ಬಾಬಾ ಬುಡನ್ ದರ್ಗಾದಲ್ಲಿ ಉರುಸ್ ನೀರಸ
ಜಿಲ್ಲಾಡಳಿತದ ನಿರ್ಬಂಧಕ್ಕೆ ಅಸಮಾಧಾನ
Team Udayavani, Mar 19, 2022, 12:00 PM IST
ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಶಾಖಾದ್ರಿ ಅವರ ಧಾರ್ಮಿಕ ಆಚರಣೆಗಳಿಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉರುಸ್ ಆಚರಿಸದಿರಲು ಶಾಖಾದ್ರಿ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಉರುಸ್ ನೀರಸವಾಗಿತ್ತು.
ಶುಕ್ರವಾರ ಶಾಖಾದ್ರಿ ಗೌಸ್ ಮೊಹಿದ್ದೀನ್ ನೇತೃತ್ವದಲ್ಲಿ ಉರುಸ್‌ಗೆ ಜಿಲ್ಲಾಡಳಿತದಿಂದ ಅವಕಾಶ ಕಲ್ಪಿಸಲಾಗಿತ್ತು. ಆದರೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ಚಾದರ ಹಾಕುವುದು ಹಾಗೂ ಗಂಧ ಲೇಪನದಂತಹ ಧಾರ್ಮಿಕ ಆಚರಣೆಗೆ ಜಿಲ್ಲಾಡಳಿತ ಅವಕಾಶ ನೀಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶಾಖಾದ್ರಿ ಉರುಸ್ ಆಚರಿಸದೇ ಹಿಂದಿರುಗಿದರು.
ಶುಕ್ರವಾರದ ಉರುಸ್ ಹಿನ್ನೆಲೆಯಲ್ಲಿ ಜೋಳ್ ದಾಳ್ ಗ್ರಾಮದಿಂದ ತರಲಾಗಿದ್ದ ಗಂಧವನ್ನು ಗುರುವಾರ ಚಿಕ್ಕಮಗಳೂರು ನಗರದ ಉಪ್ಪಳ್ಳಿಯ ದರ್ಗಾಕ್ಕೆ ತರಲಾಗಿತ್ತು. ಶುಕ್ರವಾರ ಮಧ್ಯಾಹ್ನ ಗಂಧವನ್ನು ಉಪ್ಪಳ್ಳಿಯಿಂದ ಕಾಲ್ನಡಿಗೆಯಲ್ಲಿ ಬಾಬಾ ಬುಡನ್‌ಗಿರಿ ಸಮೀಪದ ಅತ್ತಿಗುಂಡಿಗೆ ಕೊಂಡೊಯ್ಯಲಾಗಿತ್ತು. ಅತ್ತಿಗುಂಡಿಯಿಂದ ಶಾಖಾದ್ರಿ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆ, ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಫಕೀರರು, ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಸ್ಥಳೀಯರು ಭವ್ಯ ಮೆರವಣಿಗೆ ಮೂಲಕ ಸಂದಲ್ ಗಂಧವನ್ನು ಬಾಬಾ ಬುಡನ್ ದರ್ಗಾಕ್ಕೆ ಕೊಂಡೊಯ್ದರು. ಈ ವೇಳೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ತಮ್ಮ ನೇತೃತ್ವದಲ್ಲಿ ಗಂಧ ಲೇಪನ, ಚಾದರ ಹಾಕಲು ಅವಕಾಶ ನೀಡಬೇಕೆಂದು ಶಾಖಾದ್ರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಜಿಲ್ಲಾಡಳಿತ ಅವಕಾಶ ನೀಡದೇ ಮುಜಾವರ್ ಮೂಲಕ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇದೆಯೇ ಹೊರತು ಶಾಖಾದ್ರಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೆಲವರು ಶಾಖಾದ್ರಿಯವರಿಗೆ ಸಂದಲ್ ಗಂಧ ಲೇಪಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬೇಕೆಂದು ಶಾಖಾದ್ರಿ ಈ ವೇಳೆ ಪಟ್ಟು ಹಿಡಿದರು. ಆದರೆ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಉಲ್ಲೇಖೀಸಿ ಶಾಖಾದ್ರಿಗೆ ಧಾರ್ಮಿಕ ಆಚರಣೆಗಳಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿತು.
ಈ ವೇಳೆ ದರ್ಗಾದ ಆವರಣದಲ್ಲಿರುವ ತಮ್ಮ ಕಚೇರಿ ಒಳಗೆ ನಡೆದ ಶಾಖಾದ್ರಿ ಅಲ್ಲಿಂದ ಹೊರಬರದೇ ಧಾರ್ಮಿಕ ಆಚರಣೆ, ಪೂಜೆಗೆ ತಮಗೆ ಅವಕಾಶ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಉರುಸ್ ಆಚರಣೆ ಮಾಡದಿರಲು ತೀರ್ಮಾನಿಸಿದರು. ಉರುಸ್ ಆಚರಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಫಕೀರರು, ಸಾಧು, ಸಂತರು ಹಾಗೂ ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡರು ಹಾಗೂ ಭಕ್ತರು ಹಿಂದಿರುಗಿದರು.
ಜಿಲ್ಲಾಡಳಿತದ ನಡೆಗೆ ಅಸಮಾಧಾನವನ್ನೂ ವ್ಯಕ್ತಪಡಿಸಿ ಆವರಣದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸದೇ ಗುಹೆಯ ದರ್ಶನವನ್ನೂ ಮಾಡದೇ ಕೆಲಭಕ್ತರು ಹಿಂದಿರುಗಿದರೆ ದೂರದಿಂದ ಆಗಮಿಸಿದ್ದವರು ಜಿಲ್ಲಾಡಳಿತದ ಸೂಚನೆಯಂತೆ ದರ್ಶನ ಪಡೆದು ಹಿಂದಿರುಗಿದರು. ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಎಚ್. ಅಕ್ಷಯ್ ಇತರರು ಇದ್ದರು. ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ನಕ್ಸಲ್ ಆರೋಪಿತರ ಪ್ರಕರಣ ಖುಲಾಸೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
Chikkamagaluru: ಪ್ರವಾಸಿ ತಾಣಗಳಿಗೆ ನಿರ್ಬಂಧ, ಇಲ್ಲಿದೆ ಹೊಸ ವರ್ಷಾಚರಣೆಗೆ ಮಾರ್ಗಸೂಚಿ
Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ
Sringeri; ಪ್ರವಾಸಿ ವಾಹನಗಳ ಢಿಕ್ಕಿ: ವೃದ್ಧೆ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.