ನೇತ್ರಾವತಿ: “ಐಲ್ಯಾಂಡ್’ ಅಭಿವೃದ್ಧಿಗೆ ಕಾನೂನಾತ್ಮಕ ತೊಡಕು!
ಸರಕಾರದ ನಿಯಮಾವಳಿ ಸೃಷ್ಟಿಸಲಿದೆ ಹೊಸ ಸವಾಲು
Team Udayavani, Mar 16, 2022, 3:37 PM IST
ಜಪ್ಪು : ನೇತ್ರಾವತಿ ನಡುಗುಡ್ಡೆಯ ಜಪ್ಪಿನಮೊಗರು ಪ್ರದೇಶವನ್ನು “ನೇತ್ರಾವತಿ ನದಿಗುಡ್ಡ ಸಂರಕ್ಷಣ ಮೀಸಲು ಪ್ರದೇಶ’ ಎಂದು ಸರಕಾರ ಘೋಷಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಕೈಗೊಳ್ಳಲಿರುವ ಮಹತ್ವದ ಐಲ್ಯಾಂಡ್ ಅಭಿವೃದ್ಧಿ ಯೋಜನೆಗೆ ಬಹು ಸವಾಲು ಎದುರಾಗಿದೆ!
ರಾಜ್ಯ ವನ್ಯಜೀವಿ ಮಂಡಳಿ ಹಾಗೂ ಸಚಿವ ಸಂಪುಟದ ಉಪ ಸಮಿತಿಯಲ್ಲಿ “ಮೀಸಲು ಪ್ರದೇಶ’ ಎಂದು ಅನುಮೋದನೆಗೊಂಡ ಪ್ರಸ್ತಾವ ಮುಂದೆ ಸಚಿವ ಸಂಪುಟಕ್ಕೆ ಬರಲಿದೆ. ಅಲ್ಲಿಯೂ ಅನುಮೋದನೆ ದೊರಕಿದರೆ ಇಲ್ಲಿ ಅಭಿವೃದ್ಧಿ ಚಟುವಟಿಕೆಗೆ ಕೈಗೊಳ್ಳಲು ಸಾಧ್ಯವಿಲ್ಲ.
2019ರ ಜ. 9ರಂದು ಮುಖ್ಯಮಂತ್ರಿ ಯವರ ಅಧ್ಯಕ್ಷತೆಯಲ್ಲಿ ನಡೆದ 11ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ವಲಸೆ ಹಾಗೂ ಸ್ಥಳೀಯ ಪಕ್ಷಿ ಸಂಕುಲಗಳ ಪ್ರಮುಖ ಸಂತಾನೋತ್ಪತ್ತಿಯ ಆವಾಸ ಸ್ಥಾನವಾಗಿರುವ ಮಂಗಳೂರು ವಿಭಾಗದ ನೇತ್ರಾವತಿ ನಡುಗುಡ್ಡೆ ಪ್ರದೇಶಗಳನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ಸೆಕ್ಷನ್ 36 (ಎ)ಅನ್ವಯ “ನೇತ್ರಾವತಿ ನಡುಗುಡ್ಡೆ ಸಂರಕ್ಷಣ ಮೀಸಲು ಪ್ರದೇಶವೆಂದು ಘೋಷಿಸಲು ಅನುಮೋದನೆಗೊಂಡಿದೆ. 2020 ಡಿ. 28ರಂದು ಅರಣ್ಯ ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದ ಉಪಸಮಿತಿಯಲ್ಲಿಯೂ ಇದು ಅನುಮೋದನೆಗೊಂಡಿದೆ. ಇದರಂತೆ, ರಾಜ್ಯ ವನ್ಯಜೀವಿ ಮಂಡಳಿ ಹಾಗೂ ಸಚಿವ ಸಂಪುಟದ ಉಪ ಸಮಿತಿಯಲ್ಲಿ ಅನುಮೋದನೆಗೊಂಡಂತೆ ಸಲ್ಲಿಸಲಾದ ಪ್ರಸ್ತಾವ ಸದ್ಯ ಪ್ರಸ್ತಾವನೆಯಲ್ಲಿದೆ ಎಂದು ಈಗಾಗಲೇ ಸಚಿವ ಉಮೇಶ್ ವಿ. ಕತ್ತಿ ಅವರು ವಿಧಾನಸಭೆಯಲ್ಲಿ ಉತ್ತರ ನೀಡಿದ್ದರು.
ಅಭಿವೃದ್ಧಿಯ ನಿರೀಕ್ಷೆಯೇನು?
ನೇತ್ರಾವತಿ ನದಿಗುಡ್ಡೆ ಪ್ರದೇಶವು ಪ್ರವಾಸಿಗರ ಗಮನ ಸೆಳೆಯುವ ಪ್ರವಾಸಿ ತಾಣವಾಗಿಸುವ ಉದ್ದೇಶದಿಂದ ಈಗಾಗಲೇ ಎಲ್ಲ ತಯಾರಿ ನಡೆಸಲಾಗಿದ್ದು ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜತೆಗೆ ಈ ಪ್ರದೇಶದ ಅಭಿವೃದ್ಧಿಗೆ 1,290 ಲಕ್ಷ ರೂ. ಪ್ರಸ್ತಾವನೆಯನ್ನು ದ್ವೀಪಗಳ (ಐ ಲ್ಯಾಂಡ್) ಅಭಿವೃದ್ಧಿ ನಿಗಮಕ್ಕೆ ಸಲ್ಲಿಸಲಾಗಿದೆ. ಜತೆಗೆ ಫಿಲಂ ಸಿಟಿ ಯೋಜನೆಯಲ್ಲಿ ವನ್ಯಜೀವಿಗಳಿಗೆ ಯಾವುದೇ ಹಾನಿಯಾಗದಂತೆ ಪರಿಸರ ಸ್ನೇಹಿ ಪ್ರವಾಸೋದ್ಯಮ ತಾಣವಾಗಿಸುವ ನಿಟ್ಟಿನಲ್ಲಿ ತಯಾರಿ ನಡೆಸಲಾಗುತ್ತಿದೆ. ಹಿನ್ನೀರು ಪ್ರವಾಸೋದ್ಯಮದಲ್ಲಿ ಯಶಸ್ಸು ಕಂಡಿರುವ ಕೇರಳ ಮಾದರಿಯನ್ನು ಇಲ್ಲಿ ಅನುಷ್ಠಾನಕ್ಕೆ ಶಾಸಕ ವೇದವ್ಯಾಸ ಕಾಮತ್ ಅವರು ವಿಶೇಷ ಒತ್ತು ನೀಡಿದ್ದರು.
ಇದನ್ನೂ ಓದಿ : ಕಾರ್ಕಳ: ಮನೆಮನೆಯಲ್ಲಿಂದು ಮೆಹಂದಿ ಉತ್ಸವ : ಮದರಂಗಿ ಮಾಯಾಲೋಕದೊಳಗೆ ಜನ ಬಂಧಿ
ಬೋಟ್ ಸೌಲಭ್ಯವೂ ಆಗಿತ್ತು!: ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಅನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ಕೂಡ ನಡೆಸಲಾಗಿತ್ತು. ಇದಕ್ಕೆ ಪೂರಕವಾಗಿ ದ್ವೀಪಕ್ಕೆ ಬೋಟು ಸೌಲಭ್ಯಕ್ಕೂ ಚಾಲನೆ ನೀಡಲಾಗಿತ್ತು.
ಕುದ್ರುಗಳ ಅಭಿವೃದ್ಧಿಗೆ ಸಂಕಲ್ಪ
ನಗರದ ಇಕ್ಕೆಲಗಳಲ್ಲಿ ಹರಿಯುತ್ತಿರುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಮಧ್ಯೆ ಸುಂದರ ಕುದ್ರುಗಳಿದ್ದು ಇಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಪುಲ ಅವಕಾಶಗಳನ್ನು ಗುರುತಿಸಲಾಗಿತ್ತು. ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿಯ ಮಧ್ಯ ಭಾಗ, ಹಳೆ ಬಂದರು ಬಳಿಯ ಫಲ್ಗುಣಿ ನದಿ ಮಧ್ಯದಲ್ಲಿ, ತಣ್ಣೀರುಬೀಚ್ ಬಳಿ ಕುಡ್ಲಕುದುರು ಸಹಿತ ಮಂಗಳೂರು ಸುತ್ತಮುತ್ತ ಆರು ಕುದ್ರುಗಳಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಇದನ್ನು ಅಭಿವೃದ್ಧಿಗೊಳಿಸಲು ಉದ್ದೇಶಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಪ್ರವಾಸೋದ್ಯಮದಲ್ಲಿ ಹೊಸ ಬದಲಾವಣೆಗೆ ಕುದ್ರುಗಳು ಸಾಕ್ಷಿಯಾಗುವ ನಿರೀಕ್ಷೆಯಲ್ಲಿತ್ತು. ಆದರೆ, ಈಗ ಎದುರಾಗಿರುವ ಕಾನೂನಾತ್ಮಕ ತೊಡಕು ಅಭಿವೃದ್ಧಿ ಚಟುವಟಿಕೆಗೆ ಬ್ರೇಕ್ ಹಾಕುವ ಸಾಧ್ಯತೆಯಿದೆ.
ಸರಕಾರಕ್ಕೆ ಮನವಿ ಸಲ್ಲಿಕೆ
ಈ ಹಿಂದಿನ ಆಡಳಿತ ಸಮಯದಲ್ಲಿ ನೇತ್ರಾವತಿ ನದಿಗುಡ್ಡ ಸಂರಕ್ಷಣ ಮೀಸಲು ಪ್ರದೇಶ ರೂಪಿಸಲು ತಯಾರಿ ನಡೆಸಿದ್ದರು. ಇದರಿಂದಾಗಿ ಇಲ್ಲಿ ಪರಿಸರಕ್ಕೆ ಪೂರಕವಾಗುವ ಅಭಿವೃದ್ಧಿ ಚಟುವಟಿಕೆ ಹಾಗೂ ಪ್ರವಾಸೋದ್ಯಮ ಬೆಳೆಸಲು ಅವಕಾಶ ಇಲ್ಲ. ಹೀಗಾಗಿ ನಗರದ ಜನರ ಅಭಿಪ್ರಾಯಗಳನ್ನು ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು. ಹಾಗೂ ಈ ಪ್ರದೇಶವನ್ನು ಪರಿಸರ ಸ್ನೇಹಿಯಾಗುವ ಪ್ರವಾಸೋದ್ಯಮಕ್ಕೆ ಸೂಕ್ತವೆನಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಅವಕಾಶ ಕಲ್ಪಿಸುವಂತೆ ಸರಕಾರವನ್ನು ಕೋರಲಾಗಿದೆ.
-ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.