ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ನಂ.3 ಆಟಗಾರನನ್ನು ಮಣಿಸಿದ ಲಕ್ಷ್ಯ ಸೇನ್‌


Team Udayavani, Mar 18, 2022, 6:24 AM IST

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ : ನಂ.3 ಆಟಗಾರನನ್ನು ಮಣಿಸಿದ ಲಕ್ಷ್ಯ ಸೇನ್‌

ಬರ್ಬಿಂಗ್‌ಹ್ಯಾಮ್‌: ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್‌ “ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌’ ಕೂಟದಲ್ಲಿ ದೊಡ್ಡ ಬೇಟೆಯೊಂದನ್ನಾಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ನಿರಾಸೆ ಮೂಡಿಸಿದರು.

ಗುರುವಾರದ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಲಕ್ಷ್ಯ ಸೇನ್‌ ವಿಶ್ವದ ನಂ.3 ಆಟಗಾರ ಆ್ಯಂಟನ್‌ ಆ್ಯಂಡರ್ಸನ್‌ ಅವರನ್ನು 21-16, 21-18 ನೇರ ಗೇಮ್‌ಗಳಿಂದ ಮಣಿಸಿ ಆಚ್ಚರಿಯ ಫ‌ಲಿತಾಂಶ ದಾಖಲಿಸಿದರು. ಇವರಿಬ್ಬರು ಮುಖಾಮುಖಿ ಆದದ್ದು ಇದೇ ಮೊದಲು. ಸೇನ್‌ ಆವರಿನ್ನು  ಚೀನದ ಲು ಗುವಾಂಗ್‌ ಜು ಅವರನ್ನು ಎದುರಿಸಲಿದ್ದಾರೆ.

ಸಿಂಧು, ಸೈನಾಗೆ ಆಘಾತ :

ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಮೊದಲ ಸುತ್ತನ್ನು ಸುಲಭದಲ್ಲಿ ದಾಟಿದರೂ ದ್ವಿತೀಯ ಸುತ್ತಿನಲ್ಲಿ ಕಠಿನ ಸವಾಲು ಎದುರಿಸಬೇಕಾಯಿತು. ಇಬ್ಬರೂ 3 ಗೇಮ್‌ಗಳ ಹೋರಾಟದಲ್ಲಿ ಜಪಾನಿ ಆಟಗಾರ್ತಿಯರಿಗೆ ಶರಣಾದರು. ಹೀಗಾಗಿ ಕ್ವಾರ್ಟರ್‌ ಫೈನಲ್‌ನಲ್ಲಿ ಇವರಿಬ್ಬರು ಮುಖಾಮುಖೀಯಾಗುವ ಅವಕಾಶ ತಪ್ಪಿತು.

ಸೈನಾ ಅವರನ್ನು ವಿಶ್ವದ ನಂ.2 ಆಟಗಾರ್ತಿ ಅಕಾನೆ ಯಮಾಗುಚಿ 21-14, 17-21, 21-17 ಅಂತರದಿಂದ ಸೋಲಿಸಿದರೆ, ಸಿಂಧು ಅವರನ್ನು ಸಯಾಕಾ ತಕಹಾಶಿ 21-19, 16-21, 21-17 ಅಂತರದಿಂದ ಹಿಮ್ಮೆಟ್ಟಿಸಿದರು. ಸಿಂಧು-ತಕಹಾಶಿ ಪಂದ್ಯ ಒಂದು ಗಂಟೆ, 6 ನಿಮಿಷಗಳ ಕಾಲ ಸಾಗಿತು.

ಮೊದಲ ಸುತ್ತಿನಲ್ಲಿ ಸಿಂಧು ಚೀನದ ಝೀ ಯಿ ವಾಂಗ್‌ ಅವರನ್ನು 21-18, 21-13 ಅಂತರದಿಂದ ಮಣಿಸಿದ್ದರು. ಸೈನಾ ನೆಹ್ವಾಲ್‌ ಸ್ಪೇನ್‌ನ ಬೀಟ್ರಿಝ್ ಕೊರಾಲೆಸ್‌ ವಿರುದ್ಧ 21-17, 21-19 ಅಂತರದ ಮೇಲುಗೈ ಸಾಧಿಸಿದ್ದರು.

ವನಿತಾ ಡಬಲ್ಸ್‌ನಲ್ಲಿ ತಿೃಷಾ ಜಾಲಿ- ಗಾಯತ್ರಿ ಗೋಪಿಚಂದ್‌ ದ್ವಿತೀಯ ಸುತ್ತಿಗೆ ಮುನ್ನಡೆದಿದ್ದಾರೆ.

ಸಾಲು ಸಾಲು ಸೋಲು :

ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಪ್ರಣೀತ್‌ ಒಲಿಂಪಿಕ್ಸ್‌ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್ಸೆನ್‌ ವಿರುದ್ಧ 20-22, 11-21ರಿಂದ ಪರಾಭವಗೊಂಡರು. ಎಚ್‌.ಎಸ್‌. ಪ್ರಣಯ್‌ ಅವರನ್ನು ಥಾಯ್ಲೆಂಡ್‌ನ‌ ಕುನ್ಲವುತ್‌ ವಿತಿದ್ಸರಣ್‌ 21-15, 24-22ರಿಂದ ಹಿಮ್ಮೆಟ್ಟಿಸಿದರು. ಸಮೀರ್‌ ವರ್ಮ ಕೂಡ ಸೋಲಿನ ಸುಳಿಗೆ ಸಿಲುಕಿದರು. ಅವರನ್ನು ನೆದರ್ಲೆಂಡ್ಸ್‌ನ ಮಾರ್ಕ್‌ ಕಾಲ್ಜೂ 21-18, 21-11ರಿಂದ ಕೆಡವಿದರು.

ಪುರುಷರ ಡಬಲ್ಸ್‌ನಲ್ಲಿ 5ನೇ ಶ್ರೇಯಾಂಕದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಅವರು ಸ್ಕಾಟ್ಲೆಂಡ್‌ನ‌ ಅಲೆಕ್ಸಾಂಡರ್‌ ಡುನ್‌-ಆ್ಯಡಂ ಹಾಲ್‌ ಕೈಯಲ್ಲಿ 21-17, 21-19 ಅಂತರದ ಸೋಲನುಭವಿಸಿದರು. ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ, ಕೃಷ್ಣ ಪ್ರಸಾದ್‌ ಗರಗ್‌-ವಿಷ್ಣುವರ್ಧನ್‌ ಕೂಡ ಗೆಲುವು ಕಾಣುವಲ್ಲಿ ವಿಫ‌ಲರಾದರು.

 

ಟಾಪ್ ನ್ಯೂಸ್

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂಗೆ ಪತ್ರ

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

BJP: ಇಂದು ಅಶೋಕ್‌ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್‌ ಕಮಿಟಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.