ರಷ್ಯಾ ತಡೆಯುವ ಶಕ್ತಿ ಐಸಿಜೆಗೆ ಉಂಟೇ?
Team Udayavani, Mar 19, 2022, 6:40 AM IST
ಉಕ್ರೇನ್ ಮೇಲಿನ ಯುದ್ಧವನ್ನು ತತ್ಕ್ಷಣ ನಿಲ್ಲಿಸುವಂತೆ ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಆದೇಶ ನೀಡಿದೆ. ಆದರೆ ರಷ್ಯಾ ಈ ಆದೇಶವನ್ನು ಪಾಲಿಸಿಲ್ಲ.
ಐಸಿಜೆ ಆದೇಶವೇನು? :
ಉಕ್ರೇನ್ನಲ್ಲಿ ರಷ್ಯಾ ನರಮೇಧ ಮಾಡುತ್ತಿದೆ, ಇದನ್ನು ನಿಲ್ಲಿಸಿ ಎಂದು ಐಸಿಜೆಗೆ ಉಕ್ರೇನ್ ಮನವಿ ಸಲ್ಲಿಸಿತ್ತು. ಈ ಕುರಿತ ವಿಚಾರಣೆ ಆರಂಭವಾದರೂ ರಷ್ಯಾ ಹಾಜರಾಗಲಿಲ್ಲ. ಕಡೆಗೆ ಅದು ಆದೇಶವೊಂದನ್ನು ನೀಡಿದ್ದು, ಈ ಕೂಡಲೇ ಯುದ್ಧ ನಿಲ್ಲಿಸಬೇಕು ಎಂದು ರಷ್ಯಾಗೆ ಸೂಚಿಸಿದೆ.
ಕಾರ್ಯವ್ಯಾಪ್ತಿ ಏನು? :
ಸಾಮಾನ್ಯವಾಗಿ ಈ ಅಂತಾರಾಷ್ಟ್ರೀಯ ಕೋರ್ಟ್ ಕೂಡ ವಿಶ್ವಸಂಸ್ಥೆಯ ಅಡಿಯಲ್ಲೇ ಬರುತ್ತದೆ. ನೆದರ್ಲೆಂಡ್ನ ಹೇಗ್ನಲ್ಲಿ ಪ್ರಧಾನ ಕಚೇರಿ ಇದೆ. ಆದರೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳೆಲ್ಲವೂ ಐಸಿಜೆಯ ವ್ಯಾಪ್ತಿಗೆ ಬರಲೇಬೇಕು ಅಂತೇನಿಲ್ಲ. ಆಯಾ ರಾಷ್ಟ್ರಗಳು ಐಸಿಜೆ ವ್ಯಾಪ್ತಿಗೆ ನಾವು ಬರುತ್ತೇವೆ ಎಂದು ಒಪ್ಪಿಗೆ ನೀಡಬೇಕು. ಸದ್ಯ 73 ದೇಶಗಳು ಮಾತ್ರ ಐಸಿಜೆ ಸದಸ್ಯತ್ವ ಹೊಂದಿವೆ.
ರಷ್ಯಾ-ಉಕ್ರೇನ್ ಸೇರಿವೆಯೇ? :
ರಷ್ಯಾ ವಿರುದ್ಧ ಉಕ್ರೇನ್ ಐಸಿಜೆಗೆ ಅರ್ಜಿ ಸಲ್ಲಿಸಿದೆ. ಆದರೆ ಈ ಎರಡೂ ದೇಶಗಳು ಐಸಿಜೆಯ ಸದಸ್ಯತ್ವ ಹೊಂದಿಲ್ಲ. ಆದರೂ ಉಕ್ರೇನ್, 1948ರ ಪ್ರಕರಣವೊಂದನ್ನು ಉಲ್ಲೇಖೀಸಿ, ನಮ್ಮ ದೇಶದಲ್ಲಿ ನರಮೇಧವಾಗುತ್ತಿದೆ, ನಿಲ್ಲಿಸಿ ಎಂದು ಅರ್ಜಿ ಸಲ್ಲಿಸಿದೆ.
ಆದೇಶ ಪಾಲಿಸದಿದ್ದರೆ ಏನಾಗುತ್ತದೆ? :
ಈ ಎರಡೂ ಅಂತಾರಾಷ್ಟ್ರೀಯ ಕೋರ್ಟ್ನ ಸದಸ್ಯ ರಾಷ್ಟ್ರವಾಗಿಲ್ಲದೇ ಇರುವುದರಿಂದ ಆದೇಶ ಪಾಲಿಸದಿದ್ದರೆ ಏನಾಗುತ್ತದೆ ಎಂದು ಹೇಳುವುದು ಕಷ್ಟ. ವಿಶ್ವಸಂಸ್ಥೆಯ ಆರ್ಟಿಕಲ್ 94(1) ಪ್ರಕಾರ, ಐಸಿಜೆಯ ಆದೇಶವನ್ನು ಎರಡೂ ಕಡೆಯವರು ಪಾಲಿಸಬೇಕು. ಪಾಲಿಸದಿದ್ದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊರೆ ಹೋಗಬಹುದು.
ಯುಎನ್ಎಸ್ಸಿಯಲ್ಲಿ ನ್ಯಾಯ ಸಿಗುತ್ತದೆಯೇ? :
ಉಕ್ರೇನ್ ಪಾಲಿಗೆ ಇದು ಕಷ್ಟಸಾಧ್ಯ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿಟೋ ಪವರ್ ಹೊಂದಿದೆ. ಅಲ್ಲಿಗೆ ಈ ಕೇಸ್ ಹೋದರೂ ಇದು ಜಾರಿಯಾಗದಂತೆ ತಡೆಯುವ ಶಕ್ತಿ ರಷ್ಯಾಕ್ಕಿದೆ. ಹೀಗಾಗಿ ಪಾಲಿಸದಿದ್ದರೂ ರಷ್ಯಾಕ್ಕೆ ಏನೂ ನಷ್ಟವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
UK: ಒಂದೇ ನಿಮಿಷದಲ್ಲಿ 49 ಗ್ರಾಂ ಕಾಟನ್ ಕ್ಯಾಂಡಿ ಸೇವಿಸಿ ದಾಖಲೆ ಬರೆದ ಮಹಿಳೆ
American Airlines ಅಮೆರಿಕ: ವಿಮಾನಯಾನ ವ್ಯತ್ಯಯ,”ಕ್ರಿಸ್ಮಸ್’ಗೆ ಅಡ್ಡಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.