ತಹಶೀಲ್ದಾರ್ ವರ್ಗಾವಣೆ ಮಾಡುವ ವಿಚಾರದಲ್ಲಿ ಅಶ್ವಥ್ ನಾರಾಯಣ್- ಅಶೋಕ್ ಗಲಾಟೆ
Team Udayavani, Mar 18, 2022, 1:37 PM IST
ಬೆಂಗಳೂರು: ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆಸಂಬಂಧಪಟ್ಟಂತೆ ಸಚಿವರಾದ ಅಶ್ವತ್ಥ್ ನಾರಾಯಣ್ ಹಾಗೂ ಆರ್. ಅಶೋಕ್ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ಜಟಾಪಟಿ ನಡೆದಿದೆ.
ಮಾಗಡಿ ಹಾಗೂ ರಾಮನಗರದ ತಹಶೀಲ್ದಾರ್ ಬದಲಾವಣೆಗಾಗಿ ಅಶ್ವತ್ಥನಾರಾಯಣ ಅವರು ಆರ್. ಅಶೋಕ ರಿಗೆ ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದರು. ಆದರೆ ಕೆಲಸವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಶ್ವತ್ಥನಾರಾಯಣ ಪ್ರಶ್ನಿಸಿದರು. ಇದರಿಂದ ಸಿಟ್ಟಿಗೆದ್ದ ಅಶೋಕ ನನ್ನ ಇಲಾಖೆ ವ್ಯಾಪ್ತಿಯಲ್ಲಿ ಮೂಗು ತೂರಿಸುವುದೇಕೆ? ಎಂದು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸ್ಥಳದಲ್ಲೇ ಇದ್ದ ಶಾಸಕರು ಮಧ್ಯಪ್ರವೇಶಿಸಿ ಜಗಳ ತಾರಕಕ್ಕೆ ಹೋಗದಂತೆ ತಡೆದಿದ್ದಾರೆ.
ಈ ಬಗ್ಗೆ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿ, ಜಸ್ಟ್ ಮಾತುಕತೆ ನಡೆದಿದೆ. ಮಾಗಡಿ, ರಾಮನಗರದಲ್ಲಿ ತಹಶೀಲ್ದಾರ್ ಬದಲಾವಣೆ ಕೋರಿಕೆ ಬಂದಿದೆ. ಆ ಪ್ರಕಾರದಲ್ಲಿ ಕಂದಾಯ ಸಚಿವರು ಪರಿಗಣಿಸಿ ನೋಡುತ್ತೇನೆಂದು ಹೇಳಿದರು. ಕೆಲಸ ಮಾಡವುದು ಬಿಡುವುದು ಅವರ ಇಲಾಖೆಗೆ ಬಿಟ್ಟಿದ್ದು. ಬೇರೆ ಯಾವ ಚರ್ಚೆ, ವಿವಾದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ:ಇಟಲಿ ಮೂಲದವರನ್ನು ಮೆಚ್ಚಿಸಲು ಈ ಸದಾರಮೆ ನಾಟಕ: ಡಿಕೆಶಿ ವಿರುದ್ಧ ಬಿಜೆಪಿ ಟ್ವೀಟಾಸ್ತ್ರ
ನಮಗೆ ಕೆಲವೊಂದು ಬದಲಾವಣೆಗೆ ಮಾಡಲು ಒತ್ತಾಯ ಇರುತ್ತದೆ. ಸಂಬಂಧಿಸಿದ ಇಲಾಖೆಯಲ್ಲಿ ಪರಿಸ್ಥಿತಿ ನೋಡಿಕೊಂಡು ಅವಕಾಶವಿದ್ದರೆ ಮಾಡುತ್ತಾರೆ. ನಮ್ಮದೆಯಾದ ಒತ್ತಾಯವಿರುತ್ತದೆ.ಅದನ್ನು ಒಪ್ಪಿಕೊಳ್ಳಬೇಕು ಅಂತೇನಿಲ್ಲ ಎಂದರು.
ನಾವಿಬ್ಬರು ಒಂದು ಪಕ್ಷದಲ್ಲಿರುವವರು. ಸಹೋದರರ ರೀತಿ ಇರಬೇಕು, ಪ್ರೀತಿ ಇರಬೇಕು, ವ್ಯತ್ಯಾಸ ಬರುತ್ತದೆ ಆದರೆ ಅದನ್ನ ಅಲ್ಲೇ ಬಿಡಬೇಕು. ನಾವೆಲ್ಲರೂ ಬಂದಿರುವುದು ಜನರ ಪರವಾಗಿ. ನಮ್ಮ ಪ್ರತಿಷ್ಠೆಗಳನ್ನ ಹೆಚ್ಚಿಸ್ತಾಕೊಳ್ಳುತ್ತಾ ಹೋದರೆ ಯಾವುದೇ ಒಳ್ಳೆಯ ಉದ್ದೇಶಗಳಿಗೆ ಪೂರಕವಾಗಿರಲ್ಲ. ನಮ್ಮ ಪ್ರತಿಷ್ಠೆಗಳನ್ನು ಬಿಡಲೇಬೇಕಾಗುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.