ಅರ್ಥೈಸಿಕೊಂಡು ಉತ್ತರಿಸಿದರೆ ಇಂಗ್ಲಿಷ್ ಸುಲಭ
Team Udayavani, Mar 17, 2022, 6:30 AM IST
ಭಾಷಾ ವಿಷಯಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಅದರಲ್ಲೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಬ್ಬಿಣದ ಕಡಲೆಯೇ. ಆದರೆ ಬದಲಾದ ಶೈಕ್ಷಣಿಕ ಕಾಲಘಟ್ಟದಲ್ಲಿ ಇಂಗ್ಲಿಷ್ ಈಗಿನ ವಿದ್ಯಾರ್ಥಿಗಳಿಗೆ ಅಷ್ಟೇನೂ ಕಷ್ಟ ಎಂದೆನಿಸಲಾರದು. ಇದೀಗ ಭಾಷಾ ವಿಷಯಗಳೂ ಕೂಡ ಅಂಕ ಗಳಿಕೆಯಲ್ಲಿ ಮಹತ್ವದ ಪಾತ್ರ ವಹಿಸುವುದರಿಂದ ಭಾಷಾ ವಿಷಯಗಳನ್ನು ನಿರ್ಲಕ್ಷ್ಯ ಮಾಡಲಾಗದು. ಇಂಗ್ಲಿಷ್ ಭಾಷಾ ವಿಷಯದ ಅಧ್ಯಯನ, ಪರೀಕ್ಷಾ ತಯಾರಿ, ಪ್ರಶ್ನೆಗಳಿಗೆ ಉತ್ತರಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗೆಗೆ ವಿಷಯ ತಜ್ಞರು ವಿದ್ಯಾರ್ಥಿಗಳಿಗೆ ನೀಡಿರುವ ಸಲಹೆಗಳು ಇಲ್ಲಿವೆ.
ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ಇದೊಂದು ಅತ್ಯಂತ ಸರಳ ಭಾಷೆ. ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ವಿಶ್ವಾಸವೇ ಆಧಾರ. ಎಲ್ಲ ವಿಷಯಗಳಂತೆ ಇದನ್ನು ಸಮರ್ಥವಾಗಿ ಬರೆಯಬಲ್ಲೆ ಎಂಬ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಇಲ್ಲಿ ಪದಗಳನ್ನು ಜೋಡಿಸಿ ಬರೆಯುವುದು ಒಂದು ಟ್ರಿಕ್ ಆಗಿರುತ್ತದೆ.
ಶಬ್ದ, ವಾಕ್ಯಗಳನ್ನು ಅರ್ಥೈಸಿಕೊಂಡು ಬರೆಯಬಲ್ಲೆ ಎಂಬ ಆತ್ಮಸ್ಥೈರ್ಯ ಇರಬೇಕು. ಎಲ್ಲ ಭಾಷೆಗಳಂತೆ ಇದೊಂದು ಸರಳವಾದ ಭಾಷೆ. ನನಗಿದು ಸಾಧ್ಯ ಎನ್ನುವ ನಂಬಿಕೆಯನ್ನು ಪ್ರತೀ ವಿದ್ಯಾರ್ಥಿ ಹೊಂದುವುದು ಅಗತ್ಯ. ಸುಂದರವಾದ ಕೈಬರಹ ಇಂಗ್ಲಿಷ್ ವಿಷಯದ ಬೆನ್ನೆಲುಬು. ಏಕೆಂದರೆ ಅಕ್ಷರ ಚೆನ್ನಾಗಿದ್ದರೆ ಮೌಲ್ಯಮಾಪಕರಿಗೆ ಓದಲು ಸುಲಭವಾಗುತ್ತದೆ. ಅಕ್ಷರ ಓದಲು ಕಷ್ಟವಾದರೆ ಮೌಲ್ಯಮಾಪನದಲ್ಲಿ ತೊಡಕಾಗಬಹುದು. ಆಗ ಅಂಕ ಕಡಿತವಾಗುವ ಸಾಧ್ಯತೆಯೂ ಇದೆ. ಇದರ ಬಗ್ಗೆ ವಿದ್ಯಾರ್ಥಿಗಳು ಆರಂಭಿಕ ಎಚ್ಚರ ವಹಿಸಬೇಕು. ಪಾಠಗಳ ವಿಷಯಗಳ ಸಂಪೂರ್ಣ ಅರಿವು, ಭಾಷೆಯ ಮೇಲಿನ ಹಿಡಿತ (ವ್ಯಾಕರಣ ಸಹಿತವಾಗಿ) ಇದ್ದರೆ ಅಂಕಗಳಿಸುವುದು ಅತ್ಯಂತ ಸುಲಭ. ಕಷ್ಟ ಎನ್ನುವ ಪದವನ್ನು ಮನಸ್ಸಿನಿಂದ ಹೊರದೂಡಬೇಕು. ಭಾಷೆಯಲ್ಲಿ ಒಲವು. ಏಕಾಗ್ರತೆ, ಛಲ, ಶ್ರದ್ಧೆಯ ಜತೆಗೆ ಎಲ್ಲವನ್ನು ಕಲಿತು ಬರೆದು, ಮನನ ಮಾಡಿಕೊಳ್ಳುವುದು ಅತೀ ಮುಖ್ಯ ಎಂದು ಇಂಗ್ಲಿಷ್ ವಿಷಯ ತಜ್ಞೆ ಹಾಗೂ ಉಡುಪಿ ಒಳಕಾಡು ಸರಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕಿ ಸವಿತಾ ದೇವಿ ಸಲಹೆ ನೀಡಿದ್ದಾರೆ.
ಇಂಗ್ಲಿಷ್ ಕಷ್ಟ ಎನ್ನುವ ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳು ಮತ್ತು ಪೂರ್ವಸಿದ್ಧತಾ ಪರೀಕ್ಷೆಗಳ ಪುನರಾವರ್ತಿತ ಪ್ರಶ್ನೆಗಳನ್ನು ಅವಶ್ಯವಾಗಿ ಗಮನಿಸಬೇಕು. ಕೊರೊನಾ ರಜೆಯ ಕಾರಣದಿಂದಾಗಿ ಕೆಲವು ಪಾಠಗಳು ಕಡಿತಗೊಂಡಿವೆ. ಆದ್ದರಿಂದ ಪರೀಕ್ಷೆಗೆ ನಿಗದಿಯಾಗಿರುವ ಪಾಠ, ಪದ್ಯಗಳತ್ತಲೇ ಓದು ಕೇಂದ್ರಿತ ವಾಗಿರಬೇಕಾಗುತ್ತದೆ.
ಈ ವರ್ಷ 8 ಪಾಠಗಳಲ್ಲಿ 2 ಪಾಠ ಗಳನ್ನು (ಡಿಸ್ಕವರಿ ಮತ್ತು ಸಯನ್ಸ್ ಆ್ಯಂಡ್ ಹೋಪ್ ಆಫ್ ಸರ್ವೈವಲ್), 8 ಪದ್ಯಗಳಲ್ಲಿ 2 ಪದ್ಯಗಳನ್ನು (ಬ್ಯಾಲೆಡ್ ಆಫ್ ದ ಟೆಂಪೆಸ್ಟ್ ಆಫ್ ಟು ಔಟರ್ ಸ್ಪೇಸ್ ಟುಮಾರೋ ಮಾರ್ನಿಂಗ್), 4 ಪೂರಕ ಪಾಠಗಳಲ್ಲಿ (ಬರ್ಡ್ ಆಫ್ ಹ್ಯಾಪಿನೆಸ್) ಕಡಿತಗೊಳಿಸಲಾಗಿದೆ. ಉಳಿದಂತೆ ಎಲ್ಲ ಪಾಠಗಳಿಗೆ 3ರಿಂದ 4 ಅಂಕಗಳನ್ನು ನಿಗದಿ ಗೊಳಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಹಿಂದಿನ ಪ್ರಶ್ನೆ ಪತ್ರಿಕೆಗಳಲ್ಲಿ ಪುನರಾವರ್ತಿತಗೊಂಡ ಸರಳ ಪ್ರಶ್ನೆಗಳ ಮೇಲೆ ಗಮನ ಹರಿಸುವುದು ಸೂಕ್ತ.
3 ಅಂಕಗಳ 2 ವಿವರಣಾತ್ಮಕ ಪ್ರಶ್ನೆಗಳಿರುತ್ತವೆ. ಎಕ್ಸ್‌ಟ್ರಾಕ್ಟ್ಗಳಿಗಾಗಿ 3×4 = 12 ಅಂಕಗಳನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಭಾಷಣೆ ಉಳ್ಳ ರಿಯೋ ಎನ್ ಮೇಡಿಯೋ, ಎ ಗರ್ಲ್ ಬೈದ ಟ್ರ್ಯಾಕ್ಸ್ ಮತ್ತು ಹೀರೋ ಪಾಠಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಯಾವ ಪಾಠದಿಂದ ಮತ್ತು ಯಾರ ಮಾತುಗಳೆಂಬುವುದರ ಅರಿವಿರಬೇಕು. ಕೇಳಿದ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸಿದರೆ ಸಾಕಾಗುತ್ತದೆ.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಕ್ವಾಲಿಟಿ ಆಫ್ ಮರ್ಸಿ ಒಂದನ್ನು ಆರಿಸಿ ಕೊಂಡರೆ ಸಾಕು (ಅಂಕಗಳು 4). ಪ್ರೊಫೈಲ್ ರೈಟಿಂಗ್‌ನಲ್ಲಿ ಕೊಟ್ಟಂತಹ ವಿಷಯವನ್ನು ವಿವರಣಾತ್ಮಕವಾಗಿ ಬರೆಯಬೇಕು(ಅಂಕಗಳು 3). ಕಥೆಯನ್ನು ಬರೆಯಲು ಪಂಚತಂತ್ರದ ಕಥೆಗಳನ್ನು ಓದಿಕೊಂಡಿರಬೇಕು (ಅಂಕಗಳು 3). ಪ್ರಬಂಧಕ್ಕಾಗಿ ಕೋವಿಡ್‌ನಂತಹ ಪ್ರಸ್ತುತ ವಿದ್ಯಮಾನಗಳನ್ನು ಆರಿಸಿರುತ್ತಾರೆ (ಅಂಕಗಳು 4). ನೀಡಿದ ಚಿತ್ರದ ವಿವರಣೆ ಅತ್ಯಂತ ಸುಲಭ (ಅಂಕ 3).
ಸಾರಾಂಶಗಳಲ್ಲಿ ಗ್ರ್ಯಾಂಡ್ ಮಾ ಕ್ಲೈಮ್ಸ್ ದ ಟ್ರೀ ಅಧ್ಯಾಯದಲ್ಲಿ ನಿರೀಕ್ಷಿತ ಪ್ರಶ್ನೆ ಬರುತ್ತದೆ (ಅಂಕ 4). ಪತ್ರಲೇಖನದಲ್ಲಿ ವೈಯಕ್ತಿಕ ಪತ್ರವನ್ನು ಆರಿಸಿಕೊಳ್ಳುವುದು ಸೂಕ್ತ. ಏಕೆಂದರೆ ಇವುಗಳನ್ನು ಬರೆಯುವುದು ಸುಲಭ (ಅಂಕಗಳು 5). ಪ್ಯಾಸೇಜ್ ಓದಿ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬಾ ಸರಳ. (ಅಂಕಗಳು 2 x2 = 4 ).
ವ್ಯಾಕರಣಕ್ಕೆ 16 ಅಂಕ ಟೆನ್ಸಸ್ ಆ್ಯಂಡ್ ಕರೆಕ್ಟ್ ಫಾರ್ಮ್ ಆಫ್ ವರ್ಬ್, ಪ್ರಪೋಸಿಶನ್ಸ್, ಕಂಜೆಂಕ್ಷನ್ಸ್, ಆರ್ಟಿಕಲ್ಸ್, ಕ್ವಶ್ಚನ್ ಟ್ಯಾಗ್ಸ್, ಮೋಡಲ್ಸ್ -ಲ್ಯಾಂಗ್ವೆಜ್ ಪಂಕ್ಷನ್ಸ್ , ಆ್ಯಕ್ಟಿವ್ ಮತ್ತು ಪ್ಯಾಸಿವ್ ವಾçಸ್, ಡಿಗ್ರೀಸ್ ಆಫ್ ಕಂಪ್ಯಾರಿಸನ್, ರಿಪೋರ್ಟೆಡ್ ಸ್ಪೀಚ್, ಇಫ್ ಕ್ಲಾಸ್ ಆಫ್ ಕಂಡೀಶನ್, ಇನ್ಫಿನಿಟಿವ್, ಪ್ರೇಸಲ್ ವಬ್ಸ್ಐ ಡೆಂಟಿಫಯಿಂಗ್, ಪಾರ್ಟ್ಸ್ ಆಫ್ ಸ್ಪೀಚ್, ಯೂಸಿಂಗ್ ವರ್ಡ್ಸ್ ಇನ್ ಸೆಂಟೆನ್ಸಸ್ ಆ್ಯಸ್ ನೌನ್ ಆ್ಯಂಡ್ ವಬ್ಸ್ì ಪಂಕುcವೇಶನ್, ಆಕ್ಸಿಲರೀಸ್ (ಸಹಾಯಕ ಕ್ರಿಯಾಪದಗಳು) ಯೂಸ್ ಆಫ್ ಲಿಂಕರ್, ಕೊಲೋಕೇಶನ್, ಸಲೇಬಿಫಿಕೇಶನ್, ವನ್ ವರ್ಡ್ ಆನ್ಸರ್, ಹೊಮೋಫೋನ್ಸ್, ಪ್ರಿಫಿಕ್ಸ್ ಮತ್ತು ಸಫಿಕ್ಸಸ್, ಜಂಬಲ್ಡ್ ಲೆಟರ್ ಆ್ಯಂಡ್
ವರ್ಡ್ಸ್ ಓಪಸಿಟ್ಸ್.
ಹೀಗೆ ಪಾಠಕ್ಕೆ 20 ಅಂಕಗಳು, ಪದ್ಯಕ್ಕೆ ಮತ್ತು ಸಾರಾಂಶಕ್ಕೆ 16 ಅಂಕಗಳು, ಪೂರಕ ಸಾಹಿತ್ಯಕ್ಕೆ 4 ಅಂಕಗಳು, ಗೃಹಿಕೆಗೆ 24 ಅಂಕಗಳು, ವ್ಯಾಕರಣಕ್ಕೆ 16 ಅಂಕಗಳು ಸೇರಿ 80 ಅಂಕಗಳನ್ನು ನೀಡಲಾಗಿದೆ.
ಇಂಗ್ಲಿಷ್‌ನಲ್ಲಿ ಓದಿದ ಪ್ರತೀ ಅಂಶಗಳನ್ನು ಬರೆದು ಕಲಿಯಬೇಕು. ಇಲ್ಲವಾದರೆ ನೆನಪಿನಲ್ಲಿ ಉಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಕಂಠಪಾಠದಿಂದ ಪೂರ್ಣ ಪ್ರಮಾಣದಲ್ಲಿ ತಪ್ಪಿಲ್ಲದೇ ಬರೆಯಲು ಸಾಧ್ಯವಿಲ್ಲ. ಹಾಗೇನಾದರೂ ನಿರ್ಲಕ್ಷ್ಯ ತೋರಿದರೆ ಬರವಣಿಗೆಯಲ್ಲಿ ದೋಷ ಉಂಟಾಗಿ ವಿಷಯಾಂತರವಾಗಬಹುದು. ಮನೋಸ್ಥಿತಿ, ಜಾಗೃತ ಮನೋಭಾವನೆ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲಾಗಲಿದೆ.
– ಸವಿತಾ ದೇವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !
Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Story Of Generations: ಪೀಳಿಗೆಗಳ ವೃತ್ತಾಂತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.