ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ
ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಪರಿಪೂರ್ಣಗೊಳಿಸುವಲ್ಲಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ
Team Udayavani, Mar 18, 2022, 5:43 PM IST
ಬಾದಾಮಿ: ಆದರ್ಶ ವಿದ್ಯಾಲಯವು ತಾಲೂಕಿನ ಆದರ್ಶ ವಿದ್ಯಾಲಯಗಳಲ್ಲಿ ಒಂದಾಗಿದೆ. ಇದೊಂದು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸರಕಾರಿ ವಿದ್ಯಾಲಯವಾಗಿದೆ. ಇಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನವನ್ನು ಪ್ರದರ್ಶಿಸಬೇಕಾಗುತ್ತಿದೆ. ಇದಕ್ಕೆ ಪೂರಕವಾಗಿ ಇಲ್ಲಿನ ಶಿಕ್ಷಕರು ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಪರಿಪೂರ್ಣಗೊಳಿಸುವಲ್ಲಿ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಯುವ ಮುಖಂಡ ಹಾಗೂ ಹೊಳೆ ಹುಚ್ಚೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹೊಳಬಸು ಶೆಟ್ಟರ ಹೇಳಿದರು.
ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದ ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ವಿದ್ಯಾಲಯದಕ್ಕೆ ಬೇಕಾಗಿರುವ ಸ್ಮಾರ್ಟ್ ಕ್ಲಾಸ್, ಸಭಾಭವನ ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಪೂರಕವಾಗಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಗಮನಕ್ಕೆ ತಂದು ಮಂಜೂರಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಜಿಪಂ ಮಾಜಿ ಸದಸ್ಯ ಎಂ.ಬಿ. ಹಂಗರಗಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೊದಲ ಘಟ್ಟವಾಗಿದೆ. ಸಮರ್ಥವಾಗಿ ಮತ್ತು ಧೈರ್ಯದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗುವ ಮೂಲಕ ಶಾಲೆಗೆ, ಪಾಲಕರಿಗೆ ಕೀರ್ತಿ ತರಬೇಕೆಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎನ್.ಎಮ್. ಗೌಡರ ಮಾತನಾಡಿದರು.
ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪತ್ರಕರ್ತ ಅಡಿವೇಂದ್ರ ಇನಾಮದಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪುರಸಭೆ ಅಧ್ಯಕ್ಷ ರಾಜಮಹ್ಮದ ಬಾಗವಾನ, ಪಿ.ಎಂ.ಗಾಣಿಗೇರ ಮಾತನಾಡಿದರು. ಶಿವಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ರಾಮಚಂದ್ರ ಭಜಂತ್ರಿ, ಹನಮಂತ ಮುಷ್ಟಿಗೇರಿ ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ಸಂಗಮೇಶ ಗಣಾಚಾರಿ ಸ್ವಾಗತಿಸಿದರು, ನಿಂಗಪ್ಪ ಚೂರಿ, ಕಾವ್ಯಾ ಪಾಟೀಲ ನಿರೂಪಿಸಿದರು. ರಮೇಶ ಕತ್ತಿಕೈ ವಂದಿಸಿದರು. ಶಂಕರರಾವ್ ಕುಲಕರ್ಣಿ, ಬಿ.ಎಂ. ಅಮಾತಿಗೌಡರ, ರೇಣುಕಾ ಶಿಸ್ತುಗಾರ, ಬಸವರಾಜ ಚಿಕ್ಕಣ್ಣವರ, ಭಾಗ್ಯಲಕ್ಷ್ಮೀ ಟಿ.ಎಚ್. ಅಶೋಕ ಪೂಜಾರಿ, ಬಸವರಾಜ ಸಿಂದಗಿಮಠ, ಕೀರ್ತಿ ಬಡಿಗೇರ, ಶ್ರೀನಿವಾಸ ಈಳಗೇರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.