21ರಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ

ಸುಗ್ಗೇನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ: ಅಧಿಕಾರಿಗಳು ಸಾಥ್‌

Team Udayavani, Mar 18, 2022, 2:39 PM IST

jilla

ಬಳ್ಳಾರಿ: ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಕಂಪ್ಲಿ ತಾಲೂಕಿನ ಕಂಪ್ಲಿ ಹೋಬಳಿಯ ಸುಗ್ಗೇನಹಳ್ಳಿ ಗ್ರಾಮದಲ್ಲಿ ಮಾ. 21ರಂದು ಗ್ರಾಮವಾಸ್ತವ್ಯ ನಡೆಸಿ ಗ್ರಾಮಸ್ಥರ ದೂರು-ದುಮ್ಮಾನ ಆಲಿಸಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ. ಜಿಲ್ಲಾಧಿಕಾರಿಗಳಿಗೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಸಾಥ್‌ ನೀಡಲಿದ್ದಾರೆ.

ಮಾ. 19ರಂದು ಪಾಲಿಕೆಯ ಮೇಯರ್‌ ಮತ್ತು ಉಪಮೇಯರ್‌ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಗ್ರಾಮವಾಸ್ತವ್ಯವನ್ನು ಮಾ.21ಕ್ಕೆ ನಿಗದಿಯಾಗಿದೆ. ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಿದ್ದಾರೆ. ಉಳಿದ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಿದ್ದಾರೆ. ಗ್ರಾಮಸ್ಥರು ತಮ್ಮ ದೂರು-ದುಮ್ಮಾನ ಹಾಗೂ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ ಹೇಳಿಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲಾಧಿಕಾರಿಗಳು ಸುಗ್ಗೇನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ನಡೆಸಲಿದ್ದರೆ, ತಾಲೂಕುಮಟ್ಟದಲ್ಲಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‌ರು ಒಂದೊಂದು ಊರುಗಳನ್ನು ಗುರುತಿಸಿ ಆ ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ದನಿಯಾಗುವ ಕೆಲಸ ಮಾಡಲಿದ್ದಾರೆ.

ವಿವಿಧೆಡೆ ಗ್ರಾಮ ವಾಸ್ತವ್ಯ

ಮಾ.21ರಂದು ಕಂಪ್ಲಿ ತಾಲೂಕಿನ ಕಂಪ್ಲಿ ಹೋಬಳಿಯ ಸುಗ್ಗೇನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಬಳ್ಳಾರಿ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್‌ರು ಹಾಗೂ ಜಿಲ್ಲಾಮಟ್ಟದ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಬಳ್ಳಾರಿ ತಾಲೂಕಿನ ಮೋಕಾ ಹೋಬಳಿಯ ಬೈರದೇವನಹಳ್ಳಿ ಗ್ರಾಮದಲ್ಲಿ ಬಳ್ಳಾರಿ ತಹಶೀಲ್ದಾರ್‌ರು ಮತ್ತು ಅಧಿಕಾರಿಗಳು. ಮಾ.19ರಂದು ಕುರುಗೋಡು ತಾಲೂಕಿನ ವದ್ದಟ್ಟಿ ಗ್ರಾಮದಲ್ಲಿ ತಾಲೂಕಿನ ತಹಸೀಲ್ದಾರರು ಮತ್ತು ಅಧಿಕಾರಿಗಳು, ಸಂಡೂರು ತಾಲೂಕಿನ ಮುರಾರಿಪುರ ಗ್ರಾಮದಲ್ಲಿ ತಾಲೂಕಿನ ತಹಶೀಲ್ದಾರ್‌ ರು ಮತ್ತು ಅಧಿಕಾರಿಗಳು, ಸಿರಗುಪ್ಪ ತಾಲೂಕಿನ ಹಚ್ಚೊಳ್ಳಿ ಹೋಬಳಿಯ ಇಟಗಿಹಾಳು ಗ್ರಾಮದಲ್ಲಿ ತಾಲೂಕಿನ ತಹಶೀಲ್ದಾರ್‌ರು ಮತ್ತು ಅಧಿಕಾರಿಗಳು ಗ್ರಾಮಗಳಲ್ಲಿ ಗ್ರಾಮ ವ್ಯಾಸ್ತವ್ಯ ಮಾಡಲಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ರು ಹಾಗೂ ಅಧಿಕಾರಿಗಳು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ನಂತರ ಗ್ರಾಮೀಣ ಪ್ರತಿಭೆ ಹಾಗೂ ಕಲೆಗೆ ಪ್ರೋತ್ಸಾಹಿಸುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅದೇ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುತ್ತದೆ.

ಗ್ರಾಮ ವಾಸ್ತವ್ಯದಲ್ಲಿ ಕೈಗೊಳ್ಳಲಾಗುವ ಕ್ರಮಗಳಿವು

ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಗ್ರಾಮದಲ್ಲಿನ ಎಲ್ಲ ಪಹಣಿಯಲ್ಲಿನ ಲೋಪದೋಷಗಳು, ಪಹಣಿ ಕಾಲಂ 3 ಮತ್ತು ಅಧಿಕಾರ ಬಂದ್‌ ತಾಳೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಎಲ್ಲ ಪಹಣಿಗಳಲ್ಲಿಯೂ ಕೂಡ ಕಾಲಂ 3 ಮತ್ತು ಕಾಲಂ 9 ತಾಳೆ ಆಗುತ್ತವೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಖಚಿತಪಡಿಕೊಳ್ಳುವುದು ಮತ್ತು ಲೋಪಗಳು ಕಂಡುಬಂದಿರುವ ಪ್ರಕರಣಗಳನ್ನು ಗುರುತಿಸಿ ವಿಲೇ ಮಾಡಲು ಆದೇಶ ಹೊರಡಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದು. ಗ್ರಾಮದಲ್ಲಿ ಸರ್ಕಾರಿ ಜಮೀನು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಕಾಯ್ದಿರಿಸಲಾಗಿರುವ ಜಮೀನುಗಳು ಅಕ್ರಮವಾಗಿ ಒತ್ತುವರಿಯಾಗಿದ್ದಲ್ಲಿ ಅಂಥ ಜಮೀನುಗಳನ್ನು ಗುರುತಿಸಿ ತೆರವುಗೊಳಿಸಲು ಕ್ರಮಕೈಗೊಳ್ಳುವುದು. ಗ್ರಾಮಗಳಲ್ಲಿ ವ್ಯಾಕ್ಸಿನೇಷನ್‌ ಹಾಕಲು ಹೆಲ್ತ್‌ಕ್ಯಾಂಪ್‌ ಆಯೋಜಿಸಿ ನಿಯಮಾನುಸಾರ ಕ್ರಮ ಕೈಗೊಳ್ಳತಕ್ಕದ್ದು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

Transportation agency issue; Minister Ramalinga Reddy challenged BJP

Koppala: ಸಾರಿಗೆ ಸಂಸ್ಥೆ ವಿಚಾರ; ಬಿಜೆಪಿಗೆ ಸವಾಲು ಹಾಕಿದ ಸಚಿವ ರಾಮಲಿಂಗಾ ರೆಡ್ಡಿ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು … ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು …ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary; ಜನಾರ್ದನ ರೆಡ್ಡಿ ಬಳ್ಳಾರಿ ವನವಾಸ ಅಂತ್ಯ

Bellary: Siddaramaiah, who said corruption is unforgivable, should resign now: Sri Ramulu

Bellary: ಭ್ರಷ್ಟಾಚಾರ ಕ್ಷಮಿಸಲಾಗದು ಎಂದಿದ್ದ ಸಿದ್ದರಾಮಯ್ಯ ಈಗ ರಾಜೀನಾಮೆ ಕೊಡಬೇಕು: ರಾಮುಲು

Bellary; Darshan IT interrogation in jail

Bellary; ಜೈಲಿನಲ್ಲಿಂದು ದರ್ಶನ್‌ ಐಟಿ ವಿಚಾರಣೆ; ಬಳ್ಳಾರಿಗೆ ಬಂದ ಅಧಿಕಾರಿಗಳು

1-darshan

Darshan ಭೇಟಿಗೆ ಮಾಹಿತಿ‌ ಇಲ್ಲದೇ ಮತ್ತೊಮ್ಮೆ ಜೈಲಿಗೆ ಬಂದ ವಕೀಲರು

11-bellary

Bellary: ದರ್ಶನ್ ನನ್ನು ಭೇಟಿಯಾದ ವಕೀಲ ಸುನೀಲ್; ಹಲವು ವಿಚಾರಗಳ ಬಗ್ಗೆ ಚರ್ಚೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

8

Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

7

Bunts Hostel ವೃತ್ತ: ಫುಟ್‌ಪಾತ್‌ ಇಲ್ಲದೆ ಅಪಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.