ಶಿರಾದಿಂದಲೇ ಬಿಜೆಪಿ-ಜೆಡಿಎಸ್ ಪ್ರೇಮಾಂಕುರ!
Team Udayavani, Mar 16, 2022, 3:35 PM IST
ತುಮಕೂರು: ಶಿರಾ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮತ್ತೆ ಪ್ರೇಮಾಂಕುರವಾಗಿದ್ದು, 2023ರ ವಿಧಾನಸಭೆ ಚುನಾವಣೆ ಹೊತ್ತಿಗೆ ಮತ್ತಷ್ಟು ಕಡೆ ಮೈತ್ರಿ ಹೆಸರಲ್ಲಿ ಪ್ರೇಮ ವಿಸ್ತರಿಸಲಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಭವಿಷ್ಯ ನುಡಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2023-24ರ ಚುನಾವಣೆ ಹೊತ್ತಿಗೆ ದೊಡ್ಡ ರಾಜಕೀಯ ಧ್ರುವೀಕರಣವಾಗಲಿದೆ. ಪಂಚ ರಾಜ್ಯ ಚುನಾವಣೆ ಫಲಿತಾಂಶವೇ ಇದಕ್ಕೆ ಮುನ್ನಡಿ ಬರೆದಿದೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಚರ್ಚೆ: ಐದು ರಾಜ್ಯಗಳಲ್ಲಿಯ ಚುನಾವಣೆ ಫಲಿತಾಂಶವನ್ನು ಆಳಕ್ಕೆ ಹೋಗಿ ವಿಶ್ಲೇಷಣೆ ಮಾಡಿದರೆ ಅವಧಿಗೂ ಮುಂಚಿತವಾಗಿ ಚುನಾವಣೆ ಬರಲಾರದು. ಅವಧಿಗೂ ಮುನ್ನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತೋ ಇಲ್ಲವೋ ಅಂಥ ಗೊಂದಲ ವಿದ್ದಾಗ ಮಾತ್ರ ಅವಧಿಪೂರ್ವ ಚುನಾವಣೆಗೆ ಹೋಗ್ತಾರೆ. ಈಗ ಸಂಪುಟ ವಿಸ್ತರಣೆ ಮಾಡುವ ವಿಷಯ ಚರ್ಚೆಯಲ್ಲಿದೆ. ಸಂಪುಟ ವಿಸ್ತರಣೆ ಸರ್ಕಾರದ ಆಂತರಿಕ ವಿಚಾರ ಎಂದು ಹೇಳಿದರು.
ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಸೂಕ್ತ: ಯಾವುದೆ ತಂತ್ರಜ್ಞಾನವನ್ನು ಸುಲಭವಾಗಿ ಟ್ಯಾಂಪರ್ ಮಾಡಬಹುದು. 40-50 ಸಾವಿರದ ಇವಿಎಂನಲ್ಲಿ ಟ್ಯಾಂಪರ್ ಮಾಡಕ್ಕೋಗಲ್ಲ ಅಂಥ ಹೇಳಲು ಸಾಧ್ಯವಿಲ್ಲ. ಪಾರದರ್ಶಕವಾಗಿ ಚುನಾವಣೆ ನಡೆಯಬೇಕು ಅಂದರೆ ಬ್ಯಾಲೆಟ್ ಪೇಪರ್ ಸೂಕ್ತ ಎಂದು ಜಯಚಂದ್ರ ತಿಳಿಸಿದರು.
ಅಮೆರಿಕಾ, ಜಪಾನ್ ರಾಷ್ಟ್ರದಲ್ಲೇ ಇವಿಎಂ ಬಳಸುತ್ತಿಲ್ಲ. ಭಾರತ, ದಕ್ಷಿಣ ಆಫ್ರಿಕಾದ ನಾಲ್ಕು ರಾಷ್ಟ್ರಗಳಲ್ಲಿ ಮಾತ್ರ ಬಳಸಲಾಗುತ್ತಿದೆ. ಇವಿಎಂ ಟ್ಯಾಪಿಂಗ್ ವಿಷಯ ವನ್ನು ಮಾಧ್ಯಮಗಳು ಮುಚ್ಚಿಡುತ್ತಿವೆ ಎಂದು ಆರೋಪಿಸಿದರು.
ನೀಟ್, ರಾಜ್ಯಗಳ ಒಂದೊಂದು ನಿಲುವು ಸಲ್ಲದು :
ನೀಟ್ ಕುರಿತು ಒಂದೊಂದು ರಾಜ್ಯಗಳ ಒಂದೊಂದು ನಿಲುವು ಸಲ್ಲದು, ತಮಿಳುನಾಡಲ್ಲಿ ನೀಟ್ ನಿರ್ಬಂಧಿಸಿದ್ದಾರೆ. ಒಂದು ರಾಜ್ಯ ಒಂದು ನಿಲುವು, ಇನ್ನೊಂದು ರಾಜ್ಯ ಇನ್ನೊಂದು ನಿಲುವು ತೆಗೆದು ಕೊಂಡರೆ ಶಿಕ್ಷಣ ವ್ಯವಸ್ಥೆ ಹಾಳಾಗುತ್ತದೆ. ದೇಶದ ಎಲ್ಲಾ ಮಕ್ಕಳಿಗೂ ಅವಕಾಶ ಸಿಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ತೀರ್ಮಾನ ಮಾಡಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೂ ಮುನ್ನ ಈ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಬೇಕು ಎಂದರು.
ತುಮಕೂರು ವಿವಿ ಕ್ಯಾಂಪಸ್ ವಿಳಂಬ : ತುಮಕೂರು ವಿವಿ ಕ್ಯಾಂಪಸ್ ನಿರ್ಮಾಣ ವಿಳಂಬ ವಾಗುತ್ತಿದೆ. ಈ ಸರ್ಕಾರಕ್ಕೆ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದೇ ಗೊತ್ತಿಲ್ಲ ಎಂದು ಪತ್ರ ಕರ್ತರ ಪ್ರಶ್ನೆಗೆ ಉತ್ತರಿಸಿದ ಟಿ.ಬಿ.ಜಯ ಚಂದ್ರ, ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ಯಾಂಪಸ್ ಜಾಗದ ಸಮಸ್ಯೆ ಇತ್ಯರ್ಥಗೊಳಿಸಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಮೂಲ ಸೌಕರ್ಯವೆಂದರೆ ಬರೀ ಕಟ್ಟಡವೆಂದು ಈ ಸರ್ಕಾರ ಭಾವಿಸಿದೆ. ಶಿರಾ ಗೇಟ್ ಹಾಗೂ ಶಿರಾದಲ್ಲಿ ಉದ್ಘಾಟನೆಗೊಂಡ ಪಶುಸಂಗೋಪನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾಚರಣೆ ಮಾಡ್ತಿಲ್ಲ. ಈ ಸರ್ಕಾರಕ್ಕ ಆದ್ಯತೆ ಕಾರ್ಯ ಕ್ರಮಗಳ್ಯಾವುವು ಗೊತ್ತಿಲ್ಲ ಎಂದರು.
ಗಣತಿ ವರದಿ ಆಧಾರದಲ್ಲಿ ಮೀಸಲು ಕಾನೂನು ಬದ್ಧಗೊಳಿಸಿ : ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಂಪೂರ್ಣ ಸರ್ಕಾರಿ ಅಧಿಕಾರಿಗಳಿಂದಲೇ ತಯಾರಿಸಲ್ಪಟ್ಟ ಸಾಮಾಜಿಕ, ಆರ್ಥಿಕ ಶೈಕ್ಷಣಿಕ ಗಣತಿ ವರದಿಯನ್ನು ಬಿಡುಗಡೆ ಮಾಡಿ ಅದರ ಆಧಾರದಲ್ಲೇ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲನ್ನು ಕಾನೂನು ಬದ್ಧಗೊಳಿಸಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. 3-4 ವಿಭಾಗ ಗಳಲ್ಲಿ ಕೋರ್ಟ್ ಸೂಚಿಸಿದ ಮೌಲ್ಯಮಾಪನ ವನ್ನು ಗಣತಿಯಲ್ಲಿ ಮಾಡಲಾಗಿದೆ. ಸುಮಾರು 200 ಕೋಟಿ ಖರ್ಚು ಮಾಡಿ ತಯಾರಿಸಿರುವ ಗಣತಿ ವರದಿಯನ್ನು 2018ರಲ್ಲಿ ಚುನಾ ವಣೆಯ ಕಾರಣಕ್ಕೆ ಬಹಿರಂಗಗೊಳಿಸಲಾಗಲಿಲ್ಲ. ಈಗ ಸರ್ಕಾರದ ಮುಂದೆ ವರದಿ ಇದೆ. ವರದಿ ಆಧರಿಸಿ ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗಗಳಿಗೂ ಕಲ್ಪಿಸಲಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಕಳ್ಳನಿಗೊಂದು ಪಿಳ್ಳೆನೆವ ಎಂಬಂತೆ ಸುಪ್ರೀಂಕೋರ್ಟ್‌ನಲ್ಲಿರುವ ಹಿಂದು ಳಿದ ವರ್ಗಗಳ ಮೀಸಲು ತಕರಾರನ್ನೇ ಮುಂದು ಮಾಡಿ ರಾಜ್ಯ ಸರ್ಕಾರ ಜಿಪಂ ತಾಪಂ ಚುನಾವಣೆಯನ್ನು ವಿಳಂಬ ಮಾಡಿದ್ದು, ನೇರ ಭ್ರಷ್ಟಾಚಾರಕ್ಕೆ ವೇದಿಕೆ ನಿರ್ಮಿಸಿದೆ. -ಟಿ.ಬಿ.ಜಯಚಂದ್ರ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.