ಮದ್ಯದಂಗಡಿ ತೆರೆಯದಂತೆ ಆಗ್ರಹ
Team Udayavani, Mar 17, 2022, 5:42 PM IST
ಇಂಡಿ: ಸಾಲೋಟಗಿ ಗ್ರಾಮದಲ್ಲಿ ಮದ್ಯದ ಅಂಗಡಿ (ಎಂಎಸ್‌ಐಎಲ್) ತೆರೆಯದಂತೆ ಒತ್ತಾಯಿಸಿ ಸಾಲೋಟಗಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.
ಈ ವೇಳೆ ಸಾಲೋಟಗಿ ಗ್ರಾಮದ ಯುವ ಮುಖಂಡ ಕಲ್ಲಯ್ಯ ಹಿರೇಪಟ್ಟ ಹಾಗೂ ಸಿದರಾಯ ಅರಳಗುಂಡಗಿ ಮಾತನಾಡಿ, ಸಾಲೋಟಗಿ ಗ್ರಾಮದಲ್ಲಿ ಈಗಾಗಲೇ ಶಾರದಾ ಕಿರಿಯ ಪ್ರಾಥಮಿಕ ಶಾಲೆ ಮತ್ತು ಶಿವಯೋಗೇಶ್ವರ ಸರ್ವೋದಯ ಸಂಸ್ಥೆಯ ಪ್ರೌಢ ಮತ್ತು ಪಪೂ ಕಾಲೇಜು ಇದ್ದು ಮದ್ಯದದಂಗಡಿ ತೆರೆಯಲು ಅಲ್ಲಿ ಅವಕಾಶ ನೀಡಬಾರದು. ಶಾಲೆಯ ಹತ್ತಿರವೇ ಮದ್ಯದಂಗಡಿ ತೆರೆದರೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ವೇಳೆ ಅವಕಾಶ ಕಲ್ಪಿಸಿದರೆ ಗ್ರಾಮಸ್ಥರೆಲ್ಲ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಸೋಮನಾಥ ಮಂದೇವಾಲಿ, ಮಹೇಶ ಹಸನಾಪುರ, ಶಿವಾನಂದ ನಂದಗೊಳ, ಮಲ್ಲು ಬಗಲಿ, ಸೃಜನ ಜಾಧವ, ದಾನಯ್ಯ ಪಠಪತಿ, ಅಪ್ಪಶ್ಯಾ ಕೋರಳ್ಳಿ, ಈರಣ್ಣ ಗಾಳಿಮಠ, ರಾಜು ಗಜಾಕೋಶ, ಭೀಮು ಚವ್ಹಾಣ, ಗಂಗಾಧರ ಆಳೂರ, ರಾಘವೇಂದ್ರ ಚನಗೊಂಡ, ಗುಲಾಬ ಚವ್ಹಾಣ, ರಾಮ ಹಳ್ಳಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಇಂಡಿ ತಹಶೀಲ್ದಾರ್ ಸಿ.ಎಸ್. ಕುಲಕರ್ಣಿ, ಅಬಕಾರಿ ನಿರೀಕ್ಷಕ ಎಂ.ಎಚ್. ಪಡಸಲಗಿ, ಗ್ರಾಮೀಣ ಪೊಲೀಸ್ ಠಾಣೆ ಪಿಎಸೈ ಮಾಳಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.