ಚಿತ್ರದುರ್ಗ ನಗರಸಭೆ: 1.04 ಕೋಟಿ ಉಳಿತಾಯ ಬಜೆಟ್ ಮಂಡ್ಯ
Team Udayavani, Mar 17, 2022, 7:04 PM IST
ಚಿತ್ರದುರ್ಗ: ಕೋಟೆನಗರಿ ಚಿತ್ರದುರ್ಗದ ನಿರ್ವಹಣೆ,ಅಭಿವೃದ್ಧಿ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮವೆಂಕಟೇಶ್ 2022-23ನೇ ಸಾಲಿಗೆ 144.7 ಕೋಟಿರೂ. ಮೊತ್ತದ ಬಜೆಟ್ ಮಂಡನೆ ಮಾಡಿದರು.ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಸಭೆ ನಡೆಸಿದ ಅವರು, ಬೀದಿದೀಪ, ಕುಡಿಯುವನೀರು, ಶೌಚಾಲಯ, ಉದ್ಯಾನವನಗಳ ನಿರ್ವಹಣೆಸೇರಿದಂತೆ ಹಲವು ಆದ್ಯತೆಗಳನ್ನು ವಿವರಿಸಿ ಒಟ್ಟಾರೆ1.04 ಕೋಟಿ ರೂ. ಉಳಿತಾಯ ಬಜೆಟ್ ಮಂಡನೆಮಾಡಿದ್ದಾರೆ.ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಅವರ ಪರವಾಗಿಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಬಜೆಟ್‌ಪ್ರತಿಯನ್ನು ಓದಿದರು.
ಬಜೆಟ್‌ನಲ್ಲಿ ಹೊಸ ಅಭಿವೃದ್ಧಿಕಾಮಗಾರಿಗಳು, ಆದಾಯ, ಖರ್ಚು-ವೆಚ್ಚ ಹಾಗೂನಗರದ ಹಿತದೃಷ್ಟಿಯಿಂದ ತೆಗೆದುಕೊಂಡಿರುವಕ್ರಮಗಳಿಗೆ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು.ನಗರಸಭೆಗೆ ತೆರಿಗೆಯಿಂದ 53.37 ಕೋಟಿರೂ., ಸರ್ಕಾರದ ಅನುದಾನ ಹಾಗೂಇನ್ನಿತರೆ ಮೂಲಗಳಿಂದ 58.65 ಕೋಟಿ ರೂ.ಸಂಗ್ರಹವಾಗಲಿದೆ. ಪ್ರಾರಂಭಿಕ ಶಿಲ್ಕು 32 ಕೋಟಿರೂ. ಇದೆ. ಎಲ್ಲಾ ಮೂಲಗಳಿಂದ ಮುಂದಿನಆರ್ಥಿಕ ವರ್ಷದಲ್ಲಿ ನಗರಸಭೆಗೆ 145.11ಕೋಟಿ ರೂ. ಆದಾಯ ಬರಲಿದ್ದು, ಇದರಲ್ಲಿ144.7 ಕೋಟಿ ರೂ. ವೆಚ್ಚಕ್ಕೆ ಅಂದಾಜು ಪಟ್ಟಿಸಿದ್ಧಪಡಿಸಲಾಗಿದೆ.
ಇದರಲ್ಲಿ ಇನ್ನೂ 1.04 ಕೋಟಿರೂ. ಉಳಿತಾಯವಾಗಲಿದೆ ಎಂದು ಶ್ರೀನಿವಾಸ್‌ವಿವರಿಸಿದರು. ನಗರದಲ್ಲಿ ರಸ್ತೆ, ಚರಂಡಿ ಹಾಗೂಪಾದಚಾರಿ ಮಾರ್ಗದ ಅಭಿವೃದ್ಧಿಗೆ 15 ಕೋಟಿರೂ. ಅನುದಾನ ವಿಯೋಗ ಮಾಡಲಾಗುವುದು.ನಗರಸಭೆ ಕಟ್ಟಡದ ನವೀಕರಣಕ್ಕೆ 2.5 ಕೋಟಿರೂ., ತ್ಯಾಗರಾಜ ಮಾರುಕಟ್ಟೆಯಲ್ಲಿ ವಾಣಿಜ್ಯಸಂಕೀರ್ಣ ಹಾಗೂ ಮಾಂಸ ಮಾರುಕಟ್ಟೆಯವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿ ಒಟ್ಟು9 ಕೋಟಿ ರೂ., ಕಸ ಸಂಗ್ರಹಣೆ, ವಿಂಗಡಣೆ,ವಿಲೇವಾರಿ, ನೈರ್ಮಲೀಕರಣಕ್ಕೆ 12 ಕೋಟಿ ರೂ.,ವಿದ್ಯುದೀಕರಣಕ್ಕೆ 5 ಕೋಟಿ ರೂ., ಒಳಚರಂಡಿನಿರ್ಮಾಣ, ನಿರ್ವಹಣೆಗೆ 5 ಕೋಟಿ ರೂ,ಕುಡಿಯುವ ನೀರಿನ ಸೌಲಭ್ಯಕ್ಕೆ 4.5 ಕೋಟಿ ರೂ.ಮೀಸಲಿಡಲಾಗಿದೆ. ನಗರದಲ್ಲಿ ಕೊಳವೆ ಮಾರ್ಗನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳಸ್ಥಾಪನೆ, ಕೊಳವೆ ಬಾವಿ ಕೊರೆಯಿಸುವುದುಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನಮೀಸಲಿಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
Holalkere: ಕೆರೆಗೆ ಉರುಳಿದ ಕಾರು: ಅತ್ತೆ-ಸೊಸೆ ಸಾವು
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Chitradurga: ಅಡಿಕೆ ಖರೀದಿಸಿ ಹಣ ನೀಡದೆ ವಂಚನೆ; ಆತ್ಮಹ*ತ್ಯೆಗೆ ಶರಣಾದ ವ್ಯಾಪಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.