“ಕಾಂಗ್ರೆಸ್ ಒಡೆಯಲು ಜಿ-23 ಸಂಚು’: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗು
Team Udayavani, Mar 17, 2022, 7:20 AM IST
ನವದೆಹಲಿ: “ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಈ ದೇಶದ ಹಳ್ಳಿಗಳಿಂದ ದಿಲ್ಲಿಯವರೆಗೂ ಬೆಂಬಲವಿದೆ. ಅವರ ನಾಯಕತ್ವದ ಬಗ್ಗೆ ಭಿನ್ನಮತ ಹೊಂದಿರುವವರು ಕಾಂಗ್ರೆಸ್ಸನ್ನು ಒಡೆಯಲು ಸಂಚು ರೂಪಿಸಿರುವಂಥವರು” ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕತ್ವದ ವಿರುದ್ಧ ತಿರುಗಿಬಿದ್ದಿರುವ ಅದೇ ಪಕ್ಷದ ಜಿ-23 ಸದಸ್ಯರ ವಿರುದ್ಧ ಗುಡುಗಿದ್ದಾರೆ.
ಬುಧವಾರ ಸಂಜೆ, ಜಿ-23 ಗುಂಪಿನ ಸದಸ್ಯರು ಈ ಗುಂಪಿನ ಪ್ರಮುಖ ಸದಸ್ಯರಾದ, ಕೇಂದ್ರದ ಮಾಜಿ ಸಚಿವ ಕಪಿಲ್ ಸಿಬಲ್ ನಿವಾಸದಲ್ಲಿ ಸಭೆ ಸೇರಲಿದ್ದಾರೆಂಬ ಮಾಹಿತಿಯ ಬಗ್ಗೆ ಖರ್ಗೆ ಪ್ರತಿಕ್ರಿಯಿಸಿ, “ಇತ್ತೀಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲೇ ನಾಯಕತ್ವದ ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ಚರ್ಚಿಸಲಾಗಿದೆ. ಜಿ-23 ಸದಸ್ಯರು ಒಂದಲ್ಲ, ನೂರು ಸಭೆಗಳನ್ನು ನಡೆಸಿದರೂ ಪಕ್ಷದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಾಗದು” ಎಂದಿದ್ದಾರೆ.
ಗಾಂಧಿಯವರೇ ಉತ್ತಮ ಆಯ್ಕೆ: ಖುರ್ಷಿದ್
ಹಿರಿಯ ನಾಯಕ ಕಪಿಲ್ ಸಿಬಲ್ ಹಾಗೂ ಜಿ-23 ಗುಂಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಮತ್ತೊಬ್ಬ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್, “ಪಕ್ಷದ ನಾಯಕತ್ವವನ್ನು ಪ್ರಶ್ನಿಸುತ್ತಿರುವ ಹಿರಿಯ ನಾಯಕ ಕಪಿಲ್ ಸಿಬಲ್, ಪಕ್ಷದ ಯಾವ ಹುದ್ದೆಗೆ ನಡೆಸಿದ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆಂಬುದನ್ನು ಹೇಳಲಿ” ಎಂದಿದ್ದಾರೆ.
“ಪಕ್ಷದಿಂದ ಎಲ್ಲವನ್ನೂ ಪಡೆದ ನಂತರ ಪಕ್ಷದ ವಿರುದ್ಧ ಹೀಗೆ ತಿರುಗಿಬೀಳುವುದು ಸರಿಯಲ್ಲ. ಗಾಂಧಿ ಕುಟುಂಬವು ಪಕ್ಷದ ಅವಿಭಾಜ್ಯ ಅಂಗ. ಪಕ್ಷ ಎದುರಿಸುತ್ತಿರುವ ಈಗಿನ ಕಠಿಣ ಸಂದರ್ಭದಲ್ಲಿ ಗಾಂಧಿಯವರಿಗೆ ನಾಯಕತ್ವ ಕೊಡುವುದಕ್ಕಿಂತ ಮತ್ತೊಂದು ಉತ್ತಮ ಆಯ್ಕೆಯಿಲ್ಲ” ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.