ಕೋಟ್ಯಂತರ ರೂ. ಆಸ್ತಿಕರ ಬಾಕಿ

ಸರಕಾರಿ-ಸ್ವಾಮ್ಯ ಸಂಸ್ಥೆಗಳ ಬಾಕಿಯೇ ದೊಡ್ಡ ಹೊರೆ

Team Udayavani, Mar 17, 2022, 10:16 AM IST

1

ಹುಬ್ಬಳ್ಳಿ: ಆಸ್ತಿಕರ ಸಮರ್ಪಕ ಸಂಗ್ರಹಕ್ಕೆ ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆ ಇರಿಸಿದೆ. ಆದರೆ ಸರಕಾರಿ ಕಚೇರಿಗಳು, ಸರಕಾರಿ ಸ್ವಾಮ್ಯ ಕಚೇರಿ-ಕಟ್ಟಡ, ಕೈಗಾರಿಕಾ ಪ್ರದೇಶಗಳ ಬಾಕಿ ದೊಡ್ಡ ಸವಾಲಾಗಿದೆ. ತಹಶೀಲ್ದಾರ್‌ ಕಚೇರಿ ಕಟ್ಟಡ, ಪಿಡಬ್ಲ್ಯುಡಿ, ಎಪಿಎಂಸಿ, ವಾಯವ್ಯ ಸಾರಿಗೆ ಸಂಸ್ಥೆ ಹಾಗೂ ಪಾಲಿಕೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಿಂದ ಪಾಲಿಕೆಗೆ ಕೋಟ್ಯಂತರ ರೂ.ಆಸ್ತಿಕರ ಬಾಕಿ-ದಂಡ ಬರಬೇಕಾಗಿದೆ.

ಮಹಾನಗರ ಪಾಲಿಕೆಯ ಸ್ವಯಂ ಆದಾಯ ಮೂಲದಲ್ಲಿ ಆಸ್ತಿ ಕರವೇ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಜನರ ಮನೆ, ಕಟ್ಟಡ, ಖುಲ್ಲಾ ಜಾಗ ಸೇರಿದಂತೆ ವಿವಿಧ ಆಸ್ತಿ ಕರವನ್ನು ಬಹುತೇಕವಾಗಿ ಸಂಗ್ರಹಿಸಲಾಗುತ್ತದೆ. ಆದರೆ ಸರಕಾರಿ ಕಚೇರಿ, ಸರಕಾರಿ ಸ್ವಾಮ್ಯದ ಆಸ್ತಿ, ಕೈಗಾರಿಕಾ ಪ್ರದೇಶದ ಆಸ್ತಿಕರ ಪಾಲಿಕೆ ಪಾಲಿಗೆ ಸವಾಲು-ಸಮಸ್ಯೆಯಾಗಿ ಕಾಡತೊಡಗಿದೆ. ಬರುವ ಬಾಕಿ ಬರುತ್ತಿಲ್ಲ. ಇನ್ನು ಒಂದೆರಡು ಕಡೆ ದಂಡ ದೊಡ್ಡ ಗಂಟಾಗಿಯೇ ಮುಂದುವರಿದಿದೆ.

ಮಹಾನಗರ ಪಾಲಿಕೆ ಪ್ರತಿವರ್ಷ ಆಸ್ತಿ ಕರದ ಗುರಿಯಲ್ಲಿ ಸಾಮಾನ್ಯವಾಗಿ ಶೇ.80-85 ವಸೂಲಿ ಮಾಡುತ್ತದೆ. ಕೆಲವೊಮ್ಮೆ ಶೇ.90ಕ್ಕೂ ತಲುಪಿದ್ದು, ಇದೆ. ಆದರೆ ಸರಕಾರಿ ಕಚೇರಿಗಳಿರುವ ಕಟ್ಟಡ ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಬರಬೇಕಾದ ಬಾಕಿ ಪಾಲಿಕೆ ಆದಾಯ ಕುಗ್ಗಿಸಿದ್ದು, ಹಲವು ಅಭಿವೃದ್ಧಿ ಕಾರ್ಯಗಳಿಗೂ ಅಡ್ಡಿಯುಂಟು ಮಾಡುತ್ತಿದೆ. ಕೈಗಾರಿಕಾ ಪ್ರದೇಶ, ಎಪಿಎಂಸಿ ಆಸ್ತಿಕರ ವಿಚಾರದಲ್ಲಿ ಒಂದಿಷ್ಟು ಗೊಂದಲ ಇದೆ. ಆದರೆ ಆಸ್ತಿಕರ ಪಾವತಿಸಲೇಬೇಕೆಂದು ಸರಕಾರ ಸ್ಪಷ್ಟಪಡಿಸಿದ್ದು, ಪಾಲಿಕೆಯವರು ಚಲನ್‌ಗಳನ್ನು ನೀಡಿದ್ದರೂ, ನಿರೀಕ್ಷಿತ ರೀತಿಯಲ್ಲಿ ಆಸ್ತಿ ಕರ ಬಾಕಿ ಹಾಗೂ ದಂಡ ವಸೂಲಿ ಆಗದಿರುವುದು ಪಾಲಿಕೆಗೆ ತಲೆನೋವು ತರಿಸಿದೆ.

ಬರಬೇಕಿದೆ ಕೋಟಿ, ಕೋಟಿ ಬಾಕಿ: ಮಹಾನಗರ ಪಾಲಿಕೆಗೆ ಸರಕಾರಿ ಕಚೇರಿ ಹಾಗೂ ಸರಕಾರಿ ಸ್ವಾಮ್ಯ ಸಂಸ್ಥೆಗಳು, ಕೈಗಾರಿಕಾ ಪ್ರದೇಶಗಳಿಂದ ಕಳೆದ ಕೆಲ ವರ್ಷಗಳಿಂದ ಬರಬೇಕಾದ ಬಾಕಿ ಬಾರದಾಗಿದ್ದು, ಈಗಾಗಲೇ ಚಲನ್‌ಗಳನ್ನು ನೀಡಲಾಗಿದ್ದು, ಕರ ಪಾವತಿಸಿದ್ದರೆ ಕಟ್ಟಡಗಳಿಗೆ ಬೀಗಮುದ್ರೆಗೆ ಪಾಲಿಕೆ ಗಂಭೀರ ಚಿಂತನೆ ನಡೆಸಿದೆ.

ಪಾಲಿಕೆ ಅಂಕಿ-ಅಂಶಗಳ ಪ್ರಕಾರ ವಾಯವ್ಯ ಸಾರಿಗೆ ಸಂಸ್ಥೆಯಿಂದ ಸುಮಾರು 1.45 ಕೋಟಿ ರೂ. ಆಸ್ತಿ ಕರ ಶುಲ್ಕ-ದಂಡ ಬರಬೇಕಿದ್ದು, ಹುಬ್ಬಳ್ಳಿ ತಹಶೀಲ್ದಾರ್‌ ಕಚೇರಿ ಕಟ್ಟಡದಿಂದ 46 ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ 46 ಲಕ್ಷ ರೂ., ವೇರ್‌ಹೌಸ್‌ನಿಂದ 74 ಲಕ್ಷ ರೂ., ಎಪಿಎಂಸಿಯಿಂದ ಆಸ್ತಿಕರ 3.40 ಕೋಟಿ ರೂ. ಬಾಕಿ, ಅಂದಾಜು 11 ಲಕ್ಷ ರೂ. ದಂಡ ಬರಬೇಕಾಗಿದೆ.

ಅದೇ ರೀತಿ ಪಾಲಿಕೆ ವ್ಯಾಪ್ತಿಯ ಕೈಗಾರಿಕಾ ಪ್ರದೇಶಗಳಿಂದ ಆಸ್ತಿಕರ ಬಾಕಿ-ದಂಡ ಬರಬೇಕಾಗಿದೆ. ಆದರೆ ಕೈಗಾರಿಕಾ ಪ್ರದೇಶಗಳು ಪಾಲಿಕೆಗೆ ಹಸ್ತಾಂತರ ಆಗಿಲ್ಲ. ಈಗಾಗಲೇ ಕೆಎಸ್‌ಎಸ್‌ಐಡಿಸಿ, ಕೆಐಎಡಿಬಿಗೆ ಶುಲ್ಕ ಪಾವತಿಸಿದ್ದು, ಪಾಲಿಕೆಗೆ ಯಾಕೆ ಕರ ಪಾವತಿಸಬೇಕು, ಹಸ್ತಾಂತರ ಮಾಡಿಕೊಂಡ ನಂತರ ಹೊಸದಾಗಿ ಆಸ್ತಿಕರ ಪಾವತಿಸುತ್ತೇವೆ, ಹಸ್ತಾಂತರ ವೇಳೆ ನಾವು ಇಲ್ಲಿಯವರೆಗೆ ನಾವು ಪಾವತಿಸಿದ ಶುಲ್ಕವನ್ನು ಪಾಲಿಕೆ ಹಸ್ತಾಂತರ ಮಾಡಿಕೊಳ್ಳಲಿ ಎಂಬುದು ಉದ್ಯಮಿಗಳ ವಾದ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ಇರುವುದರಿಂದ ಆಸ್ತಿಕರ ಪಾವತಿಸಬೇಕೆಂಬುದು ಪಾಲಿಕೆ ಅನಿಸಿಕೆಯಾಗಿದೆ.

ಕೆಎಸ್‌ಎಸ್‌ಐಡಿಸಿಗೆ ಸೇರಿದ ಸುಮಾರು 478 ಆಸ್ತಿ, ತಾರಿಹಾಳ ಇನ್ನಿತರೆ ಕಡೆ ಸುಮಾರು 300 ಆಸ್ತಿ ಇದ್ದು, ಇವುಗಳಿಂದ ಪಾಲಿಕೆಗೆ ಕರ, ದಂಡ ಸೇರಿ ಒಟ್ಟು 47 ಕೋಟಿ ರೂ. ಬರಬೇಕಾಗಿದೆ.

ಮಳಿಗೆಗಳಿಂದ ಸಂಗ್ರಹ ಉತ್ತಮ ಸಾಧನೆ: ಮಹಾನಗರ ಪಾಲಿಕೆ ಸಾರ್ವಜನಿಕರಿಂದ ಆಸ್ತಿ ಕರ ಹಾಗೂ ಪಾಲಿಕೆ ಒಡೆತನದ ಮಳಿಗೆಗಳಿಂದ ಕರ ವಸೂಲಿಯಲ್ಲಿ ಉತ್ತಮ ಸಾಧನೆ ತೋರುತ್ತಿದೆ. ಇದುವರೆಗೆ ಆಸ್ತಿ ಕರದಲ್ಲಿ ಶೇ.68.68, ಮಳಿಗೆಗಳಿಂದ ಶೇ.83.97 ಕರ ಸಂಗ್ರಹವಾಗಿದ್ದು, ಮಾರ್ಚ್‌ ಅಂತ್ಯದೊಳಗೆ ಇನ್ನಷ್ಟು ಸಂಗ್ರಹ ನಿರೀಕ್ಷೆ ಇದೆ.

2021-22ನೇ ಸಾಲಿಗೆ ಆಸ್ತಿಕರ ರೂಪದಲ್ಲಿ ಒಟ್ಟು 118.98 ಕೋಟಿ ರೂ. ಆದಾಯ ಸಂಗ್ರಹ ಗುರಿ ಹೊಂದಲಾಗಿತ್ತು. ಮಾ.16ರವರೆಗೆ ಕರ-ದಂಡ ಸೇರಿ 95.06 ಕೋಟಿ ರೂ. ಸಂಗ್ರಹವಾಗಿದ್ದು, ಶೇ.68.68 ಆಗಿದೆ. 37.27 ಕೋಟಿ ರೂ. ಬಾಕಿ ಬರಬೇಕಾಗಿದೆ. ಪಾಲಿಕೆ ಒಡೆತನದಲ್ಲಿ ಒಟ್ಟು 2,468 ಮಳಿಗೆ ಹಾಗೂ ತೆರೆದ ಕಟ್ಟಡಗಳಿದ್ದು, ಇದರಲ್ಲಿ ಸುಮಾರು 165 ಮಳಿಗೆಗಳನ್ನು ತೆರವು ಮಾಡಲಾಗಿದೆ. ಪ್ರಸಕ್ತ ಸಾಲಿಗೆ ಮಳಿಗೆಗಳಿಂದ 4.70ಕೋಟಿ ರೂ. ಕರ ಸಂಗ್ರಹ ಗುರಿಯಲ್ಲಿ ಇದುವರೆಗೆ 3.95 ಕೋಟಿ ರೂ. ಸಂಗ್ರಹ ಮಾಡಿದ್ದು, ಶೇ.83.97 ಸಾಧನೆ ತೋರಲಾಗಿದೆ. 75.40 ಲಕ್ಷ ರೂ. ಬಾಕಿ ಬರಬೇಕಾಗಿದೆ.

ಜಾಹೀರಾತು ಮೂಲದಿಂದ 6.63ಕೋಟಿ ರೂ. ಕರ ಸಂಗ್ರಹ ಗುರಿಯಲ್ಲಿ ಇದುವರೆಗೆ 44.75 ಲಕ್ಷ ರೂ. ಸಂಗ್ರಹವಾಗಿದ್ದು, ಶೇ.6.75 ಸಾಧನೆಯಾಗಿದೆ. 6.18 ಕೋಟಿ ರೂ. ಬಾಕಿ ಬರಬೇಕಾಗಿದೆ.

ಆಸ್ತಿ ಕರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಸುಮಾರು 10 ಕೋಟಿ ರೂ.ನಷ್ಟು ಹೆಚ್ಚಳವಾಗಿದೆ. ಇದಕ್ಕೆ ಆಸ್ತಿ ಕರದಲ್ಲಿ ಶೇ.15 ಹೆಚ್ಚಳ ಮಾಡಿರುವುದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಚಲನ್‌ ನೀಡಿಕೆ-ಬೀಗಮುದ್ರೆ ಕ್ರಮ: ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಆಸ್ತಿಕರ ಕುರಿತ ಚಲನ್‌ ನೀಡಿಕೆ ವಿಳಂಬ ಆಗುತ್ತಿತ್ತು. ಜನರು ವಲಯ ಕಚೇರಿ, ಮುಖ್ಯ ಕಚೇರಿಗೆ ಅಲೆದರೂ ಚಲನ್‌ ನೀಡದ ಸ್ಥಿತಿ ಇತ್ತು. ಇದರಿಂದ ಕರ ಸಂಗ್ರಹಕ್ಕೆ ಹಿನ್ನಡೆ ಆಗುತ್ತಿತ್ತು. ಇದೀಗ ಚಲನ್‌ ನೀಡಿಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಬಿಲ್‌ ಕಲೆಕ್ಟರ್‌ಗಳು ಮನೆ, ಮನೆಗೆ ತೆರಳಿ ಕರ ಸಂಗ್ರಹ ಕಾರ್ಯ ಮಾಡುತ್ತಿದ್ದಾರೆ. ಆಸ್ತಿಕರ ಪಾವತಿಸದ ಕಟ್ಟಡಗಳಿಗೆ ನೋಟಿಸ್‌ ನೀಡುವ, ಸ್ಪಂದನೆ ಇಲ್ಲವಾದರೆ ಬೀಗಮುದ್ರೆ ಹಾಕುವ ಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುತ್ತಿದೆ.

 

ಪ್ರತಿ ವಾರ ಆಯುಕ್ತರಿಂದ ಪರಿಶೀಲನಾ ಸಭೆ: ಮಹಾನಗರ ಪಾಲಿಕೆ ಆಯುಕ್ತ ಡಾ|ಬಿ.ಗೋಪಾಲಕೃಷ್ಣ ಅವರು ಆಸ್ತಿಕರ ಸಂಗ್ರಹ ಕುರಿತು ಹೆಚ್ಚಿನ ಕಾಳಜಿ ತೋರುತ್ತಿದ್ದು, ಪ್ರತಿ ಗುರುವಾರ ವಲಯ ಸಹಾಯಕ ಆಯುಕ್ತರು, ಬಿಲ್‌ ಕಲೆಕ್ಟರ್‌ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು- ಸಿಬ್ಬಂದಿ ಸಭೆ ನಡೆಸಿ ಕರ ಸಂಗ್ರಹ ಮಾಹಿತಿ ಪಡೆಯುತ್ತಿದ್ದಾರೆ. ಆಸ್ತಿ ಕರ ಸಂಗ್ರಹದ ಗುರಿ ತಲುಪಲು ಯಾವುದೇ ಕಾರಣದಿಂದ ಹಿನ್ನಡೆ ಆಗದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡುತ್ತಿದ್ದಾರೆ. ಪ್ರತಿ ವಾರ ಹೆಚ್ಚಿನ ಕರ ಸಂಗ್ರಹಿಸಿದ ಬಿಲ್‌ ಕಲೆಕ್ಟರ್‌ಗೆ ಆಯುಕ್ತರ ಪ್ರಶಂಸಾ ಪತ್ರ ನೀಡುವ ಮೂಲಕ ಪ್ರೋತ್ಸಾಹ ಕಾರ್ಯ ಮಾಡುತ್ತಿದ್ದಾರೆ.

 

ಪಾಲಿಕೆ ಅಭಿವೃದ್ಧಿ ಕಾರ್ಯಗಳಿಗೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಕಾಲಕ್ಕೆ ಆಸ್ತಿಕರ ಪಾವತಿಸಲು ಮುಂದಾಗಬೇಕು. ಈ ಕುರಿತು ಜಾಗೃತಿ, ಮನೆ, ಮನೆ ಸಂಗ್ರಹ ಕೈಗೊಳ್ಳಲಾಗಿದೆ. ಕೈಗಾರಿಕಾ ಪ್ರದೇಶಗಳ ಕರ ವಸೂಲಿಗೆ ಈಗಾಗಲೇ ಚಲನ್‌ ನೀಡಲಾಗಿದ್ದು, ಕೈಗಾರಿಕೆಗಳವರು ಕಡ್ಡಾಯವಾಗಿ ಕರ ಪಾವತಿಸಲೇಬೇಕಾಗಿದೆ. ಸರಕಾರಿ-ಸರಕಾರಿ ಸ್ವಾಮ್ಯದ ಕಟ್ಟಡಗಳ ಕರ ಬಾಕಿ ಸಮಸ್ಯೆಯಾಗಿದೆ. ಅದರ ಸಂಗ್ರಹಕ್ಕೂ ಕ್ರಮ ಕೈಗೊಳ್ಳಲಾಗುವುದು.

-ಕೆ.ಆನಂದ, ಉಪ ಆಯುಕ್ತರು ಕಂದಾಯ ವಿಭಾಗ, ಮಹಾನಗರ ಪಾಲಿಕೆ

-ಅಮರೇಗೌಡ ಗೋನವಾರ

 

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.