ಸಂತೋಷಕ್ಕೆ ಫಿನ್ಲಂಡ್ ಬೆಸ್ಟ್
Team Udayavani, Mar 19, 2022, 8:20 AM IST
ಹೊಸದಿಲ್ಲಿ: ಯಾವ ದೇಶದಲ್ಲಿ ಜನರು ಹೆಚ್ಚು ಸಂತೋಷವಾಗಿ ಬದುಕುತ್ತಿದ್ದಾರೆ ಗೊತ್ತಾ? ಇದಕ್ಕೆ ಉತ್ತರ ಫಿನ್ಲಂಡ್.
ವಿಶ್ವಸಂಸ್ಥೆಯೇ ಸಮೀಕ್ಷೆ ನಡೆಸಿ ಸೂಚ್ಯಂಕವನ್ನು ಶುಕ್ರವಾರ ಹೊರಬಿಟ್ಟಿದ್ದು, ಅದರ ಪ್ರಕಾರ ಫಿನ್ಲಂಡ್ ಅತೀ ಸಂತೋಷದ ರಾಷ್ಟ್ರವಾಗಿದ್ದರೆ, ಭಾರತ ಪಟ್ಟಿಯ ಕೊನೆಯಿಂದ 11ನೇ ಸ್ಥಾನ ಪಡೆದು ಕೊಂಡಿದೆ. ದೇಶದ ಜಿಡಿಪಿ, ಆರ್ಥಿಕ ಶಕ್ತಿ, ಸಾಮಾಜಿಕ ಚಟುವಟಿಕೆಗಳು ಹೀಗೆ ಅನೇಕ ಮಾನದಂಡಗಳ ಆಧಾರದಲ್ಲಿ ರಾಷ್ಟ್ರಗಳಿಗೆ ಸೊನ್ನೆಯಿಂದ 10ರ ವರೆಗೆ ಅಂಕ ಕೊಡಲಾಗುತ್ತದೆ. ಅದರಂತೆ 2022ನೇ ಸಾಲಿನಲ್ಲಿ ಒಟ್ಟು 146 ರಾಷ್ಟ್ರಗಳ ಸೂಚ್ಯಂಕ ರಚಿಸಲಾಗಿದೆ.
ಅದರಲ್ಲಿ ತಾಲಿಬಾನ್ ಆಕ್ರಮಣದಿಂದ ನಲುಗಿರುವ ಅಫ್ಘಾನಿಸ್ಥಾನ ಕೊನೆಯ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ 149 ರಾಷ್ಟ್ರಗಳ ಸೂಚ್ಯಂಕದಲ್ಲಿ 139ನೇ ಸ್ಥಾನದಲ್ಲಿದ್ದ ಭಾರತ ಈ ಬಾರಿ ಕೊಂಚ ಏರಿಕೆ ಕಂಡು 136ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಮೊದಲ ಸ್ಥಾನದಲ್ಲಿರುವ ಫಿನ್ಲಂಡ್ ಕಳೆದ ಐದು ವರ್ಷಗಳಿಂದಲೂ ಆ ಸ್ಥಾನವನ್ನು ತನ್ನ ಬಳಿಯೇ ಇಟ್ಟುಕೊಳ್ಳುವಲ್ಲಿ ಸಫಲವಾಗಿದೆ. 2ನೇ ಸ್ಥಾನದಲ್ಲಿ ಡೆನ್ಮಾರ್ಕ್, 3ನೇ ಸ್ಥಾನದಲ್ಲಿ ಐಲ್ಯಾಂಡ್ ಇದೆ. 16ನೇ ಸ್ಥಾನದಲ್ಲಿ ಅಮೆರಿಕವಿದ್ದರೆ, 17ನೇ ಸ್ಥಾನದಲ್ಲಿ ಯುನೈಡೆಟ್ ಕಿಂಗ್ಡಮ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.