ಭಗವದ್ಗೀತೆ ಓದಿದವರು ಭಯೋತ್ಪಾದಕರಾಗಿಲ್ಲ: ಸಿ.ಟಿ.ರವಿ ಕಿಡಿ
ಸಿದ್ರಾಮುಲ್ಲಾ ಖಾನ್ ಆಗಿದ್ರೆ ಅವರು ಕಾಶ್ಮೀರದಲ್ಲಿ ಉಳಿಯುತ್ತಿದ್ದರು...!
Team Udayavani, Mar 19, 2022, 3:44 PM IST
ಚಿಕ್ಕಮಗಳೂರು : ಭಗವದ್ಗೀತೆಯನ್ನು ಓದಿದವರು ಭಯೋತ್ಪಾದಕರಾಗಿಲ್ಲ, ಜೀವನದ ಸಾರ್ಥಕತೆ ಮೆರೆದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶನಿವಾರ ಹೇಳಿಕೆ ನೀಡಿದ್ದಾರೆ.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಕುರಿತು ಪರ ವಿರೋಧದ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಅವರು, ಜಗತ್ತಿನ ಇತಿಹಾಸದಲ್ಲಿ ಭಗವದ್ಗೀತೆ ಓದಿ ಭಯೋತ್ಪಾದಕರಾದ ಒಬ್ಬ ವ್ಯಕ್ತಿಯ ಉದಾಹರಣೆ ಇಲ್ಲ. ಭಗವದ್ಗೀತೆ ಪ್ರಚೋದಿಸಿಲ್ಲ, ಬದಲಾಗಿ ಪ್ರೇರಣೆ ಕೊಡುತ್ತದೆ. ಭಗವದ್ಗೀತೆಯ ಪ್ರೇರಣೆ ಮಹಾತ್ಮ ಗಾಂಧೀಜಿಯವರಿಗೆ ಆಗುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಗೂ ಭಗವದ್ಗೀತೆ ಪ್ರೇರಣೆ ನೀಡುತ್ತದೆ ಎಂದರು.
ಕಾಶ್ಮೀರದಲ್ಲಿ ಸಿದ್ದರಾಮಯ್ಯ ಮಕ್ಕಳು, ಮೊಮ್ಮೊಕ್ಕಳು ಉಳಿಯುತ್ತಿರಲಿಲ್ಲ. ಅಲ್ಲಿ ಅವರು ಉಳಿಯಬೇಕಾದರೆ ಸಿದ್ರಾಮುಲ್ಲಾ ಖಾನ್ ಆಗಿದ್ರೆ ಮಾತ್ರ ಉಳಿದುಕೊಳ್ಳುತ್ತಿದ್ದರು. ಕಾಶ್ಮೀರಿ ಫೈಲ್ಸ್ ವಾಸ್ತವಿಕ ಸತ್ಯದ ಘಟನೆಗಳ ಚಿತ್ರ . ಅವರು ವಕೀಲರಿದ್ದಾರೆ, ಬುದ್ಧಿವಂತರಿದ್ದಾರೆ ಆಯಾ ಕಾಲಘಟ್ಟದ ಸರ್ಕಾರಿ ದಾಖಲೆಗಳಿವೆ. ಸಿದ್ದರಾಮಯ್ಯನವರಿಗೆ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ ಎಂದು ವ್ಯಂಗ್ಯವಾಡಿದರು.
ಬಾಮಿಯಾನ್‍ನಲ್ಲಿ ಬುದ್ದ ನಗುತ್ತಾ ನಿಂತಿದ್ದ, ಅವನನ್ನ ತಾಲಿಬಾನ್‍ಗಳು ಫಿರಂಗಿ ಇಟ್ಟು ಉಡಾಯಿಸಿದರು. ಬುದ್ಧನಿಗಿಂತ ಶಾಂತಿ ಸಂದೇಶ ಸಾರಿದ ಮತ್ತೋಬ್ಬ ವ್ಯಕ್ತಿ ಬೇಕಾ ಎಂದರು.
ಅದೇ ಜನ ಕಾಶ್ಮೀರಿ ಪಂಡಿತರು, ಹಿಂದೂಗಳ ಕಾಶ್ಮೀರ ಕಣಿವೆ ತೊರೆಯಬೇಕೆಂದು ಮೈಕ್‍ನಲ್ಲಿ ಕೂಗಿದರು. ಅದೇ ಜನ ಭಯ ಹುಟ್ಟಿಸಲು ಕೊಂದರೆ, ಗರಗಸದಲ್ಲಿ ಕೊಯ್ದರು. ಸಾಕ್ಷಿ ಬೇಕು ಅಂದರೆ ಸಾವಿರ ಸಾಕ್ಷಿಗಳು ಸಿಗುತ್ತವೆ. ಆ ಕಾಶ್ಮೀರಿ ಪಂಡಿತರ ಕುಟುಂಬದವರು ಇನ್ನೂ ಬದುಕಿದ್ದಾರೆ, ನಿರಾಶ್ರಿತರಾಗಿದ್ದಾರೆ ಎಂದರು.
ಎಲ್ಲದರಲ್ಲೂ ರಾಜಕೀಯ ಹುಡುಕುವ ಪೂರ್ವಾಗ್ರಹ ಮನಸ್ಥಿತಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ನೋಡಿ ಸತ್ಯದ ವಿವೇಚನೆಗೆ ಒಳಗಾಗುವವರು. ಅವರಿಗೆ ಸತ್ಯವನ್ನು ನೋಡಿ ಒಪ್ಪಿಕೊಳ್ಳುವ ಮನಸ್ಸು-ಮನಸ್ಥಿತಿ ಇಲ್ಲ
ಇನ್ನೂ ಲಾರ್ಡ್ ಅಂತ ಮಕ್ಕಳಿಗೆ ಹೇಳೋದಲ್ಲ
ದೇಶಾದ್ಯಂತ ಎಲ್ಲಾ ಪುಸ್ತಕದಲ್ಲಿ ರಾಮಾಯಣ-ಮಹಾಭಾರತದ ಅಂಗಗಳು ಬಂದರೆ ಧರ್ಮದ ಆಧಾರದಲ್ಲಿ ದೇಶ ಉಳಿಯುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು.
ಸ್ವಾತಂತ್ರ್ಯದ ಬಳಿಕ ಬಂದ ಮೊದಲ ಸರ್ಕಾರ ಭಾರತಕ್ಕೆ ಬಂದ ಆಕ್ರಮಣಕಾರರನ್ನ ತೋರಿಸಬೇಕಿತ್ತು. ನಾನು-ನೀವು ಓದಿರೋ ಪುಸ್ತಕದಲ್ಲಿ ಲಾರ್ಡ್ ವೆಲ್ಲೆಸ್ಲಿ, ಕರ್ಜನ್ ಅಂತೇ , ಯಾವನೋ ಲಾರ್ಡ್ ಅನ್ನು ತೋರಿಸಲಾಗಿದೆ. ಅವರು ಈ ದೇಶಕ್ಕೆ ಬಂದ ಆಕ್ರಮಣಕಾರರು. ಅವರನ್ನ ಇನ್ನೂ ಲಾರ್ಡ್ ಅಂತ ಮಕ್ಕಳಿಗೆ ಹೇಳೋದಲ್ಲ ಎಂದರು.
ಎಲ್ಲರೂ ಧರ್ಮದ ಆಧಾರದಲ್ಲಿ ಬದುಕಬೇಕೆಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವುದು.ಮಕ್ಕಳಿಗೆ ಗೊತ್ತಾಗಬೇಕಿರುವುದೇ ಹೇಗೆ ಬದುಕಬೇಕೆಂಬುದು. ನಾವು ಯಾರನ್ನ ಗ್ರೇಟ್ ಅನ್ನೋದು, ಅಲೆಕ್ಸಾಂಡರ್‍ನ ಗ್ರೇಟ್ ಎನ್ನುತ್ತೇವೆ. ತಡವಾಗಿದರೂ ದೇಶದಲ್ಲಿ ಈ ರೀತಿ ಯೋಚಿಸುವ ನಾಯಕತ್ವಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.