ಕಾರ್ಕಳ ಉತ್ಸವ: ಮುಂದುವರಿದ ಮೆರವಣಿಗೆ


Team Udayavani, Mar 20, 2022, 4:10 AM IST

ಕಾರ್ಕಳ ಉತ್ಸವ: ಮುಂದುವರಿದ ಮೆರವಣಿಗೆ

ಕಾರ್ಕಳ: ಉತ್ಸವದಲ್ಲಿ ಕಾರ್ಕಳದ ಪ್ರತೀ ಮನೆಯ ವ್ಯಕ್ತಿ ಉತ್ಸವದಲ್ಲಿ  ಭಾಗಿಯಾಗಬೇಕು ಎನ್ನುವ ಸಚಿವ ವಿ.ಸುನಿಲ್‌ಕುಮಾರ್‌ ಅವರ  ಕಲ್ಪನೆ  ನಿರೀಕ್ಷೆಗೂ  ಮೀರಿ ಯಶಸ್ವಿಯಾಗಿದೆ.

ಕಾರ್ಕಳ ಉತ್ಸವದ ಮಳಿಗೆಗೆ ಭೇಟಿ ನೀಡುವವರ ಸಂಖ್ಯೆ  ಏರುತ್ತಲೇ ಇದೆ. ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಸಚಿವರು ಸಾಂಸ್ಕೃತಿಕ ಹೊರತುಪಡಿಸಿ ವಸ್ತುಪ್ರದರ್ಶನ, ಆಹಾರೋತ್ಸವ, ದೀಪಾ ಲಂಕಾರ, ಬೋಟಿಂಗ್‌ ಇವುಗಳನ್ನು  ಎರಡು ದಿನ ವಿಸ್ತರಿಸಿ ಅವಕಾಶ ಕಲ್ಪಿಸಿದ್ದಾರೆ.

ಇಂದು ಕೊನೆಗೊಳ್ಳಬೇಕಿತ್ತು :

ಮಾ. 10ರಿಂದ ಆರಂಭಗೊಂಡು ಕಲೆ, ಸಂಸ್ಕೃತಿ ಜತೆಗೆ ಹಲವು ಆಯಾಮ ಗಳ ಕಾರ್ಕಳ ಉತ್ಸವ ಮಾ.20ಕ್ಕೆ  ಕೊನೆಯಾಗಬೇಕಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ಸಹಿತ ಹಲವು ವೈವಿಧ್ಯಗಳು  ಗತವೈಭವದ ರೀತಿ ನಡೆದು ಜನರನ್ನು ಉತ್ಸಹ ಆಕರ್ಷಿಸುತ್ತಿದೆ. ವಿದ್ಯುತ್‌ ಅಲಂಕಾರ ಎಲ್ಲವೂ  ಜನಮಾನಸದಲ್ಲಿ  ಉಳಿಯುವಂತೆ ಮಾಡಿದೆ.  ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಮಂದಿ ಸ್ವರಾಜ್‌ ಮೈದಾನ, ವಿವಿಧ ಮಳಿಗೆ, ಬೋಟಿಂಗ್‌ಗೆ ಆಗಮಿಸುತ್ತಿದ್ದಾರೆ. ಇದನ್ನು ಮನಗಂಡು ಮಾ. 22ರ ವರೆಗೆ  ಮುಂದುವರಿಸಲಾಗಿದೆ.

ಶ್ರಮದ ಧ್ಯೋತಕದಿಂದ ಮಾದರಿ :

ಕಾರ್ಕಳ ಉತ್ಸವದ ಯಶಸ್ವಿನಲ್ಲಿ ಸಂಘ ಸಂಸ್ಥೆಗಳು, ನಾಗರಿಕರ ಜತೆಗೆ ಪೊಲೀಸ್‌, ಮೆಸ್ಕಾಂ, ವಿವಿಧ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರು, ಮಕ್ಕಳು ಹೀಗೆ ಸ್ವಯಂ ಸೇವಕರು  ಶಕ್ತಿ ಮೀರಿ ದುಡಿಯುತ್ತಿದ್ದು, ಅವರೆಲ್ಲರ ಶ್ರಮದ ಧ್ಯೋತಕ ಕಾರ್ಕಳ ಉತ್ಸವ ನಾಡಿಗೆ ಮಾದರಿಯಾಗಿ ಸಾಗುತ್ತಿದೆ.

ಗಮನ ಸೆಳೆವ‌ ಕುದುರೆ ಗಾಡಿಗಳು :

ಎಲ್ಲೋ ಕಾಣುತ್ತಿದ್ದ  ಕುದುರೆ ಗಾಡಿಗಳನ್ನು ಕಾರ್ಕಳದಲ್ಲಿ  ನೋಡುವ ಅವಕಾಶ  ಉತ್ಸವದ ಸಂದರ್ಭ ದೊರಕಿದೆ. ಕಾರ್ಕಳ ಉತ್ಸವದ ಆರಂಭದಿಂದ ಮೈಸೂರಿನ ಹತ್ತು ಕುದುರೆ ಬಂಡಿಗಳು ನಗರದಲ್ಲಿ ಅತ್ತಿತ್ತ ಓಡಾಡುತ್ತ ಗಮನ ಸೆಳೆಯುತ್ತಿವೆ. ಗೌಜಿ ಗದ್ದಲಗಳ ನಡುವೆ  ಕುದುರೆ ಬಂಡಿಗಳ ಓಡಾಟ ಸಾರ್ವಜನಿಕರಿಗೆ ಮುದ ನೀಡುತ್ತಿವೆ. ನಮ್ಮೂರಿನ ಜನತೆ  ಎಲ್ಲವನ್ನು ಕಾಣಬೇಕು ಎನ್ನುವ ಕಾರಣಕ್ಕೆ ಸಚಿವರು ಮೈಸೂರಿನಿಂದ 10 ಕುದುರೆ ಬಂಡಿಗಳನ್ನು ತರಿಸಿದ್ದರು. ಕುದುರೆಗಳು ಅನಂತಶಯನ, ಸ್ವರಾಜ್‌ ಮೈದಾನ ಪರಿಸರ, ಇಲ್ಲಿನ ರಸ್ತೆಯುದ್ದಕ್ಕೂ ಸವಾರಿ ಮಾಡುತ್ತಿದೆ. ಪ್ರಯಾಣ ಉಚಿತವಾಗಿದೆ.

ಕಾಡು-ನಾಡಿನ  ಸೊಗಸಿನ ಸವಿ :

ಉತ್ಸವದ ಹಲವು ವಸ್ತು ಪ್ರದರ್ಶನಗಳ ಪೈಕಿ ಅರಣ್ಯ ಇಲಾಖೆಯ ನಿಸರ್ಗಧಾಮ ಗಮನ  ಸೆಳೆಯುತ್ತಿದೆ. ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳ ವೈವಿಧ್ಯಮಯ ನೋಟ, ಜುಳು ಜುಳು ಹರಿಯುವ ನದಿ, ಕಳೆದ ದಿನಗಳ ಜೀವನ ಶೈಲಿ, ಅರಣ್ಯ ಇಲಾಖೆಯ ಮಾದರಿಗಳು, ಸಂಸ್ಕೃತಿಯ ಹೆಂಚಿನ ಮನೆ, ಹುಲ್ಲಿನ  ಮನೆ, ಸ್ಲಾéಬ್‌ ಮನೆ ಮಾದರಿಗಳು, ಅರಣ್ಯ ಇಲಾಖೆ ಕಚೇರಿ, ನರ್ಸರಿ, ಪಂಚಾಯತ್‌  ಕಟ್ಟೆ, ಎಲೆ ಉದುರುವ ಕಾಡು, ಗುಹೆ, ಗುಡ್ಡ ಕಾಡು, ಪರ್ವತ,  ಪಾಲ್ಸ್‌, ನಾಗಬನ,  ತೂಗು ಸೇತುವೆ,  ನೀರಿನ ಝರಿ, ಫಾರೆಸ್ಟ್‌ ರೇಂಜ್‌ ಆಫೀಸ್‌, ವಿಲೇಜ್‌ ಫಾರೆಸ್ಟ್‌  ಆಫೀಸ್‌,  ಶಾಲೆ,  ಗುಡಿಸಲು ಮನೆ,  ಹೊಲಗದ್ದೆ, ಟಿಂಬರ್‌ ಡಿಪೋ, ನಕ್ಷತ್ರವನ, ನವಗ್ರಹ ವನ, ಗುಡಿಕೈಗಾರಿಕೆ, ಶೋಲಾ ಅರಣ್ಯ, ಪಕ್ಷಿಧಾಮ, ಹುಲ್ಲುಗಾವಲು, ಒಣ ಅರಣ್ಯ, ನದಿಮೂಲಗಳು,  ವೀಕ್ಷಣ ಗೋಪುರ ಇನ್ನು ಅನೇಕ ಮಾದರಿಗಳಿವೆ. ಅರಣ್ಯದಲ್ಲಿ ಮಳೆ ನೀರು ಭೂಮಿಯಲ್ಲಿ ಇಂಗಲು ಚೆಕ್‌ ಡ್ಯಾಂ ಮಾದರಿಯೂ ನೈಜತೆಗೆ ಹತ್ತಿರವಾಗಿ ಕಾಣಿಸುತ್ತಿದೆ.

ಮುಂದೆ ಮೆರವಣಿಗೆ;  ಹಿಂದಿನಿಂದ ಪರಿಸರ ಸ್ವತ್ಛ ! :

ಉತ್ಸವದಲ್ಲಿ ಸ್ವತ್ಛತೆಗೆ ಮೊದಲಿನಿಂದಲೂ ಬಹು ಆದ್ಯತೆ ನೀಡುತ್ತ ಬರಲಾಗಿದೆ. ಮಾ.18ರಂದು ಉತ್ಸವ ಮೆರವಣಿಗೆ ಮುಂದೆ ಸಾಗುತ್ತಿದ್ದರೆ ಅದರ ಹಿಂದಿನಿಂದ ಸ್ವತ್ಛತೆಯ ಸ್ವಯಂ ಸೇವಕರು, ಶ್ರಮಿಕರು ಕಸವನ್ನು  ಎತ್ತುತ್ತಿದ್ದರು. ಅಷ್ಟೊಂದು ಜನ ಸೇರುವ  ಸ್ಥಳ ಮೆರವಣಿಗೆ ಸಾಗಿದ ಮರು ಕ್ಷಣ ದಾರಿಯಲ್ಲಾಗಲಿ ಎಲ್ಲಿಯೂ ಕಸ ಕಣ್ಣಿಗೆ ಬೀಳಲಿಲ್ಲ. ಇಂತಹದ್ದೊಂದು  ಅಚ್ಚುಕಟ್ಟುತನಕ್ಕೆ  ಎಲ್ಲರ  ಮೆಚ್ಚುಗೆಗೆ  ಕಾರಣವಾಗಿದೆ.

ಟಾಪ್ ನ್ಯೂಸ್

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bangala-Krishna-Das

Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್‌ ಸೆರೆ

PM-Modi-Sansad

Parliament Session: ಗೂಂಡಾಗಿರಿ ಮೂಲಕ ಸಂಸತ್‌ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.