ರಂಗೇರಿದ ಐತಿಹಾಸಿಕ ಬಣ್ಣದೋಕುಳಿ

ಚಕ್ಕಡಿ, ಟ್ರ್ಯಾಕ್ಟರ್‌ನಲ್ಲಿ ಬಂದು ಬಣ್ಣ ಎರಚಾಡಿದರು

Team Udayavani, Mar 20, 2022, 11:15 AM IST

5

ಬಾಗಲಕೋಟೆ: ಐತಿಹಾಸಿಕ ಬಾಗಲಕೋಟೆ ಬಣ್ಣದೋಕುಳಿ ರಂಗೇರಿದೆ. ಶನಿವಾರ ನಗರದ ಬಿವಿವಿ ಸಂಘದ ಮುಂಭಾಗದ ರಸ್ತೆ ಇಳಿ ಅಕ್ಷರಶಃ ಬಣ್ಣದ ಓಕುಳಿ ಭೂಮಿಯಂತೆ ಕಂಡು ಬಂತು.

ಎತ್ತಿನ ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಬಣ್ಣ ತುಂಬಿದ ಬ್ಯಾರಲ್‌ ಗಳನ್ನಿಟ್ಟುಕೊಂಡ ಜನ ಏಕಕಾಲಕ್ಕೆ ಮುಖಾಮುಖೀಯಾಗಿ ಬಣ್ಣ ಎರಚುವ ಮೂಲಕ ಐತಿಹಾಸಿಕ ಹೋಳಿಯ ಎರಡನೇ ದಿನದ ರಂಗು ರಂಗೀನ ಬಣ್ಣದ ಓಕುಳಿಗೆ ಕಳೆ ತಂದರು.

ಸಹಸ್ರ ಜನ ಒಮ್ಮೆಲೆ ಓಕುಳಿಯಾಡಲು ಇಳಿದಾಗ ಬಣ್ಣದ ಮಳೆ ಸುರಿಯುವಂತೆ ಕಾಣುತ್ತಿತ್ತು. ಬಣ್ಣದ ಆಟವಾಡುವವರ ಸಂಭ್ರಮ-ಉತ್ಸಹಕ್ಕೆ ಪಾರವೇ ಇರಲಿಲ್ಲ. ಇಡೀ ಬಾಗಲಕೋಟೆ ನಗರ ಉತ್ಸಾಹದ ಚಿಲುಮೆಯಾಗಿತ್ತು. ಯುವಕರ ಕೇಕೆ, ಶಿಳ್ಳೆ, ಹಲಗೆ ನಾದ, ಹೊಯ್ಕೊಳ್ಳುವ ಸಂಭ್ರಮವೂ ಸೇರಿ ಇಡೀ ವಾತಾವರಣವನ್ನು ಉಲ್ಲಸಿತಗೊಳಿಸಿ ಹೋಳಿ ಉತ್ಸವದ ರಂಗಕ್ಕೆ ಮೆರಗು ತಂದಿತು.

ಬಣ್ಣದ ಓಕುಳಿಯ ಎರಡನೇ ದಿನದ ಸರದಿ ಜೈನಪೇಟೆ, ಕೌಲಪೇಟೆ, ಹಳೇಪೇಟೆ, ವಂಕಟಪೇಟೆ ನಾಗರಿಕರದ್ದಾಗಿತ್ತು. ಈ ಓಣಿಯ ಜನರು ಬಣ್ಣ ತುಂಬಿದ ಬ್ಯಾರಲ್‌ ಗಳನ್ನು ಚೆಕ್ಕಡಿ- ಟ್ರ್ಯಾಕ್ಟರ್‌ಗಳಲ್ಲಿ ಹೇರಿಕೊಂಡು ಬಣ್ಣ ಎರಚಲು ಸನ್ನದ್ಧರಾಗಿದ್ದರು. ಕೌಲಪೇಟೆಯಿಂದ ನಾಲ್ಕಾರು ಚಕ್ಕಡಿ-ಹತ್ತಾರು ಟ್ರ್ಯಾಕ್ಟರ್‌ ಇದ್ದ ಒಂದು ತಂಡ, ಇತ್ತ ವೆಂಕಟಪೇಟೆಯಿಂದ ಅಷ್ಟೇ ಪ್ರಮಾಣದ ಚಕ್ಕಡಿ- ಟ್ರ್ಯಾಕ್ಟರ್‌ ಹೊಂದಿದ ಮತ್ತೂಂದು ತಂಡ ಬಸವೇಶ್ವರ ಕಾಲೇಜು ರಸ್ತೆಯಲ್ಲಿ ಸ್ಪಂದಿಸಿದವು. ಒಮ್ಮೆಲೆ ಶುರುವಾದ ಬಣ್ಣದ ಕಾಳಗದಲ್ಲಿ ಎರಚಾಟ-ಕೂಗಾಟದಿಂದಾಗಿ ಇಡೀ ಉತ್ಸವ ರಂಗೇರಿತು. ಚಕ್ಕಡಿ- ಟ್ರ್ಯಾಕ್ಟರ್‌ ಗಳಲ್ಲಿ ಇದ್ದ ಯುವಕರು ಶಕ್ತಿ ಮೀರಿ ಬಣ್ಣ ಎರಚುತ್ತಿದ್ದರು. ಎದುರು ಬರುವವರು ಅಷ್ಟೇ ತುರುಸಿನಿಂದ ಪ್ರತಿರೋಧ ಒಡ್ಡುತ್ತಿದ್ದರು. ಈ ಮಧ್ಯ ಕುಣಿದು ಕುಪ್ಪಳಿಸುವ ಯುವಕರ ತಂಡಗಳು ಸಾಲುಸಾಲು ಬಣ್ಣದ ಬ್ಯಾರಲ್‌ ಗಳ ಪ್ರಮುಖ ಗುರಿಯಾಗುತ್ತಿದ್ದರು. ರಸ್ತೆಯುದ್ಧಕ್ಕೂ ಬಣ್ಣದ ಸುರಿಮಳೆ ಸುರಿಯಿತು.

ಈ ಮಹಾ ಉತ್ಸವದ ಹೊರತಾಗಿಯೂ ಬೆಳಗ್ಗೆಯಿಂದಲೇ ನಗರದ ವಿವಿಧ ಬಡಾವಣೆ, ಗಲ್ಲಿಗಳಲ್ಲಿ ಹಲಗೆ ನಾದ ಸದ್ದು ನಿರಂತರವಾಗಿ ಕೇಳಿಬಂದಿತು. ಬೈಕ್‌ಗಳಲ್ಲಿ ಓಡಾಡಿ ಬಣ್ಣ ಎರಚುತ್ತಿದ್ದರು. ಮಧ್ಯಾಹ್ನದ ನಂತರ ಇಳಿ ಸಂಜೆ ಹೊತ್ತಲ್ಲಿ ಮೂರು ಓಣಿಯ ಯುವಕರು ವೆಂಕಟಪೇಟೆ ಯುವಕರು ಎಂಜಿ ರಸ್ತೆ ಮೂಲಕ ಹಾಯ್ದು ಕಾಲೇಜು ರಸ್ತೆಗೆ ಬಂದರೆ, ಹಳಪೇಟೆ, ಜೈನಪೇಟೆ ಯುವಕರು ಟೇಕಿನಮಠ ಮುಖಾಂತರ ಕಾಲೇಜು ರಸ್ತೆಗೆ ಆಗಮಿಸಿ ಪರಸ್ಪರ ಎದುರಾಗಿ ಓಕುಳಿಯಾಡಿದರು.

ಬಣ್ಣ ಎರಚುವ ಯುವಕರಿಗೆ ಪ್ರತಿಯಾಗಿ ಮಕ್ಕಳು ಸಹ ಬಣ್ಣ ಎರಚುವಲ್ಲಿ ಹಿದೆ ಬೀಳಲಿಲ್ಲ, ಕೇಕೆ, ಶೀಳ್ಳೆ ಹಾಕುವಲ್ಲಿ ಮಹಿಳೆಯರು ಒಂದು ಹೆಜ್ಜೆ ಮುಂದು ಹೊಗಿದ್ದರು. ಮಕ್ಕಳು ಬಣ್ಣಗಳ ರಂಗಿನಲ್ಲಿ ಬ್ಯಾರಲ್‌ಗ‌ಳಲ್ಲಿ ಇದ್ದ ಬಣ್ಣದ ನೀರಲ್ಲಿ ಮಿಂದೆದ್ದರು. ಎರಡನೆಯ ದಿನದಾಟದಲ್ಲಿ ಮಹಿಳೆಯರು ಹೋಳಿ ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ಓಕುಳಿ ನೋಡಲೆಂದು ಕಾಲೇಜು ರಸ್ತೆಯ ಇಕ್ಕೆಲಗಳಲ್ಲೂ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಸೇರಿ ಬಣ್ಣ ಎರಚುವವರನ್ನು ಹುರಿದುಂಬಿಸಿದ್ದು ವಿಶೇಷವಾಗಿತ್ತು. ಸಂಸದ, ಶಾಸಕರು, ಮಾಜಿಗಳು, ಬಣ್ಣದಾಟಕ್ಕೆ ಇರಲಿಲ್ಲ. ಈ ಸಂದಭದಲ್ಲಿ ಮಹಾಬಳೇಶ ಗುಡಗಂಟಿ, ಗುಂಡು ಶಿಂಧೆ, ಸಾರಿಗೆಯ ವಿಭಾಗೀಯ ಅಧಿಕಾರಿ ಪಿ.ವಿ.ಮೇತ್ರಿ, ಮಂಜು ಶಿಂಧೆ, ಯಮನಾಳ, ಬಿಮಿಷ ಪವಾರ, ಸಂತೋಷ ಹಂಜಗಿ, ರವಿ ಚವ್ಹಾಣ ಹೋಳಿ ಉತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಇಂದು ಕೊನೆಯ ದಿನ: ಹೋಳಿ ಉತ್ಸವಕ್ಕೆ ರವಿವಾರ ಕೊನೆಯ ದಿನ. ಮೊದಲ ದಿನ ಹಾಗೂ ಎರಡನೇ ದಿನ ಬಣ್ಣ ಹಚ್ಚದವರು ಮೊರನೆಯ ದಿನ ಬಣ್ಣದಾಟ ಆಡಲಿದ್ದಾರೆ.

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಸೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

ಹೊಲ ಮಾರಿದ ಹಣ ಕಳ್ಕೊಂಡ ದಂಪತಿ; ಮೀಶೋ ಆ್ಯಪ್‌ ಹೆಸರಿನಲ್ಲಿ ದಂಪತಿಗೆ ನಾಮ!

2

Mudhol: ಸಾಲಬಾಧೆಯಿಂದ ರೈತ ಆತ್ಮಹ*ತ್ಯೆ

1-dee

Kulgeri Cross; ನಾಡಿನಲ್ಲಿಯೇ ಪ್ರಥಮ…ತಾಯಿ ಭುವನೇಶ್ವರಿ ರಥೋತ್ಸವ

ರಬಕವಿ-ಬನಹಟ್ಟಿ: ಜಗದಾಳ ರೈತನ ಬಾಳೆಹಣ್ಣು ಇರಾನ್‌ ದೇಶಕ್ಕೆ ರಫ್ತು

ರಬಕವಿ-ಬನಹಟ್ಟಿ: ಜಗದಾಳ ರೈತ ಬೆಳೆದ ಬಾಳೆಹಣ್ಣುಇರಾನ್‌ ದೇಶಕ್ಕೆ ರಫ್ತು!

ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ

ರಕ್ತ ಹರಿದರೂ ಚಿಂತೆಯಿಲ್ಲ, ಜಮೀನು ಬಿಟ್ಟು ಕೊಡಲ್ಲ: ಶಾಸಕ ಸಿದ್ದು ಸವದಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.