ಭೀಮಪಲಾಸ ಸಂಗೀತೋತ್ಸವಕ್ಕೆ 30ರಂದು ತೆರೆ

11 ದಿನಗಳ ರಾಷ್ಟ್ರಮಟ್ಟದ ಕಲಾವಿದರ ಕಲಾ ಪ್ರದರ್ಶನ

Team Udayavani, Mar 17, 2022, 11:54 AM IST

6

ಧಾರವಾಡ: ಭಾರತರತ್ನ ಪಂ|ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಭೀಮಪಲಾಸ ಸಂಗೀತೋತ್ಸವವು ಧಾರವಾಡದಲ್ಲಿ ನಡೆಯಲಿರುವ 11 ದಿನಗಳ ಗಾಯನ-ವಾದನ-ನರ್ತನಗಳ ಝೇಂಕಾರದೊಂದಿಗೆ ಸಮಾರೋಪಗೊಳ್ಳಲಿದೆ.

ಧಾರವಾಡದ ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಹಮ್ಮಿಕೊಂಡಿರುವ ಭೀಮಪಲಾಸ ಸಂಗೀತೋತ್ಸವವು 2021ರ ಫೆಬ್ರವರಿಯಿಂದ ಆರಂಭಗೊಂಡು ಕೋವಿಡ್‌-19 ಮಧ್ಯದಲ್ಲಿಯೂ ರಾಜ್ಯಾದ್ಯಂತ ವರ್ಷಪೂರ್ತಿ ಯಶಸ್ವಿ ನಡೆಸಿದವು.

ಇದೀಗ ಮಾ.20ರಿಂದ 30ರವರೆಗೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ 11 ದಿನಗಳ ರಾಷ್ಟ್ರಮಟ್ಟದ ಕಲಾವಿದರ ಕಲಾ ಪ್ರದರ್ಶನದೊಂದಿಗೆ ಭೀಮಪಲಾಸ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆ, ಇನ್ಫೋಸಿಸ್‌ ಫೌಂಡೇಶನ್‌, ಭಾರತೀಯ ಜೀವ ವಿಮಾ ನಿಗಮ, ಎಲ್‌ಐಸಿಯ ಹೌಸಿಂಗ್‌ ಫೈನಾನ್ಸ್‌ಗಳ ಪ್ರಾಯೋಜಕತ್ವದಲ್ಲಿ ಆಯೋಜನೆಗೊಂಡಿದೆ. ಇದಕ್ಕೆ ಪುಣೆಯ ಪಂ. ಕಾಣೇಬುವಾ ಪ್ರತಿಷ್ಠಾನ, ನಾನಾಸಾಹೇಬ ಆಲವಣಿ ಚಾರಿಟೇಬಲ್‌ ಟ್ರಸ್ಟ್‌, ಬೆಂಗಳೂರಿನ ಐಸಿಸಿಆರ್‌, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಪ್ರಾಯೋಜಕತ್ವ ನೀಡಿವೆ. ಧಾರವಾಡದ ವಿವಿಡ್‌ಲಿಪಿ ಸಂಸ್ಥೆ 11 ದಿನ ಕಾರ್ಯಕ್ರಮ ನೇರಪ್ರಸಾರವನ್ನು https:// www.youtube.com/vividlipi/ live  ಮಾಡಲಿದೆ.

ಈ ಸಂಗೀತೋತ್ಸವದಲ್ಲಿ 50ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಗಳ ವಿವರ: ಮಾ.20ರಂದು ಬೆಳಿಗ್ಗೆ 10:00 ಗಂಟೆಗೆ ರಾಷ್ಟ್ರೀಯ ಸಂಗೀತೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ ಉದ್ಘಾಟಿಸುವರು.

ಮಾ.20 ಹಾಗೂ 27 ರವಿವಾರ ದಿನದಂದು ದಿನಪೂರ್ತಿ, ಶನಿವಾರ ಸಂಜೆ 5:00 ಗಂಟೆಗೆ ಇನ್ನುಳಿದ ದಿನ ಸಂಜೆ 6:00 ಗಂಟೆಗೆ ನಡೆಯಲಿದೆ. ಮಾ.20ರಂದು ನವದೆಹಲಿಯ ಪಂ|ರಾಜೇಂದ್ರ ಪ್ರಸನ್ನ ಅವರ ಬಾನ್ಸುರಿಯ ನಿನಾದದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ಸಿಗಲಿದೆ.

ನಂತರ ಮಧ್ಯಾಹ್ನ 2:30 ಗಂಟೆಗೆ ಪಂ|ಜಯತೀರ್ಥ ಮೇವುಂಡಿಯವರ ಗಾಯನ ಸಂಜೆ 4:30 ಗಂಟೆಗೆ ಪುಣೆಯ ರಾಮದಾಸ ಫಳಸುಲೆ ಅವರ ತಬಲಾ ಸೋಲೋ, ಸಂಜೆ 6:00 ಗಂಟೆಗೆ ಪುಣೆಯ ನಿಷಾದ ಬಾಕ್ರೆ, 7:30 ಗಂಟೆಗೆ ವಿದುಷಿ ಅನುರಾಧಾ ಕುಬೇರ ಅವರ ಗಾನಲಹರಿ ಹೊರಹೊಮ್ಮಲಿದೆ.

ಮಾ.21ರಂದು ಸಂಜೆ 6:00 ಗಂಟೆಗೆ ಅಲಿಬಾಗ್‌ ಯುವ ಗಾಯಕಿ ಮುಗಾœ ವೈಶಂಪಾಯನ, 7:30 ಗಂಟೆಗೆ ಮುಂಬೈನ ಪಂ|ಶೌನಕ ಅಭಿಷೇಕಿ ಅವರ ಗಾನಸುಧೆ ಹರಿದು ಬರಲಿದೆ. ಮಾ.22ರಂದು ಸಂಜೆ 6:00 ಗಂಟೆಗೆ ಪುಣೆಯ ವಿನಯ ರಾಮದಾಸನ್‌, ವಿದುಷಿ ಮಂಜೂಷಾ ಪಾಟೀಲ ಕುಲಕರ್ಣಿಯವರ ಗಾಯನ ಕಾರ್ಯಕ್ರಮ ನಡೆಯಲಿದೆ.

ಮಾ.23ರಂದು ಸಂಜೆ 6:00 ಗಂಟೆಗೆ ಕೋಲತ್ತಾದ ಟ್ರೋಯಿಲಿ, ಮೊಯ್ಸಿಲಿ ದತ್ತಾ ಸಹೋದರಿಯರಿಂದ ಸರೋದ ತಂತುಗಳ ನಿನಾದ ಹರಿದು ಬರಲಿದ್ದು, ಸಂಜೆ 7:30 ಗಂಟೆಗೆ ಕೋಲ್ಕತ್ತಾದ ಬ್ರಿಜೇಶ್ವರ ಮುಖರ್ಜಿ ಅವರಿಂದ ಗಾಯನ ಮೂಡಿ ಬರಲಿದೆ.

ಮಾ.24 ರಂದು ಸಂಜೆ 6:00 ಗಂಟೆಗೆ ಕೋಲ್ಕತಾದ ಕಲ್ಯಾಣಜೀತ ದಾಸ ಅವರ ಸಿತಾರ ವಾದನ, ವಿದುಷಿ ಮನಾಲಿ ಬೋಸ್‌ ಅವರಿಂದ ಗಾನಲಹರಿ ಹೊರಹೊಮ್ಮಲಿದೆ. ಮಾ.25 ರಂದು ಸಂಜೆ 6:00 ಗಂಟೆಗೆ ಕೋಲ್ಕತ್ತಾದ ಐವಿ ಬ್ಯಾನರ್ಜಿ, 7:30 ಗಂಟೆಗೆ ಅರ್ಷದ ಅಲಿ ಖಾನರ ಗಾಯನ ಕಾರ್ಯಕ್ರಮ ನಡೆಯಲಿದೆ. ಮಾ.26ರಂದು ಸಂಜೆ 5:00 ಗಂಟೆಗೆ ಕೋಲ್ಕತ್ತಾದ ಶಾಶ್ವತಿ ಚೌಧರಿ, 6:00 ಗಂಟೆಗೆ ಬೆಂಗಳೂರಿನ ಪೂರ್ಣಿಮಾ ಭಟ್‌ ಕುಲಕರ್ಣಿ, 7:30 ಗಂಟೆಗೆ ಉ. ಫಯಾಜ್‌ ಖಾನರಿಂದ ಗಾನಸುಧೆ ಹರಿದು ಬರಲಿದೆ. ಮಾ.27 ರವಿವಾರ ದಿನಪೂರ್ತಿಯಾಗಿ ನಡೆಯುವ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10:00 ಗಂಟೆಗೆ ಸೋಲಾಪುರದ ಭೀಮಣ್ಣ ಜಾಧವ ಅವರಿಂದ ಸುಂದರಿ ವಾದನ, 11:15 ರಿಂದ ಗಾನಪಂಡಿತ ಎಂ. ವೆಂಕಟೇಶಕುಮಾರ ಅವರಿಂದ ಗಾನಲಹರಿ ಮೊಳಗಲಿದೆ. ಮಧ್ಯಾಹ್ನ 2:30 ಗಂಟೆಗೆ ಕಿರಾನಾ ಘರಾಣೆಯ ಪಂ|ಕೈವಲ್ಯಕುಮಾರ ಗುರವ ಅವರ ಗಾಯನ ಮೂಡಿ ಬಂದರೆ, 4:15 ಗಂಟೆಗೆ ಪೊವೈನ ಹರ್ಷನಾರಾಯಣ ಅವರ ಸಾರಂಗಿ ವಾದನದ ನಿನಾದ ಹರಿದು ಬರಲಿದೆ. ಸಂಜೆ 6:00 ಗಂಟೆಗೆ ಮುಂಬೈನ ಚೇತನಾ ಪಾಠಕ ಅವರಿಂದ ಗಾಯನ, 7:30 ರಿಂದ ರುಚಿರಾ ಕೇದಾರ ಮತ್ತು ತಂಡದವರಿಂದ ಗಾಯನ-ವಾದನ-ನರ್ತನಗಳ ಕಲಾವಂತಿಕೆ ಮೂಡಿ ಬರಲಿದೆ. ಇದರಲ್ಲಿ ರುಚಿರಾ ಕೇದಾರ ಗಾಯನ, ಶೀತಲ ಕೋಳ್ವಲಕರ ಕಥಕ್‌ ನೃತ್ಯ, ಸಹನಾ ಬ್ಯಾನರ್ಜಿ ಸಿತಾರ ವಾದನ, ಸಾವನಿ ತಳವಲಕರ ತಬಲಾ, ಅದಿತಿ ಗರಡೆ ಹಾರ್ಮೋನಿಯಂ, ಅನುಜಾ ಬುರ್ಡೆ ಪಖಾವಾಜನ ವಿದ್ವತ್ತನ್ನು ಮೆರೆಯಲಿದ್ದಾರೆ.

ಮಾ.28 ರಂದು ಸಂಜೆ 6:00 ಗಂಟೆಗೆ ಉಜ್ಜಯನಿಯ ಸುಧಾಕರ ದೇವಳೆ ಅವರ ಗಾಯನ, ಸಂಜೆ 7:30 ಗಂಟೆಗೆ ಬೆಂಗಳೂರಿನ ಪ್ರವೀಣ ಗೋಡಖೀಂಡಿ ಷಡ್ಜ್ ಗೋಡಖೀಂಡಿಯವರ ದ್ವಂದ್ವ ಕೊಳಲುವಾದನಗಳ ನಿನಾದ ಹರಿಯಲಿದೆ. ಮಾ.29ರಂದು ಸಂಜೆ 6:00 ಗಂಟೆಗೆ ನಾಸಿಕ್‌ನ ಮಂಜರಿ ಅಸ್ನಾರೆ ಕೇಳಕರ ಹಾಗೂ ಸಂಜೆ 7:30 ಗಂಟೆಗೆ ಪುಣೆಯ ಪಂ|ಆನಂದ ಭಾಟೆ ಅವರ ಗಾನಸಿಂಚನ ಮೊಳಗಲಿದೆ. ಭೀಮಪಲಾಸ ಸಂಗೀತೋತ್ಸವದ ಕೊನೆಯ ದಿನ ಮಾ.30 ರಂದು ಮುಂಬೈ ವರದಾ ಗೊಡಬೋಲೆ ಗಾಯನ ಮೂಡಿ ಬರಲಿದೆ.

ಸಂಜೆ 7:30 ಗಂಟೆಗೆ ಮೂಡಿ ಬರುವ ನವದೆಹಲಿ ಪಂ|ಹರೀಶ ತಿವಾರಿ ಅವರ ಗಾಯನದೊಂದಿಗೆ ಪಂ|ಭೀಮಸೇನ ಜೋಶಿ ಜನ್ಮಶತಾಬ್ದಿ ವರ್ಷಾಚರಣೆಗೆ ತೆರೆ ಬೀಳಲಿದೆ. ಪಂ|ರಘುನಾಥ ನಾಕೋಡ, ಪಂ|ರವೀಂದ್ರ ಯಾವಗಲ್‌, ಪಂ|ರಾಮದಾಸ ಫಳಸುಲೆ, ಪಂ|ರಾಜೇಂದ್ರ ನಾಕೋಡ, ಪಂ|ಸಾತಲಿಂಗಪ್ಪ ದೇಸಾಯಿ ಕಲ್ಲೂರ, ಇಶಾನ್‌ ಘೋಷ, ಪಾಂಡುರಂಗ ಪವಾರ, ಪ್ರಥಮೇಶ ಅಮ್ರುಲೆ, ಕೇಶವ ಜೋಶಿ, ಉದಯ ಕುಲಕರ್ಣಿ, ಶ್ರೀಧರ ಮಾಂಡ್ರೆ, ದೇಬಜಿತ ಪಟತುಂಡಿ, ಸುಮಿತ ನಾಯಕ, ರೂಪಕ ಕಲ್ಲೂರಕರ, ಅಂಗದ ದೇಸಾಯಿ ತಬಲಾ ಸಾಥ್‌ ನೀಡಲಿದ್ದಾರೆ. ಡಾ|ಸುಧಾಂಶು ಕುಲಕರ್ಣಿ, ಪಂ|ವ್ಯಾಸಮೂರ್ತಿ ಕಟ್ಟಿ, ಗುರುಪ್ರಸಾದ ಹೆಗಡೆ, ಅಮೇಯ ಬಿಚು, ಜೋತಿರ್ಮಯ ಬ್ಯಾನರ್ಜಿ, ಸತೀಶ ಭಟ್ಟ ಹೆಗ್ಗಾರ, ಭರತ ಹೆಗಡೆ ಅವರು ಹಾರ್ಮೋನಿಯಂ ಸಾಥ್‌, ಸರಫರಾಜ್‌ ಖಾನ ಸಾರಂಗಿ ಹಾಗೂ ರಂಜನ ಬ್ಯೂರಾ ವಯೋಲಿನ್‌ ಸಾತ್‌ ಸಂಗತ್‌ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ

ಟಾಪ್ ನ್ಯೂಸ್

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

ಮಾಣಿಪ್ಪಾಡಿ ಪ್ರಕರಣವನ್ನು ಸರಕಾರ ಸಿಬಿಐ ಗೆ ನೀಡಲಿ, ಸತ್ಯಾಸತ್ಯತೆ ಹೊರಬರುತ್ತೆ: ಈಶ್ವರಪ್ಪ

13-

Hubli: ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ಅವರಿಗೆ ರಾಜಕಾರಣವೇ ಮುಖ್ಯ :ಡಿ.ಕೆ.ಶಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

Hubli: ಕ್ರಿಮಿನಲ್‌ ಜತೆಯೇ ಪೊಲೀಸ್‌ ಪೇದೆ ಎಸ್ಕೇಪ್! ಹುಬ್ಬಳ್ಳಿಯಲ್ಲಿ ಪೊಲೀಸ್‌ ಕಾರ್ಯಾಚರಣೆ

ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ

ಭುಗಿಲೆದ್ದ ಮೀಸಲು ರೊಚ್ಚು; ಸದನದ ಒಳ-ಹೊರಗೆ ಪ್ರತಿಭಟನೆ; ಉತ್ತರ ಕರ್ನಾಟಕದಲ್ಲಿ ಆಕ್ರೋಶ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.