಡಲೇ ಫಾದರ್ ಬಳಿ ಹಣ ವಸೂಲು ಮಾಡಬೇಕೆಂದು ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.