![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 20, 2022, 12:07 PM IST
ಬೆಂಗಳೂರು : ಹಿಜಾಬ್ ತೀರ್ಪು ನೀಡಿದ ಎಲ್ಲಾ ಮೂವರು ನ್ಯಾಯಾಧೀಶರಿಗೆ ‘ವೈ’ ವರ್ಗದ ಭದ್ರತೆಯನ್ನು ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನ್ಯಾಯಮೂರ್ತಿಗಳಿಗೆ ಕೆಲವರು ಜೀವ ಬೆದರಿಕೆ ಹಾಕಿರುವ ಕುರಿತು ವಿಧಾನಸೌಧ ಠಾಣೆ ಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವಂತೆ ಡಿಜಿ ಮತ್ತು ಐಜಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಪ್ರಕರಣ ದಾಖಲಾಗಿದೆ. ಒಂದು ವ್ಯವಸ್ಥೆಗೆ ಬೆದರಿಕೆ ಹಾಕುವ ಕೆಲಸ ಆಗಿದೆ. ತೀರ್ಪಿನ ಕುರಿತು ಮೇಲ್ಮನವಿ ಸಲ್ಲಿಸಲು ಎಲ್ಲಾ ಅವಕಾಶ ಇದೆ. ವ್ಯವಸ್ಥೆ ವಿರುದ್ಧ ಎತ್ತಿ ಕಟ್ಟುವ ಕೆಲಸ ನಡೆಯುತ್ತಿದ್ದು, ಅದನ್ನು ದಮನ ಮಾಡಬೇಕಿದೆ ಎಂದರು.
ತಮಿಳುನಾಡಿನಲ್ಲಿ ಕೇಸ್ ಆಗಿದೆ. ನಿನ್ನೆ ಬಾರ್ ಕೌನ್ಸಿನಲನವರು ಬಂದು ದೂರು ನೀಡಿದ್ದಾರೆ. ನಾನು ಪೊಲೀಸ್ ಗೆ ಸೂಚನೆ ನೀಡಿದ್ದು, ಆರೋಪಿಗಳನ್ನು ನಮ್ಮ ರಾಜ್ಯದ ವಶಕ್ಕೆ ತೆಗೆದಕೊಳ್ಳಬೇಕು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾವೆಲ್ಲಾ ಸೆಕ್ಷನ್ ಹಾಕಬೇಕು ಅದನ್ನು ಹಾಕಿ ಅಂದಿದ್ದೇನೆ ಎಂದರು.
ಘಟನೆ ನಡೆದು ಮೂರು ದಿನ ಆಗಿದೆ. ಆದರೂ ಜ್ಯಾತ್ಯಾತೀತವಾದಿಗಳು ಮೌನವಾಗಿದ್ದಾರೆ. ಒಂದು ವರ್ಗದ ಜನರನ್ನು ಹೆಚ್ಚು ಒಲೈಕೆ ಮಾಡುವುದು ನೀಜವಾದ ಕೋಮುವಾದ. ಪ್ರಜಾಪ್ರಭುತ್ವ ನಾವೂ ಎತ್ತಿ ಹಿಡಿಯುತ್ತೇವೆ. ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
“ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ’ ಎಂದು ತೀರ್ಪು ನೀಡಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಾದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್, ನ್ಯಾ. ಖಾಜಿ ಜೈಬುನ್ನಿಸಾ ಅವರಿಗೆ ತಮಿಳುನಾಡಿನ ಇಸ್ಲಾಮಿಕ್ ಸಂಘಟನೆಯೊಂದು ಬಹಿರಂಗವಾಗಿಯೇ ಕೊಲೆ ಬೆದರಿಕೆ ಹಾಕಿದೆ.
ಮಧುರೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ತಮಿಳುನಾಡು ತೌಹೀದ್ ಜಮಾತ್(ಟಿಎನ್‌ಟಿಜೆ) ಸಂಘಟನೆಯ ನಾಯಕ ಕೊವಾಯಿ ಆರ್. ರೆಹಮತುಲ್ಲಾ, “ಮುಂದೊಂದು ದಿನ ಹಿಜಾಬ್ ತೀರ್ಪು ಕೊಟ್ಟ ಆ ನ್ಯಾಯಮೂರ್ತಿಗಳಿಗೆ ಏನಾದರೂ ಆದರೆ, ಅದಕ್ಕೆ ಅವರೇ ಹೊಣೆಗಾರರು ಹೊರತು ನಾವಲ್ಲ’ ಎಂದು ಹೇಳಿದ್ದರು. ಹಾಗೆಯೇ ಈ ರೀತಿ ಬೆದರಿಕೆ ಹಾಕಿದ್ದಕ್ಕೆ ನಮ್ಮನ್ನು ಜೈಲಿಗೆ ಹಾಕುವುದಾದರೆ ಅದನ್ನು ನಾವು “ಹಿಜಾಬ್‌ಗಾಗಿ ಹೋರಾಡಿ ಜೈಲಿಗೆ ಹೋದದ್ದು’ ಎಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ರೆಹಮತುಲ್ಲಾ, ಟಿಎನ್‌ಟಿಜೆ ಮಧುರೆ ಜಿಲ್ಲಾ ನಾಯಕ ಅಸಾನ್ ಬಾತ್‌ಶಾ ಹಾಗೂ ಉಪ ಕಾರ್ಯದರ್ಶಿ ಹಬೀಬುಲ್ಲಾ ವಿರುದ್ಧ ಐಪಿಸಿಯ 5 ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಮೂವರೂ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.