ಕುಣಿಗಲ್: ಜೆಡಿಎಸ್, ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಭಗವದ್ಗೀತೆ ಹೆಸರಿನಲ್ಲಿ ರಾಜಕಾರಣ: ಬಿಜೆಪಿ ವಿರುದ್ದ ಡಿ.ಕೆ.ಸುರೇಶ್ ವಾಗ್ದಾಳಿ
Team Udayavani, Mar 19, 2022, 6:36 PM IST
ಕುಣಿಗಲ್ : ಮಕ್ಕಳ ಮನಸ್ಸಿನಲ್ಲಿ ಧರ್ಮ ಹಾಗೂ ಜಾತಿಯ ವಿಷ ಬೀಜ ಬಿತ್ತುವಂತಹ ರಾಜಕಾರಣವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ, ಶೇ ೪೦ ರಷ್ಟು ಕಮಿಷನ್‌ನನ್ನು ಮರೆ ಮಾಚಲು ಪಠ್ಯ ಪುಸ್ತಕದಲ್ಲಿ ಭಗವದ್ಗೀತೆಯನ್ನು ಸೇರಿಸಲು ಯತ್ನಿಸುತ್ತಿದೆ ಎಂದು ಎಂದು ಸಂಸದ ಡಿ.ಕೆ.ಸುರೇಶ್ ತೀವ್ರ ವಾಗ್ದಾಳಿ ನಡೆಸಿದರು.
ಪಟ್ಟಣದ ಹೊರ ವಲಯದ ಗವಿಮಠ ಎಸ್‌ವಿಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಸ್.ವಿ.ಬಿ ಸುರೇಶ್ ಅವರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಬಿಜೆಪಿ ಸರ್ಕಾರ ಜನರಿಗೆ ಕೊಟ್ಟು ಆಶ್ವಾಸನೇ ಹಾಗೂ ರಾಜ್ಯದಲ್ಲಿ ಅಭಿವೃದ್ದಿದಲ್ಲಿ ಕೆಲಸವನ್ನು ಮಾಡಲು ಸಾಧ್ಯವಾಗದೇ, ಭಗವದ್ಗೀತೆ ಹೆಸರಿನಲ್ಲಿ ಧರ್ಮ ರಾಜಕಾರಣ ಮಾಡಲು ಹೊಟಿದೆ, ಪಠ್ಯಕ್ಕೆ ಭಗವದ್ಗೀತೆ ರಾಮಾಯಣ, ಮಹಾಭಾರತ ಏನಾದರೂ ಸೇರಿಸಿ ನಮ್ಮ ವಿರೋಧವಿಲ್ಲ, ಇದಕ್ಕೆ ರಾಜಕಾರಣ ಬಣ್ಣ ಬಳಿಯುವುದು ಬೇಡ ಎಂದರು.
ಬಿಜೆಪಿಯ ಕಾರ್ಯ ಚಟುವಟಿಕೆಯನ್ನು ಹಾಗೂ ಜನ ವಿರೋಧಿ ಆಡಳಿತದ ಎಲ್ಲಾ ಬೆಳವಣಿಗೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಪೆಟ್ರೋಲ್, ಡೀಸಲ್, ಗ್ಯಾಸ್, ಸೀಮೆಂಟ್, ಕಬ್ಬಣ ಬೆಲೆ ಗಗನಕ್ಕೆ ಮುಟ್ಟಿದೆ ಬಡವ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಯುವ ಜನಾಂಗಕ್ಕೆ ಉದ್ಯೋಗ ಸೃಷ್ಟಿ ಸಿಲ್ಲ, ಉದ್ಯೋಗ ಕೇಳಿದರೆ ಬೊಂಡ, ಪಕೋಡಾ ಮಾರುವಂತೆ ಹೇಳುತ್ತಿದ್ದಾರೆ, ಕಪ್ಪು ಹಣ ತಂದು ಜನರ ಖಾತೆ ಜಮಾ ಮಾಡಿಲ್ಲ, ಶಾಂತಿ ಸುವವ್ಯಸ್ಥೆ ಕಾಪಾಡಲು ಸಾಧ್ಯವಾಗಿಲ್ಲ, ಹೀಗಿರುವಾಗ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಾರೆ, ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವಂತಹ ಕೆಲಸ ಮಾಡುತ್ತಾರೆ, ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಹಾಗೂ ದುರಸ್ಥಿ ಕಾರ್ಯಕ್ಕೆ ಹಣ ನೀಡಲು ಸಾಧ್ಯವಾಗದ ನಿಮಗೆ, ಭಗವದ್ಗೀತೆಯನ್ನು ಪಠ್ಯ ಪುಸ್ತಕಕ್ಕೆ ತರಲು ಚರ್ಚೆ ನಡೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಗಣಿತ, ಸಮಾಜ, ವಿಜ್ಞಾನ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕಿ, ರಾಮಾಯಣ, ಮಹಾಭಾರತ, , ಭಗವದ್ಗೀತೆಯನ್ನು ಪಠ್ಯ ಪುಸ್ತಕಕ್ಕೆ ಸೇರಿಸಿ ಯಾರು ಬೇಡ ಎನ್ನುತ್ತಾರೆ, ಶೇ ೪೦ ಕಮಿಷನ್ ಪಡೆದು ಸರ್ಕಾರ ನಡೆಸುತ್ತಿರುವುದನ್ನು ಮರೆ ಮಾಚಲು, ಇಂದು ಭಗವದ್ಗೀತೆ ರಾಜಕಾರಣ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುವು ನಿಶ್ಚಿತ
ಉತ್ತರ ಭಾರತದ ರಾಜಕಾರಣನೇ ಬೇರೆ ದಕ್ಷಣಿ ಭಾರತದ ರಾಜಕಾರಣನೇ ಬೇರೆ, ಕರ್ನಾಟಕ ರಾಜ್ಯದಲ್ಲಿ ಜನ ಭಯಸುವುದು ಅಭಿವೃದ್ದಿ ಕೆಲಸ ಹೊರೆತು ಬೇರೆ ಏನು ಅಲ್ಲ, ಉತ್ತರ ಪ್ರದೇಶದಲ್ಲಿ ಅನ್ನಕ್ಕಾಗಿ ಹಾಹಾಕಾರ ಇದೆ, ಬಡತನ ಹೇಳತೀರದ್ದಾಗಿದೆ, ಬಡವ ಬಡವನಾಗುತ್ತಿದ್ದಾನೆ, ಶ್ರೀಮಂತ ಶ್ರೀಮಂತನಾಗುತ್ತಿದ್ದಾನೆ, ದೇಶದಲ್ಲಿ ಐವರು ಮಾತ್ರ ಅಭಿವೃದ್ದಿ ಹೊಂದುತ್ತಿದ್ದಾರೆ, ಆ ರಾಜ್ಯಗಳಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಮತವನ್ನು ಕೇಳಲಾಗುತ್ತಿದೆ, ಅದೇ ರೀತಿ ಕೆಲಸವನ್ನು ನಮ್ಮ ರಾಜ್ಯದಲ್ಲೂ ಮಾಡಬೇಕೆಂದು ಬಿಜೆಪಿ ನಾಯಕರು ಹೊರಟ್ಟಿದ್ದಾರೆ, ಅದು ಯಶಸ್ವಿಯಾಗುವುದಿಲ್ಲ, ಮತದಾರರು ಪ್ರಭುದ್ದರಿದ್ದಾರೆ, ಪಂಚ ರಾಜ್ಯ ಚುನಾವಣೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮುಗಿಸುತ್ತೇವೆ ಎಂದು ಕೆಲ ನಾಯಕರು ಮಾತನಾಡುತ್ತಾರೆ, ಅದು ಸಾಧ್ಯವಿಲ್ಲ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯನೋ ರಾಜ್ಯದಲ್ಲಿ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯವೆಂದು ಸಂಸದರು ಸ್ಪಷ್ಟಪಡಿಸಿದರು,
ಮೇಕೆದಾಟು ಮಾದರಿ ಪಾದಯಾತ್ರೆ
ಶಾಸಕ ಡಾ.ಹೆಚ್.ಡಿ.ರಂಗನಾಥ್ ಮಾತನಾಡಿ ಬಿಜೆಪಿ ಅಭಿವೃದ್ದಿ ಕಾರ್ಯಗಳಲ್ಲಿ ತಾರತಮ್ಯ ದೋರಣೆ ಅನುಸರಿಸುತ್ತಿದೆ. ಮುಂದಿನ ದಿನದಲ್ಲಿ ಮೇಕೆದಾಟು ಮಾದರಿಯಲ್ಲಿ ತಾಲೂಕಿಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಗಾಗಿ ಕುಣಿಗಲ್‌ನಿಂದ ವಿಧಾನ ಸೌಧದ ವರೆಗೂ ಪಾದಯಾತ್ರೆ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಇದೇ ವೇಳೆ ಪಿರ್ಕಾಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಅವರ ಆಪ್ತ ಎಪಿಎಂಸಿ ಮಾಜಿ ಅಧ್ಯಕ್ಷ, ಎಸ್.ವಿ.ಬಿ ಸುರೇಶ್, ಮಾಸ್ತಿಗೌಡ ಸೇರಿದಂತೆ ನೂರಾರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್ ಸೇರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಆಮ್ ಆದ್ಮಿಯ ಮಾಜಿ ಶಾಸಕ ಸುಖ್ಬೀರ್ ದಲಾಲ್ ಬಿಜೆಪಿ ಸೇರ್ಪಡೆ, ಕೇಜ್ರಿಗೆ ಹಿನ್ನಡೆ
Parliament Session: 26 ದಿನಗಳಲ್ಲಿ 7 ಮಸೂದೆಗಳಿಗೆ ಅನುಮೋದನೆ, 65 ಗಂಟೆ ನಷ್ಟ!
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.