ತುಮಕೂರು ಭೀಕರ ಬಸ್ ಅಪಘಾತ : ಸಾವಿನಲ್ಲಿ ಒಂದಾದ ಅಕ್ಕ-ತಂಗಿ
ರೂಲ್ಸ್ ಬ್ರೇಕ್ ಮಾಡಿದ್ರೆ ಲೈಸೆನ್ಸ್ ರದ್ದು : ಸಿಎಂ ಎಚ್ಚರಿಕೆ
Team Udayavani, Mar 20, 2022, 12:36 PM IST
ಪಾವಗಡ : ಶನಿವಾರ ಬೆಳಿಗ್ಗೆ ಪಳವಳ್ಳಿ ಕಟ್ಟೆ ಮೇಲೆ ನಡೆದ ಭೀಕರ ಅಪಘಾತದಲ್ಲಿ ಪೋತಗಾನಹಳ್ಳಿ ಗ್ರಾಮಕ್ಕೆ ಸೇರಿದ ಅಕ್ಕ ತಂಗಿ ಇಬ್ಬರು ಮೃತ ಪಟ್ಟಿದ್ದಾರೆ.
ತಂಗಿ ಅಮೂಲ್ಯ ಬೆಳಿಗ್ಗೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು.ಅಕ್ಕ ಅರ್ಷಿತ ರಾತ್ರಿ 9ಗಂಟೆ ಸಮಯದಲ್ಲಿ ಬೆಂಗಳೂರಿನ ಅಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ತಂದೆ ಹನುಮಂತರಾಯನಿಗೆಇಬ್ಬರು ಹೆಣ್ಣು ಮಕ್ಕಳು. ಒಬ್ಬ ಗಂಡು ಮಗ ಇದ್ದರು. ಮೃತ ಪಟ್ಟಿರುವ ಅಕ್ಕ ತಂಗಿ ಪಟ್ಟಣದ ಸರ್ಕಾರಿ ಕಾಲೇಜುನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ರೂಲ್ಸ್ ಬ್ರೇಕ್ ಮಾಡಿದ್ರೆ ಲೈಸೆನ್ಸ್ ರದ್ದು
ತುಮಕೂರು ಬಸ್ ಅಪಘಾತ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಈಗಾಗಲೇ ಒವರ್ ಲೋಡ್ ಹಾಕುವುದಕ್ಕೆ ಕಾನೂನು ಇದೆ. ಆದರೂ ಸರ್ಕಾರದ ಕಣ್ಣು ತಪ್ಪಿಸಿ ಒವರ್ ಲೋಡ್ ಹಾಕುತ್ತಾರೆ. ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ನಾವು ಇನ್ನಷ್ಟು ಕಾನೂನು ಕಠಿಣ ಮಾಡುತ್ತೇವೆ. ರೂಲ್ಸ್ ಬ್ರೇಕ್ ಮಾಡಿದ್ರೆ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ, ಬಹಳ ಜನರು ಗಾಯಗೊಂಡಿದ್ದಾರೆ. ಹಾಗಾಗಿ ಸ್ವಲ್ಪ ತೊಂದರೆ ಆಗಿದೆ. ಅವಶ್ಯಕತೆ ಬಿದ್ದರೆ ಬೆಂಗಳೂರಿಗೆ ಗಾಯಳುಗಳನ್ನು ಕಳಿಸಲಾಗುತ್ತದೆ. ಅದಕ್ಕೆ ಸೂಚನೆ ಕೂಡ ನೀಡಿದ್ದೇನೆ ಎಂದು ತಿಳಿಸಿದರು.
ವೈ.ಎನ್.ಹೊಸಕೋಟೆ ಗ್ರಾಮದಲ್ಲಿ ಶನಿವಾರ ಖಾಸಗಿ ಬಸ್ ಉರುಳಿ ಸಂಭವಿಸಿದ ಅವಘಡದಲ್ಲಿ ಆರು ಜನ ಮೃತಪಟ್ಟು 30 ಜನರು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.