“ಟ್ರಾಫಿಕ್ ವಾರ್ಡನ್’ ವ್ಯವಸ್ಥೆಗೆ ಶೀಘ್ರ ಹೊಸ ರೂಪ
ಬೆಂಗಳೂರು ಮಾದರಿ "ಟಿಡಬ್ಲ್ಯುಒ' ಅನುಷ್ಠಾನಕ್ಕೆ ತಯಾರಿ
Team Udayavani, Mar 16, 2022, 3:49 PM IST
ಮಹಾನಗರ : ನಗರದ “ಟ್ರಾಫಿಕ್ ವಾರ್ಡನ್’ ವ್ಯವಸ್ಥೆ ಪುನಃ ರಚನೆ ಮಾಡಲು ನಿರ್ಧ ರಿಸಲಾಗಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ಸೇವೆ ದೊರೆಯುವ ನಿರೀಕ್ಷೆಯಿದೆ.
ನಗರದಲ್ಲಿ 1995 ರಿಂದ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಇತ್ತು. ಆದರೆ ಕಳೆದ 5-6 ವರ್ಷಗಳಿಂದ ವಿವಿಧ ಕಾರಣಗಳಿಗೆ ಅದಕ್ಕೆ ಸರಕಾರದ ಮಾನ್ಯತೆ ದೊರೆತಿರಲಿಲ್ಲ. ಆದಾಗ್ಯೂ ಸೇವೆ ಮುಂದುವರಿದಿತ್ತು. ಕಳೆದೆರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಭಾಗಶಃ ಲಭ್ಯವಾಗುತ್ತಿದೆ.
ಏನಿದು ಟ್ರಾಫಿಕ್ ವಾರ್ಡನ್?
ಸಂಚಾರ ನಿರ್ವಹಣೆಯಲ್ಲಿ ಸ್ವಯಂಸೇವಕರಾಗಿ ತೊಡಗಿಸಿ ಕೊಂಡು ಸಾರ್ವಜನಿಕರು, ಪೊಲೀಸರಿಗೆ ನೆರವಾಗುವವರು ಟ್ರಾಫಿಕ್ ವಾರ್ಡನ್‌ಗಳು. ದಿನದಲ್ಲಿ ಹೆಚ್ಚು ಸಂಚಾರ ದಟ್ಟಣೆ ಇರುವ ಸಮಯ, ಸ್ಥಳಗಳಲ್ಲಿ ಇವರ ಸೇವೆ ಪಡೆದುಕೊಳ್ಳಲಾಗುತ್ತದೆ. ಮಂಗಳೂರಿನಲ್ಲಿ ಜೋಸೆಫ್ ಗೊನ್ಸಾಲ್ವಿಸ್ ಅವರು ಈ ವ್ಯವಸ್ಥೆ ಆರಂಭಿಸಿದ್ದರು.
ಬೆಂಗಳೂರು ಮಾದರಿ ಪುನಃ ರಚನೆ
ಬೆಂಗಳೂರಿನಲ್ಲಿ ಮಾದರಿ ಯಲ್ಲಿ ಯೇ ನಗರದಲ್ಲಿಯೂ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ರೂಪಿ ಸುವ ಉದ್ದೇಶ ಹೊಂದಲಾಗಿದೆ. ನಗರಕ್ಕೆ ಸುಮಾರು ಸದ್ಯ ಕನಿಷ್ಠ 100 ಮಂದಿ ಟ್ರಾಫಿಕ್ ವಾರ್ಡನ್‌ಗಳ ಅಗತ್ಯ ಇರುವುದನ್ನು ಕಂಡುಕೊಳ್ಳಲಾಗಿದ್ದು, ವಾರ್ಡನ್ ಸೇವೆಗೆ ಆಹ್ವಾನ, ಆಯ್ಕೆ ಪ್ರಕ್ರಿಯೆ ಶೀಘ್ರ ನಡೆಯಲಿದೆ. ನಿವೃತ್ತ ಉಪನ್ಯಾಸಕ, ಎನ್‌ಸಿಸಿ ಹಿರಿಯ ಅಧಿಕಾರಿ ಸುರೇಶ್‌ನಾಥ್ ಅವರನ್ನು ಈಗಾಗಲೇ ಚೀಫ್ ಟ್ರಾಫಿಕ್ ವಾರ್ಡನ್ ಆಗಿ ಆಯ್ಕೆ ಮಾಡಲಾಗಿದೆ.
ಟ್ರಾಫಿಕ್ ವಾರ್ಡನ್ ಆರ್ಗನೈಜೇಷನ್
ಸರಕಾರದ ನಿಯಮದಂತೆ ಟ್ರಾಫಿಕ್ ವಾರ್ಡನ್ ಆರ್ಗನೈಜೇಶನ್(ಟಿಡಬ್ಲ್ಯುಒ) ಇರಬೇಕು. ಆದರೆ ಮಂಗಳೂರಿನಲ್ಲಿ ಇದುವರೆಗೆ ಟ್ರಾಫಿಕ್ ವಾರ್ಡನ್ ಸ್ಕ್ವಾ$Âಡ್(ಟಿಡಬ್ಲ್ಯು ಎಸ್) ಇತ್ತು. ಮುಂದೆ ಟಿಡಬ್ಲ್ಯುಒ ಜಾರಿಗೆ ಬರಲಿದೆ. ಎಲ್ಲ ಟ್ರಾಫಿಕ್ ವಾರ್ಡನ್‌ಗಳು ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಸಮವಸ್ತ್ರ ಧರಿಸಿ ಸೇವೆ ನೀಡಲಿದ್ದಾರೆ.
ಸಂಚಾರ ವ್ಯವಸ್ಥೆ ಸುಗಮ
ನಗರದ ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಯನ್ನು ಪುನಃ ರಚಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದರಿಂದ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಗಮವಾಗಲಿದೆ. ಸರಕಾರದ ಎಲ್ಲ ನಿಯಮ ಗಳಂತೆಯೇ ಪುನಃ ರಚನೆಯಾಗಲಿದೆ.
– ನಟರಾಜ್ ಎಂ.ಎ., ಎಸಿಪಿ, ಸಂಚಾರಿ ಪೊಲೀಸ್ ವಿಭಾಗ, ಮಂಗಳೂರು
ಮುಂದಿನ ತಿಂಗಳು ಆರಂಭ
ಹೊಸ ಟ್ರಾಫಿಕ್ ವಾರ್ಡನ್ ವ್ಯವಸ್ಥೆಗೆ ಈಗಾಗಲೇ ನಗರ ಪೊಲೀಸರ ಅನುಮತಿ ದೊರೆತಿದ್ದು, ಸರಕಾರ ಮಟ್ಟದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳಲ್ಲಿ ಹೊಸ ವ್ಯವಸ್ಥೆ ಅನುಷ್ಠಾನಕ್ಕೆ ಬರುವ ನಿರೀಕ್ಷೆ ಇದೆ. ಪಾಂಡೇಶ್ವರದಲ್ಲಿರುವ ಪೊಲೀಸ್ ಇಲಾಖೆಯ ಒಂದು ಹಳೆಯ ಕಟ್ಟಡವಿರುವ ಜಾಗವನ್ನು ಟ್ರಾಫಿಕ್ ವಾರ್ಡನ್ ಆರ್ಗನೈಜೇಶನ್‌ನ ಕಚೇರಿಗೆ ಒದಗಿಸಿಕೊಡುವುದಾಗಿಯೂ ಇಲಾಖೆ »ರವಸೆ ನೀಡಿದೆ.
-ಎಂ.ಎಲ್. ಸುರೇಶನಾಥ್, ನಿಯೋಜಿತ ಚೀಫ್ ಟ್ರಾಫಿಕ್ ವಾರ್ಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.