ಭವಾನಿ ಫೌಂಡೇಶನ್‌ ಸಮಾಜದ ಅಸಹಾಯಕರ ಆಶಾಕಿರಣ


Team Udayavani, Mar 21, 2022, 11:26 AM IST

Untitled-1

ಮುಂಬಯಿ: ತನ್ನ ತಾಯಿಯ ಕನಸಿನಂತೆ ಉದ್ಯಮಿ ಕೆ. ಡಿ. ಶೆಟ್ಟಿಯವರು ಅಸಹಾಯಕರ ಜೀವನಕ್ಕೆ ಬೆಳಕನ್ನು ನೀಡುವ ಕಾರ್ಯವನ್ನು ಭವಾನಿ ಫೌಂಡೇಶನ್‌ ಮೂಲಕ ಮಾಡುತ್ತಿರುವುದು ತಾಯಿಗೆ ಅವರು ನೀಡುತ್ತಿರುವ ಗೌರವ. ಸಂಪಾದನೆಯ ಬಹುಪಾಲನ್ನು ಅವರ ಮಾತೃಶ್ರೀ ಭವಾನಿ ಅವರ ಹೆಸರಲ್ಲಿ ನಡೆಸುತ್ತಿರುವ ಫೌಂಡೇಶನ್‌ ಮೂಲಕ ಸಮಾಜದಲ್ಲಿ ಅಗತ್ಯವಿರುವವರಿಗೆ ನೆರವು ನೀಡು ತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಸೇವಾ

ಸಂಸ್ಥೆಗಳು ಹಾಗೂ ಸರಕಾರ ಮಾಡುತ್ತಿರುವಂತಹ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ ಎಂದು ತಿಳಿದು ಸಂತೋಷವಾಗಿದೆ. ಸಂಸ್ಥೆ ರಾಷ್ಟ್ರೀಯ ಮಟ್ಟದಲ್ಲಿ  ಬೆಳೆದು ಸಮಾಜದ ಆಶಾಕಿ ರಣವಾಗಿ ಅಸಹಾಯಕರ ಬಾಳಿಗೆ ಬೆಳಕು ನೀಡಲಿ. ಈ ಸಂಸ್ಥೆಯು ಅದರ ಧ್ಯೇಯೋದ್ದೇಶವನ್ನು ಪೂರ್ಣಗೊಳಿಸಲಿದೆ ಎಂಬ ವಿಶ್ವಾಸ ನನಗಿದೆ. ನಮ್ಮೆಲ್ಲರ ಸಂಪೂರ್ಣ ಪ್ರೋತ್ಸಾಹ ಭವಾನಿ ಫೌಂಡೇಶನ್‌ಗೆ ಇದೆ ಎಂದು ಸಮಾಜ ಸೇವಕಿ ಭಾರತೀಯ ಜನತಾ ಯುವಮೋರ್ಚಾ ನಾಯಕಿ ಮೀನಾ ಎಸ್‌. ಕೇದಾರ್‌ ಹೇಳಿದ್ದಾರೆ.

ನವಿಮುಂಬಯಿ ಜೂಯಿ ನಗರದ ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಇದರ ಬಂಟ್ಸ್‌ ಸೆಂಟರ್‌ನಲ್ಲಿ  ಮಾ. 19ರಂದು ಜರಗಿದ ಭವಾನಿ ಫೌಂಡೇಶನ್‌ ಟ್ರಸ್ಟ್‌ ಮುಂಬಯಿ ಇದರ ಆರನೇ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭದಲ್ಲಿ  ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಭವಾನಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಕೆ. ಡಿ. ಶೆಟ್ಟಿ  ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಿಯ ಪ್ರೇರಣೆಯಂತೆ ಸ್ಥಾಪಿಸಿದ ಈ ಸಂಸ್ಥೆ ಇಂದು ಸಮಾಜದಲ್ಲಿ ವಿವಿಧ ರೀತಿಯಲ್ಲಿ ಅಸಹಾಯಕರಿಗೆ ಸಹಾಯ ಮಾಡುತ್ತಾ ಬಂದಿದೆ. ನಮ್ಮ ಕಾರ್ಯಕರ್ತರ ಕಾರ್ಯವು ನಮಗೆ ಆತ್ಮತೃಪ್ತಿ ನೀಡುತ್ತದೆ. ರಕ್ತದಾನ ಶಿಬಿರ, ವೈದ್ಯಕೀಯ ಸಹಾಯ, ಶೈಕ್ಷಣಿಕ ನೆರವು, ಶಾಲೆಗಳಿಗೆ ಸಹಕಾರ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆರ್ಥಿಕ ನೆರವು ಸಹಿತ ಅನೇಕ ಕ್ಷೇತ್ರಗಳಲ್ಲಿ  ಕೆಲಸ ಮಾಡುತ್ತಾ ಸಂಸ್ಥೆ ಎಲ್ಲರ ಸಂತೃಪ್ತಿಗೆ ಪಾತ್ರವಾಗಿದೆ. ಭವಾನಿ ಫೌಂಡೇಶನ್‌ನ  ಪ್ರೋತ್ಸಾಹಕರಾಗಿರುವ ತಮ್ಮೆಲ್ಲರ ಸಹಕಾರದಿಂದಾಗಿ ಇಂತಹ ಕಾರ್ಯ ಮಾಡಲು ಸಾಧ್ಯವಾಗುತ್ತಿದೆ. ಇನ್ನೊಬ್ಬರ

ಕಣ್ಣೀರು ಒರೆಸುವ ಕೆಲಸ ಮಾಡುವು ದರಿಂದ ಸಿಗುವ ಸಂತೃಪ್ತಿ ಯಾವುದೇ ಸಂಪಾದನೆಯಿಂದ ಸಿಗಲಾರದು. ತಮ್ಮ ಮಾತೃಶ್ರೀ ಅವರ ಮಾರ್ಗದರ್ಶನದಂತೆ ಈ ಸಂಸ್ಥೆಯನ್ನು ಕಟ್ಟಿ, ಸಮಾಜದಲ್ಲಿ  ಹಿಂದುಳಿದವರನ್ನು ಮುಂದೆ ತರುವುದೇ ನಮ್ಮ ಉದ್ದೇಶವಾಗಿದೆ. ಇನ್ನೂ ಅನೇಕ ಯೋಜನೆಗಳು ನಮ್ಮ ಮುಂದಿವೆ. ದೀನ – ದಲಿತರ ಸೇವೆ ಭಗವಂತನ ಸೇವೆ ಎಂದು ಪರಿಗಣಿಸಿ ನಾವು ಈ ಸಮಾಜಕ್ಕೆ ಬೆಳಕು ನೀಡುವ ಕಾರ್ಯವನ್ನು ಸದಾ ಮುಂದು ವರಿಸುತ್ತೇವೆ. ಎಲ್ಲರ ಪ್ರೋತ್ಸಾಹ ನಮಗೆ ಬೇಕಾಗಿದೆ ಎಂದರು.

ಅತಿಥಿಯಾಗಿದ್ದ ಮುಂಬಯಿ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಮಾತನಾಡಿ, ಕೆ. ಡಿ. ಶೆಟ್ಟಿಯವರು ಸಮಸ್ತ ತುಳು – ಕನ್ನಡಿಗರ ಅಭಿಮಾನದ ಮೂರ್ತಿಯಾಗಿ ಮಹಾರಾಷ್ಟ್ರ ಮಣ್ಣಿ ನಲ್ಲಿ  ಅಸಹಾಯಕರ ಬಾಳಿನಲ್ಲಿ ಜ್ಯೋತಿ ಬೆಳಗಿಸಿದರು.  ಫೌಂಡೇಶನ್‌ ಮೂಲಕ ವಿವಿಯ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೆರವು ನೀಡಿ ಅವರ ಜೀವನ ಯಶಸ್ವಿಯಾಗುವಂತೆ ಮಾಡಿರುವುದಕ್ಕೆ ನಾನು ಕೆ.ಡಿ. ಶೆಟ್ಟಿ ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದರು.

ಅತಿಥಿ ಸೇವಾಭಾವ ಟ್ರಸ್ಟಿನ ಗೀತಾ ಶೆಟ್ಟಿ  ಮಾತನಾಡಿ, ಹಣ ಹೆಚ್ಚಿನವರಲ್ಲಿರುತ್ತದೆ, ಆದರೆ ಅದನ್ನು ಮಾನವತೆಯ ಸೇವೆಗಾಗಿ ಖರ್ಚು ಮಾಡುವ ಮನೋಭಾವ ಕೆ. ಡಿ. ಶೆಟ್ಟಿ ಅವರಂಥವರಲ್ಲಿ  ಮಾತ್ರ ಇರುವುದು. ಎಲ್ಲರೂ ಕೈ ಜೋಡಿಸಿ ಯಾವುದೇ ಕಾರ್ಯ ಮಾಡಿದಾಗ ಇತಿಹಾಸ ನಿರ್ಮಿಸಬಹುದು ಎಂದರು.

ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಮಾತ ನಾಡಿ, ಸಮಾಜಸೇವೆಯಲ್ಲಿ  ತೃಪ್ತಿ ಕಂಡಿರುವ ಕೆ. ಡಿ. ಶೆಟ್ಟಿಯವರು ಭವಾನಿ ಫೌಂಡೇಶನ್‌ ಮೂಲಕ ಮಾಡುತ್ತಿರುವ ಸಮಾಜಪರ ಕಾರ್ಯಗಳು ಅಭಿನಂದನೀ ಯವಾಗಿದ್ದು, ಇದು ಮಾನವತೆಯ ಸೇವೆಯಾಗಿದೆ ಎಂದರು.

ಝೀ 24 ಇದರ ಬಿಸಿನೆಸ್‌ ವಿಭಾಗದ ಮುಖ್ಯಸ್ಥ ನೀಲೇಶ್‌ ಕಾಹರೆ ಮಾತನಾಡಿ, ಒಂದು ಸರಕಾರವು ಮಾಡುವ ಕಾರ್ಯವನ್ನು ಭವಾನಿ ಫೌಂಡೇಶನ್‌ ಮಾಡುತ್ತಿದೆ. ಈ ಸಂಸ್ಥೆ ಯ ಕಾರ್ಯವನ್ನು ಮಹಾರಾಷ್ಟ್ರ ಸರಕಾರ ಗುರುತಿಸಬೇಕಾಗಿದೆ ಎಂದರು.

ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗಣ್ಯರು ಸಮ್ಮಾನಿಸಿದರು. ಹಿರಿಯ ಸಾಹಿತಿ, ಉಪನ್ಯಾಸಕ ಡಾ| ಜಿ.ವಿ. ಕುಲ್ಕರ್ಣಿ, ಪತ್ರಕರ್ತ ಚಂದ್ರಶೇಖರ್‌ ಪಾಲೆತ್ತಾಡಿ, ಉಡುಪಿ ಜಿಲ್ಲೆಯ ಸಮಾಜ ಸೇವಕ ವಿಶ್ವ ಶೆಟ್ಟಿ, ಸಮಾಜಸೇವಕರಾದ ಶೈಲೇಶ್‌ ಗುಪ್ತ, ದೀಪಕ್‌ ವಿಶ್ವಕರ್ಮ, ಕ್ರಿಕೆಟ್‌ ರಂಗದಲ್ಲಿ  ಸಾಧನೆ ಮಾಡಿದ ದಿಯಾ ನವೀನ್‌ ಇನ್ನ ಅವರನ್ನು ಸಮ್ಮಾನಿಸಲಾಯಿತು.

ಡಾ| ಜಿ. ವಿ. ಕುಲಕರ್ಣಿಯವರು ಸಮ್ಮಾನಕ್ಕೆ ಉತ್ತರಿಸಿ, ತಾಯಿಯೆಂದರೆ ದೇವರಿಗೆ ಸಮಾನ. ತಂದೆ- ತಾಯಿ ಆಶೀರ್ವಾದವಿದ್ದರೆ ಅದಕ್ಕಿಂತ ದೊಡ್ಡ ಶಕ್ತಿ ಇನ್ನೊಂದು ಇರುವುದಿಲ್ಲ. ಕೆ.ಡಿ. ಶೆಟ್ಟಿಯವರು ಮಾತೃಶ್ರೀ

ಅವರ ಆಶೀರ್ವಾದದೊಂದಿಗೆ ಸಮಾಜ ಸೇವಾ ಸಂಸ್ಥೆಯನ್ನು ಕಟ್ಟಿ ಆ ಮೂಲಕ ಅದೆಷ್ಟೋ ಬಡವರಿಗೆ ಆಶಾಕಿರಣ ವಾಗಿರುವುದು ಜೀವನದ ಸಾರ್ಥಕತೆ ಯಾಗಿದೆ.ಇಂದು ಅವರು ನನ್ನ ಮೇಲೆ ಗೌರವ, ಪ್ರೀತಿ ತೋರಿಸಿ ಸಮ್ಮಾನಿಸಿ ರುವುದನ್ನು ಸಂತೋಷದಿಂದ ಸ್ವೀಕರಿ ಸುತ್ತೇನೆ ಎಂದರು.

ಹಿರಿಯ ಪತ್ರಕರ್ತ ಚಂದ್ರಶೇಖರ್‌ ಪಾಲೆತ್ತಾಡಿ ಮಾತನಾಡಿ, ಮುಂಬಯಿ ಮಹಾನಗರದಲ್ಲಿ  ಕನ್ನಡಪರ ಸಂಘ – ಸಂಸ್ಥೆಗಳು ನಿರಂತರವಾಗಿ ಸಮಾಜದ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತಿರು ವುದು ಅಭಿನಂದನೀಯ. ಭವಾನಿ ಫೌಂಡೇಶನ್‌ ಮಾಡುತ್ತಿರುವ ಕೆಲಸ ನಮಗೆಲ್ಲರಿಗೂ ಹೆಮ್ಮೆ ತಂದಿದೆ ಎಂದು ತಿಳಿಸಿದರು.

ದಿಯಾ ನವೀನ್‌ ಇನ್ನ ಮಾತನಾಡಿ, ಇಂದು ನನಗೆ ದೊರೆತ ಗೌರವ ನನ್ನ ಮುಂದಿನ ಕ್ರೀಡಾ ಜೀವನಕ್ಕೆ  ನೀಡಿದ ಪ್ರೋತ್ಸಾಹ ಆಗಿದೆ. ಇದಕ್ಕೆ ನಾನು ಕೆ. ಡಿ. ಶೆಟ್ಟಿ ಹಾಗೂ ಭವಾನಿ ಫೌಂಡೇಶನ್‌ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಭವಾನಿ ಫೌಂಡೇಶನ್‌ನ ವಿಶ್ವಸ್ತರಾದ ಸರಿತಾ ಕೆ. ಶೆಟ್ಟಿ ಉಪಸ್ಥಿತರಿದ್ದರು. ಅತಿಥಿಗಳನ್ನು ಕೆ.ಡಿ. ಶೆಟ್ಟಿ, ದೀಕ್ಷಿತ್‌ ಶೆಟ್ಟಿ, ಸರಿತಾ ಕೆ. ಶೆಟ್ಟಿ, ಪದಾಧಿಕಾರಿಗಳಾದ ದಿನೇಶ್‌ ಶೆಟ್ಟಿ ಕರ್ನೂರು ಮೋಹನ್‌ ರೈ, ನವೀನ್‌ ಶೆಟ್ಟಿ, ರವಿ ಉಚ್ಚಿಲ, ಸಮಿತಿ ಸದಸ್ಯರಾದ ಧರ್ಮಪಾಲ ದೇವಾಡಿಗ, ಈಶ್ವರ ಐಲ್‌ ಮೊದಲಾದವರಿಗೆ ಹೂಗುತ್ಛ ನೀಡಿ ಗೌರವಿಸಲಾಯಿತು. ಸಮಿತಿ ಸದಸ್ಯರಾದ ನವೀನ್‌ಚಂದ್ರ ಆರ್‌. ಸನಿಲ್‌, ಮುರಳೀಧರ್‌ ವಿಟuಲ್‌ ಜಿತೇಂದ್ರ ಠಾಕೂರ್‌ ಮತ್ತಿತರರಿದ್ದರು. ಶಿಲ್ಪಾ  ಮಾಧವ್‌ ಹಾಗೂ ಶ್ರದ್ಧಾ ಬಂಗೇರ ಪ್ರಾರ್ಥನೆಗೈದರು.

ರವಿ ಉಚ್ಚಿಲ ವಂದಿಸಿದರು. ರಾಜಿ ಹಾಗೂ ರಂಜನಾ ಮತ್ತು ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರೂಪಿಸಿದರು.

ಎಲ್ಲರ ಸಹಕಾರದಿಂದ ಭವಾನಿ ಫೌಂಡೇಶನ್‌ ಇಂತಹ ಜನಪರ ಕಾರ್ಯ ಮಾಡಲು ಸಾಧ್ಯವಾಗುತ್ತದೆ. ಸಂಸ್ಥೆಗೆ ತಮ್ಮ ದೇಣಿಗೆ ನೀಡುವುದರೊಂದಿಗೆ ರಕ್ತದಾನ ಮಾಡುವ ಸದಸ್ಯರು ಭವಾನಿ ಫೌಂಡೇಶನ್‌ನಲ್ಲಿ ಇ¨ªಾರೆ. ಕೊರೊನಾ ಸಮಯದಲ್ಲಿ ಅದೆಷ್ಟೋ ಕುಟುಂಬಗಳಿಗೆ ದೈನಂದಿನ ಆಹಾರ ಸಾಮಗ್ರಿ ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆ ಮೂಡಿಸುವ ಕೆಲಸ ಮಾಡಿದ್ದಾರೆ. ನಮ್ಮ ಸಂಸ್ಥೆಯ ಸಂಸ್ಥಾಪಕರಾದ ನನ್ನ ಪೂಜ್ಯ ಪಿತರಾದ ಕೆ. ಡಿ. ಶೆಟ್ಟಿಯವರ ಮಾರ್ಗದರ್ಶನ, ನಿರ್ದೇಶನದಿಂದ ಇಂತಹ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ. ಇನ್ನು ಮುಂದೆಯೂ ಈ ಸಂಸ್ಥೆ ಮೂಲಕ ಜನಸೇವೆಯ ಕಾರ್ಯಗಳನ್ನು ಕೈಗೊಳ್ಳಲಿದ್ದು, ಅದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹದ ಅಗತ್ಯವಿದೆ.ಜೀಕ್ಷಿತ್‌ ಕೆ. ಶೆಟ್ಟಿ, ಅಧ್ಯಕ್ಷರು, ಭವಾನಿ ಫೌಂಡೇಶನ್‌

ಇಂದಿನ ಕಾರ್ಯಕ್ರಮದಲ್ಲಿ ಸಮಾಜದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಾನ್ಯರನ್ನು ಗುರುತಿಸಿ ಗೌರವಿಸುವ ಮೂಲಕ ಭವಾನಿ ಫೌಂಡೇಶನ್‌ ಸಮಾಜಸೇವೆಯೊಂದಿಗೆ ಸಾಧಕರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಅಭಿನಂದನೀಯವಾಗಿದೆ.ಮುರಳಿ ಕೆ. ಶೆಟ್ಟಿ, ಅಧ್ಯಕ್ಷರು, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌

ಚಿತ್ರ-ವರದಿ: ಸುಭಾಷ್‌ ಶಿರಿಯ

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-

ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

ಹೊಯ್ಸಳ ಕನ್ನಡ ಸಂಘ: ವಿದೇಶದಲ್ಲಿ ಕಣ್ಮನ ಸೆಳೆದ ಗದಾಯುದ್ಧ ಯಕ್ಷಗಾನ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

Desi Swara: ಟ್ಯಾಂಪಾ ಸಾಂಸ್ಕೃತಿಕ ವೇದಿಕೆ – ಹರಿಕಥೆ ಆಯೋಜನೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

ಕ್ಲೀವ್‌ ಲ್ಯಾಂಡ್‌: 40ನೇ ಬೆಳಕಿನ ಕನ್ನಡೋತ್ಸವ, ಹಾಸ್ಯ ಹೊನಲು, ಸಂಗೀತ ಸುಧೆ

Baharain1

ಮೊಗವೀರ್ಸ್‌ ಬಹ್ರೈನ್‌ ಪ್ರೊ ಕಬಡ್ಡಿ;ತುಳುನಾಡ್‌ ತಂಡ ಪ್ರಥಮ,ಪುನಿತ್‌ ಬೆಸ್ಟ್‌ All ರೌಂಡರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.